Site icon Vistara News

IND vs SL 2nd ODI: ಇಂದು ಭಾರತ-ಲಂಕಾ ದ್ವಿತೀಯ ಏಕದಿನ ಮುಖಾಮುಖಿ; ಪಂದ್ಯಕ್ಕೆ ಮಳೆ ಭೀತಿ

IND vs SL 2nd ODI:

IND vs SL 2nd ODI: Will rain spoil Rohit and Co’s comeback bid in Colombo? Check full weather report

ಕೊಲಂಬೊ: ಅಪಾಯಕಾರಿ ಶ್ರೀಲಂಕಾ(Sri Lanka vs India) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗೆಲುವಿನಂಚಿನವರೆಗೂ ಬಂದು ಪಂದ್ಯವನ್ನು ಟೈ ಮಾಡಿಕೊಂಡು ಸೋಲಿನಿಂದ ಪಾರಾದ ಭಾರತ ತಂಡ ಇದೀಗ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಇಂದು ನಡೆಯುವ ದ್ವಿತೀಯ ಏಕದಿನಲ್ಲಿIND vs SL 2nd ODI) ಕಣಕ್ಕಿಳಿಯಲಿದೆ. ಆದರೆ ಪಂದ್ಯಕ್ಕೆ ಮಳೆ ಭೀತಿಯೂ ಎದುರಾಗಿದೆ.

ಹವಾಮಾನ ವರದಿ


ಕೊಲಂಬೊದಲ್ಲಿ(Colombo weather report) ಶನಿವಾರ ಸಂಜೆಯ ವೇಳೆ ಭಾರೀ ಮಳೆಯಾಗಿತ್ತು. ಹೀಗಾಗಿ ಭಾನುವಾರವೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ. ಹಗಲು ರಾತ್ರಿಯ ಪಂದ್ಯವಾದ ಕಾರಣ ದ್ವಿತೀಯ ಇನಿಂಗ್ಸ್​ವೇಳೆ ಮಳೆಯಾಗುವ ಸಾಧ್ಯತೆ ಅಧಿಕ. ಶೇ. 89 ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಸ್ಪಿನ್​ ಟ್ರ್ಯಾಕ್​ನಲ್ಲಿ ಪರದಾಡಿದ ಭಾರತೀಯ ಬ್ಯಾಟರ್​ಗಳು ಈ ಪಂದ್ಯದಲ್ಲಿ ಮೈ ಚಳಿ ಬಿಟ್ಟು ಬ್ಯಾಟ್​ ಬೀಸಬೇಕಿದೆ. ನಾಯಕ ರೋಹಿತ್​ ಶರ್ಮ ಹೊರತುಪಡಿಸಿ ತಂಡದಲ್ಲಿರುವ ಉಳಿದ ಸ್ಟಾರ್​ ಆಟಗಾರರು ಕಳೆದ ಪಂದ್ಯದಲ್ಲಿ ಕ್ರಿಕೆಟ್ ಜೋಶ್​ ತೋರುವಲ್ಲಿ ವಿಫಲರಾಗಿದ್ದರು. ಶ್ರೀಲಂಕಾ ತಂಡದಲ್ಲಿ ಅನುಭವಿ ಆಟಗಾರರು ಇರದೇ ಇದ್ದರೂ ಕೂಡ ಯುವ ಆಟಗಾರರು ಯಾರು ಊಹಿಸದ ರೀತಿಯಲ್ಲಿ ಪ್ರದರ್ಶನ ತೋರುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಇವರ ಸವಾಲನ್ನು ಭಾರತ ಕಡೆಗಣಿಸಬಾರದು.

ಆರ್ ಪ್ರೇಮದಾಸ ಕ್ರೀಡಾಂಗಣದ ಪಿಚ್ ವರದಿ

ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಇದುವರೆಗೆ 150 ಏಕದಿನ ಪಂದ್ಯಗಳು ನಡೆದಿವೆ. ಈ ಸ್ಥಳದಲ್ಲಿ ಮೊದಲು ಬ್ಯಾಟಿಂಗ್ ಮಾಡುವುದು ಹೆಚ್ಚು ಅನುಕೂಲಕರ. ಮೊದಲು ಬ್ಯಾಟಿಂಗ್ ಮಾಡುವ ತಂಡಗಳು 80 ಪಂದ್ಯಗಳನ್ನು ಗೆದ್ದಿದ್ದರೆ, ಚೇಸಿಂಗ್ ತಂಡಗಳು ಕೇವಲ 59 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಮೊದಲ ಪಂದ್ಯದಲ್ಲಿ ಸ್ಪಿನ್ನರ್​ಗಳು ಪ್ರಭಾವ ಬೀರಿದ್ದರು. ಎರಡನೇ ಏಕದಿನ ಪಂದ್ಯದಲ್ಲಿ ಹೆಚ್ಚಿನದನ್ನು ನಿರೀಕ್ಷಿಸಲಾಗಿದೆ. ಪಂದ್ಯ ಮುಂದುವರಿದಂತೆ ಬ್ಯಾಟಿಂಗ್ ಕಠಿಣವಾಗುತ್ತದೆ. ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಮಾಡಲು ಒಲವು ತೋರುತ್ತಾನೆ.

ಸಂಭಾವ್ಯ ತಂಡಗಳು


ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಕುಸಲ್ ಮೆಂಡಿಸ್ (ವಿಕೀ), ಸದೀರ ಸಮರವಿಕ್ರಮ, ಚರಿತ್ ಅಸಲಂಕ (ನಾಯಕ), ಜನಿತ್ ಲಿಯಾನಗೆ, ವನಿಂದು ಹಸರಂಗ, ದುನಿತ್ ವೆಲ್ಲಲಾಗೆ, ಅಕಿಲ ದನಂಜಯ, ಅಸಿತ ಫೆರ್ನಾಂಡೋ, ಮೊಹಮ್ಮದ್ ಶಿರಾಜ್.

ಇದನ್ನೂ ಓದಿ IND vs SL ODI : ಶ್ರೀಲಂಕಾ ವಿರುದ್ಧ ಭಾನುವಾರ ಎರಡನೇ ಪಂದ್ಯ; ಮತ್ತೊಂದು ಥ್ರಿಲ್ಲರ್ ನಿರೀಕ್ಷೆ

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೀ), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

ಪಂದ್ಯದ ವಿವರಗಳು

ಮುಖಾಮುಖಿ ದಾಖಲೆಗಳು

Exit mobile version