ಮುಂಬಯಿ: ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ(IND VS SL) ವಿಕೆಟ್ ಕೀಪರ್ ಇಶಾನ್ ಕಿಶನ್ ಹಿಡಿದ ಒಂದು ಕ್ಯಾಚ್ ಇಡೀ ಪಂದ್ಯದ ಸಖತ್ ಹೈಲೆಟ್ ಆಗಿತ್ತು. ಲಂಕಾ ಇನಿಂಗ್ಸ್ನ 8ನೇ ಓವರ್ನಲ್ಲಿ ಚರಿತ ಅಸಲಂಕಾ ಹೊಡೆದ ಚೆಂಡನ್ನು ಇಶಾನ್ ಕಿಶನ್ ಮಿಂಚಿನ ವೇಗದಲ್ಲಿ ಚಿರತೆಯಂತೆ ಎಗರಿ ಅದ್ಭುತ ಕ್ಯಾಚ್ ಪಡೆದರು. ಇದೀಗ ಕಿಶನ್ ಅವರ ಈ ಅದ್ಭುತ ಕ್ಯಾಚ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಮ್ರಾನ್ ಮಲಿಕ್ ಎಸೆದ ಓವರ್ನಲ್ಲಿ ಚರಿತ ಅಸಲಂಕಾ ಚೆಂಡನ್ನು ಫೈನ್ ಲೆಗ್ ಕಡೆಗೆ ಹೊಡೆದರು. ಡೀಪ್ನಲ್ಲಿ ನಿಂತಿದ್ದ ಹರ್ಷಲ್ ಪಟೇಲ್ ಕ್ಯಾಚ್ ಹಿಡಿಯಲು ಮುಂದಾದರು. ಆದರೆ ಕ್ಯಾಚ್ ತೆಗೆದುಕೊಳ್ಳಲು ಓಡಿದ ಇಶಾನ್ ಕಿಶನ್, ಪಟೇಲ್ಗೆ ಕೈಸನ್ನೆಯಲ್ಲಿ ಇದು ನನ್ನ ಕ್ಯಾಚ್ ಎಂದು ಹೇಳುತ್ತಾ, ಚಿರತೆಯಂತೆ ಗಾಳಿಯಲ್ಲಿ ಎಗರಿ ಚೆಂಡನ್ನು ಹಿಡಿದು ಚರಿತ ಅಸಲಂಕಾಗೆ ಪೆವಿಲಿಯನ್ ದಾರಿ ತೋರಿಸಿದರು.
ಇಶಾನ್ ಕಿಶನ್ ಈ ಅದ್ಭುತ ಕ್ಯಾಚ್ ಪಡೆಯುತ್ತಿದ್ದಂತೆ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಟ್ವೀಟ್ ಮೂಲಕ ಇತ್ತೀಚಿನ ದಿನಗಳಲ್ಲಿ ವಿಕೆಟ್ ಕೀಪರ್ ಹಿಡಿದ ಅತ್ಯುತ್ತಮ ಕ್ಯಾಚ್ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ಭಾರತ 2 ರನ್ಗಳ ರೋಚಕ ಗೆಲುವು ಸಾಧಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.
ಇದನ್ನೂ ಓದಿ | IND VS SL | ವೇಗದ ಬೌಲಿಂಗ್ ನಡೆಸಿ ಬುಮ್ರಾ ದಾಖಲೆ ಮುರಿದ ಜಮ್ಮು ಎಕ್ಸ್ಪ್ರೆಸ್ ಖ್ಯಾತಿಯ ಉಮ್ರಾನ್ ಮಲಿಕ್