ಕೊಲಂಬೊ: ಶ್ರೀಲಂಕಾ(IND vs SL) ವಿರುದ್ಧ ಮಂಗಳವಾರ ನಡೆದ ಏಷ್ಯಾಕಪ್ನ ಸೂಪರ್-4(Super Fours) ಪಂದ್ಯದಲ್ಲಿ ಭಾರತ ತಂಡ 41 ರನ್ನುಗಳಿಂದ ಗೆದ್ದು ಏಷ್ಯಾ ಕಪ್(Asia Cup 2023) ಫೈನಲ್ ಪ್ರವೇಶಿಸಿದೆ. ಆದರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್(Gautam Gambhir) ಮಾತ್ರ ಭಾರತದ ಪ್ರದರ್ಶನವನ್ನು ಟೀಕಿಸಿದ್ದಾರೆ.
ಒಂದಲ್ಲ ಒಂದು ವಿಚಾರದಲ್ಲಿ ಭಾರತ ತಂಡವನ್ನು ಗುರಿಯಾಗಿರಿಸಿ ಟೀಕಿಸುತ್ತಿರುವ ಗೌತಮ್ ಗಂಭೀರ್, ಈ ಬಾರಿ ಬ್ಯಾಟಿಂಗ್ ಕುರಿತು ಮಾತನಾಡಿದ್ದಾರೆ. ಏಕದಿನ ಇತಿಹಾಸದಲ್ಲಿ ಸ್ಪಿನ್ನರ್‌ಗಳೇ ಸೇರಿಕೊಂಡು ಭಾರತದ ವಿರುದ್ಧ ತಂಡವೊಂದು 10 ವಿಕೆಟ್ ಕಡೆವಿದ್ದು ಇದೇ ಮೊದಲು. ಈ ಕಳಪೆ ಪ್ರದರ್ಶನಕ್ಕೆ ಗಂಭೀರ್ ಆಟಗಾರರ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೂಡ ಆಟಗಾರರು ಬುದ್ಧಿ ಕಲಿಯಲಿಲ್ಲ ಎಂದು ಹೇಳಿದ್ದಾರೆ.
ವಿಶ್ವಕಪ್ಗೂ ಮುನ್ನ ಸಮಸ್ಯೆ ಸರಿಪಡಿಸಿ
ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ತವರಿನ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಸ್ಪಿನ್ ದಾಳಿಯನ್ನು ಎದುರಿಸಲು ಸಂಪೂರ್ಣ ವಿಫಲರಾಗಿದ್ದರು. ಹಿಂದೊಂದು ಕಾಲವಿತ್ತು. ಭಾರತ ತಂಡದ ಆಟಗಾರರು ಎಂತಹ ದಿಗ್ಗಜ ಸ್ಪಿನ್ನ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದರು. ಆದರೆ ಈಗ ಇರುವ ಭಾರತ ತಂಡದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಸೇರಿ ಹಲವರು ಸ್ಪಿನ್ನರ್ಗಳಿ ಹೆಚ್ಚು ವಿಕೆಟ್ ಒಪ್ಪಿಸುತ್ತಿದ್ದಾರೆ. ಇದಕ್ಕೆ ಹಲವು ದಾಖಲೆಗಳು ಕೂಡ ಇದೆ. ವಿಶ್ವಕಪ್ ಭಾರತದಲ್ಲೇ ನಡೆಯುತ್ತಿರುವ ಕಾರಣ ಇನ್ನಾದರು ಸ್ಪಿನ್ ದಾಳಿಗೆ ಸಮರ್ಥವಾಗಿ ಬ್ಯಾಟಿಂಗ್ ನಡೆಸದೇ ಹೋದರೆ ಕೈ ಸುಟ್ಟುಕೊಳ್ಳುವುದು ಗ್ಯಾರಂಟಿ ಎಂದು ಗಂಭೀರ್ ಹೇಳಿದ್ದಾರೆ.
ಇದನ್ನೂ ಓದಿ IND vs SL : ಶ್ರೀಲಂಕಾ ವಿರುದ್ಧ ಭಾರತಕ್ಕೆ 41 ರನ್ಗಳ ಭರ್ಜರಿ ಜಯ, ಏಷ್ಯಾ ಕಪ್ ಫೈನಲ್ಗೆ ಪ್ರವೇಶ
ಕೆಟ್ಟ ದಾಖಲೆ ಬರೆದ ಭಾರತ
1997ರ ಕೊಲಂಬೊ ಪಂದ್ಯದಲ್ಲಿ ಶ್ರೀಲಂಕಾದ ಸಿನ್ನರ್‌ಗಳು ಭಾರತದ 9 ವಿಕೆಟ್ ಕೆಡವಿದ್ದು ಭಾರತದೆದುರಿನ ಈವರೆಗಿನ ಉತ್ತಮ ಸಾಧನೆಯಾಗಿತ್ತು. ಆದರೆ ಮಂಗಳವಾರ 10 ವಿಕೆಟ್ ಕೂಡ ಸ್ಪಿನ್ನ್ಗೆ ಒಪ್ಪಿಸಿ ಭಾರತ ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಬರೆಯಿತು. ಅದು ಕೂಡ ಅನಾನುಭವಿ ಸ್ಪಿನ್ನರ್ಗಳಿಗೆ ವಿಕೆಟ್ ಒಪ್ಪಿಸಿದ್ದು ಹಲವು ಮಾಜಿ ಆಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.
ವೆಲ್ಲಲಗೆ ಸ್ಪಿನ್ ಜಾದು
ಭಾರತ ಕುಸಿತಕ್ಕೆ ಕಾರಣರಾದವರು ದುನಿತ್ ವೆಲ್ಲಲಗೆ. ಅವರು 40 ರನ್ನಿಗೆ 5 ವಿಕೆಟ್ ಉರುಳಿಸಿ ಮೆರೆದಾಡಿದರು. ಬ್ಯಾಟಿಂಗ್ನಲ್ಲಿಯೂ ಮಿಂಚಿದ ಅವರು ಅಜೇಯ 42 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಉಳಿದಂತೆ ಬಲಗೈ ಸ್ಪಿನ್ನರ್ ಚರಿತ ಅಸಲಂಕ 4 ವಿಕೆಟ್, ಕೊನೆಯ ವಿಕೆಟ್ ಮತೀಶ ತೀಕ್ಷಣ ಉರುಳಿಸಿದರು. ಲಂಕಾದ ಸ್ಪಿನ್ನರ್ ಎದುರಾಳಿ ತಂಡದ ಎಲ್ಲ ವಿಕೆಟ್‌ಗಳನ್ನು ಉರುಳಿಸಿದ 2ನೇ ನಿದರ್ಶನ ಇದಾಗಿದೆ. ಇದಕ್ಕೂ ಮುನ್ನ 2011ರಲ್ಲಿ ಇದೇ ಮೈದಾನದಲ್ಲಿ ಜಿಂಬಾಬ್ವೆ ತಂಡದ ಎಲ್ಲ 10 ವಿಕೆಟ್‌ಗಳನ್ನು ಕೆಡವಿದ್ದರು.