ಕೋಲ್ಕೊತಾ: ಶ್ರೀಲಂಕಾ(IND VS SL) ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್ಗಳ ಅಂತರದಿಂದ ಗೆದ್ದು ಬೀಗಿದೆ. ಈ ಗೆಲುವಿನೊಂದಿಗೆ ಭಾರತ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು 2-0 ಅಂತರದಿಂದ ಕೈವಶ ಮಾಡಿಕೊಂಡಿದೆ. ಆದರೆ ಈ ಪಂದ್ಯದಲ್ಲಿ ಅಕ್ಷರ್ ಪಟೇಲ್ ಹಿಡಿದ ಕ್ಯಾಚ್ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈಡನ್ ಗಾರ್ಡನ್ಸ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಗುರುವಾರ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 39.4 ಓವರ್ಗಳಲ್ಲಿ 215 ರನ್ಗಳಿಗೆ ಆಲ್ಔಟ್ ಆಯಿತು. ಗುರಿ ಬೆನ್ನಟ್ಟಿದ ಭಾರತ ತಂಡ 43. ಓವರ್ಗಳಲ್ಲಿ 6 ವಿಕೆಟ್ಗೆ 219 ರನ್ ಬಾರಿಸಿ ಗೆಲುವು ಕಂಡಿತು.
ಶ್ರೀಲಂಕಾದ ಬ್ಯಾಟಿಂಗ್ ಇನಿಂಗ್ಸ್ನ 34ನೇ ಓವರ್ನಲ್ಲಿ ಉಮ್ರಾನ್ ಮಲಿಕ್ ಎಸೆದ ಎಸೆತಕ್ಕೆ ಕರುಣರತ್ನೆ ಸ್ಕ್ವೇರ್ ಲೆಗ್ ಮೂಲಕ ಮೂಲಕ ಬೌಂಡರಿ ಬಾರಿಸಲು ಯತ್ನಿಸಿದರು. ಇದೇ ಭಾಗದಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ಅಕ್ಷರ್ ಪಟೇಲ್ ಜಿರತೆಯ ವೇಗದಲ್ಲಿ ಜಿಗಿಯುವ ಮೂಲಕ ಅದ್ಭುತವಾಗಿ ಕ್ಯಾಚ್ ಹಿಡಿದರು.
ಅಕ್ಷರ್ ಪಟೇಲ್ ಹಿಡಿದ ಈ ಕ್ಯಾಚ್ನ ವಿಡಿಯೊವನ್ನು ಶೇರ್ ಮಾಡಿರುವ ಬಿಸಿಸಿಐ “ಶಾರ್ಪ್ ಕ್ಯಾಚ್ ಅಲರ್ಟ್” ಎಂದು ಶೀರ್ಷಿಕೆ ನೀಡಿದೆ. ಅಕ್ಷರ್ ಅವರ ಈ ಕ್ಯಾಚ್ ವಿಡಿಯೊ ಎಲ್ಲಡೆ ವೈರಲ್ ಆಗಿದೆ.
ಇದನ್ನೂ ಓದಿ | INDvsNZ | ಭಾರತ ಪ್ರವಾಸದ ಟಿ20 ಸರಣಿಗೆ ನ್ಯೂಜಿಲ್ಯಾಂಡ್ ತಂಡ ಪ್ರಕಟ, ಸ್ಯಾಂಟ್ನರ್ಗೆ ನಾಯಕತ್ವ