ತಿರುವನಂತಪುರ: ಭಾರತ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಶ್ರೀಲಂಕಾದ(IND VS SL) ಫೀಲ್ಡರ್‌ಗಳಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚೆಂಡನ್ನು ತಡೆಯುವ ಯತ್ನದಲ್ಲಿ ಡಿಕ್ಕಿ ಹೊಡೆದು ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ.
ಭಾರತದ ಬ್ಯಾಟಿಂಗ್ ಇನಿಂಗ್ಸ್ನ 43ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ವಿರಾಟ್ ಕೊಹ್ಲಿ ಬಾರಿಸಿದ ಈ ಚೆಂಡನ್ನು ತಡೆಯಲು ಲಂಕಾ ಆಟಗಾರ ಜೆಫ್ರಿ ವಾಂಡರ್ಸೆ ಎಡಭಾಗದಿಂದ ಓಡಿ ಬಂದರೆ, ಅಶೆನ್ ಬಂಡಾರ ಕೂಡ ಚೆಂಡನ್ನು ತಡೆಯಲು ಇನ್ನೊಂದು ಬದಿಯಿಂದ ಓಡಿ ಬಂದರು. ಇದೇ ವೇಳೆ ನಿಯಂತ್ರಣ ಕಳೆದುಕೊಂಡು ಒಬ್ಬರಿಗೊಬ್ಬರು ಡಿಕ್ಕಿ ಹೊಡೆದಿದ್ದಾರೆ. ಅವಘಡದಲ್ಲಿ ಉಭಯ ಆಟಗಾರರು ಗಂಭೀರ ಗಾಯಗೊಂಡಂತೆ ಕಂಡುಬಂದಿದೆ.
ಗಾಯಗೊಂಡು ಮೈದಾನದಲ್ಲೇ ನರಳಾಡುತ್ತಿದ್ದ ಆಟಗಾರರ ಚಿಕಿತ್ಸೆಗೆ ತಕ್ಷಣ ಶ್ರೀಲಂಕಾದ ಫಿಸಿಯೋ ಓಡಿ ಬಂದು ಈ ಇಬ್ಬರನ್ನು ಪರೀಕ್ಷಿಸಿದರು. ಇದೇ ವೇಳೆ ಭಾರತ ತಂಡದ ವೈದ್ಯಕೀಯ ಸಿಬ್ಬಂದಿ ಕೂಡ ಮೈದಾನ ತಲುಪಿ ಇಬ್ಬರು ಆಟಗಾರರ ನೆರವಿಗೆ ನಿಂತರು. ಬಳಿಕ ಉಭಯ ಆಟಗಾರರನ್ನು ಸ್ಟ್ರೆಚರ್‌ಗಳ ಮೂಲಕ ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಲಾಯಿತು. ಈ ಆಟಗಾರರಿಬ್ಬರು ಭಾರತ ವಿರುದ್ಧದ ಸರಣಿಯಲ್ಲಿ ಮೊದಲ ಬಾರಿ ಆಡುವ ಅವಕಾಶ ಪಡೆದಿದ್ದರು.
ಇದನ್ನೂ ಓದಿ | INDvsSL ODI | ಗಿಲ್, ಕೊಹ್ಲಿ ಶತಕದ ಅಬ್ಬರ; ಲಂಕಾ ವಿರುದ್ಧ 390 ರನ್ಗಳ ಶಿಖರ ನಿರ್ಮಿಸಿದ ಭಾರತ ತಂಡ