ರಾಜ್ಕೋಟ್: ಶ್ರೀಲಂಕಾ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ದುಬಾರಿಯಾಗಿದ್ದ ಅರ್ಶ್ದೀಪ್ ಸಿಂಗ್ ಅವರನ್ನು ಅಂತಿಮ ಟಿ20 ಪಂದ್ಯದಿಂದ(IND VS SL) ಕೈಬಿಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಅವರ ಬದಲು ಮುಕೇಶ್ ಕುಮಾರ್ ಆಡುವ ಬಳಗ ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಕೋಟ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಒಂದೊಮ್ಮೆ ಮುಕೇಶ್ ಕುಮಾರ್ಗೆ ಆಡುವ ಅವಕಾಶ ಸಿಕ್ಕರೆ ಅವರಿಗೆ ಇದು ಪದಾರ್ಪಣ ಪಂದ್ಯವಾಗಲಿದೆ. ಅರ್ಶ್ದೀಪ್ ಸಿಂಗ್ ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ಸಹಿತ ಒಟ್ಟು 5 ನೋಬಾಲ್ ಎಸೆದು ಪಂದ್ಯದ ಸೋಲಿಗೆ ಕಾರಣವಾಗಿದ್ದರು.
ಅಂತಿಮ ಪಂದ್ಯದಲ್ಲಿ ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳುವ ಯೋಜನೆಯಲ್ಲಿರುವ ಭಾರತ, ಆಡುವ ಬಳಗದಲ್ಲಿ ಕೆಲ ಬದಲಾವಣೆ ಮಾಡಲು ಸಿದ್ಧವಾದಂತಿದೆ. ಆದ್ದರಿಂದ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಅರ್ಶ್ದೀಪ್ ಅವರನ್ನು ಅಂತಿಮ ಪಂದ್ಯದಿಂದ ಕೈಬಿಡಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ ಎನ್ನಲಾಗಿದೆ.
ಇನ್ನೊಂದು ಮೂಲಗಳ ಪ್ರಕಾರ ರಾಜ್ಕೋಟ್ನ ಪಿಚ್ ಹೆಚ್ಚಾಗಿ ಸ್ಪಿನ್ ಬೌಲರ್ಗಳಿಗೆ ನೆರವು ನೀಡುವ ಕಾರಣದಿಂದ ಹೆಚ್ಚುವರಿ ಸ್ಪಿನ್ನರ್ ಆಗಿ ವಾಷಿಂಗ್ಟನ್ ಸುಂದರ್ಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ. ಒಟ್ಟಾರೆ ಅರ್ಶ್ದೀಪ್ ಸಿಂಗ್ ಅವರನ್ನು ಈ ಪಂದ್ಯದಿಂದ ಕೈಬಿಡುವ ಸಾಧ್ಯತೆ ಹೆಚ್ಚು ಎಂದು ಮ್ಯಾನೇಜ್ಮೆಂಟ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ | INDvsSL | ರಾಜ್ಕೋಟ್ನಲ್ಲಿ ಟಾಸ್ ಗೆದ್ದರೆ ಬ್ಯಾಟಿಂಗ್, ಫೀಲ್ಡಿಂಗ್ನಲ್ಲಿ ಯಾವ ಆಯ್ಕೆ ಉತ್ತಮ?