ಗುವಾಹಟಿ: ಶ್ರೀಲಂಕಾ(IND VS SL) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ(113) ಶತಕ ಬಾರಿಸುವ ಜತೆಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಮುರಿದಿದ್ದಾರೆ.
ಗುವಾಹಟಿಯ ಬರ್ಸಾಪರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸುವ ಮೂಲಕ ಲಂಕಾ ವಿರುದ್ಧ ಅತ್ಯಧಿಕ ಶತಕ ಬಾರಿಸಿದ ಸಚಿನ್ ಅವರ ದಾಖಲೆಯನ್ನು ಮುರಿದಿದ್ದಾರೆ. ಸಚಿನ್ ಅವರು ಏಕದಿನ ಮಾದರಿಯಲ್ಲಿ ಶ್ರೀಲಂಕಾ ವಿರುದ್ಧ ಒಟ್ಟು 8 ಶತಕಗಳನ್ನು ಗಳಿಸಿದ್ದರು. ಇದೀಗ ವಿರಾಟ್ ಕೊಹ್ಲಿ 9 ಶತಕಗಳ ಮೂಲಕ ಸಚಿನ್ ಅವರನ್ನು ಹಿಂದಿಕ್ಕಿದ್ದಾರೆ.
ಆದರೆ ಏಕೈಕ ಎದುರಾಳಿಯ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆ ಬೇರೆಯಿದೆ. ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಕ್ರಮವಾಗಿ ತೆಂಡೂಲ್ಕರ್ ಮತ್ತು ಕೊಹ್ಲಿ ತಲಾ 9 ಶತಕ ಸಿಡಿಸಿ ಜಂಟಿ ದಾಖಲೆ ಹೊಂದಿದ್ದಾರೆ.
ಈ ದಾಖಲೆಯ ಹೊರತಾಗಿಯೂ ಕೊಹ್ಲಿ ತವರಿನಲ್ಲಿ ಅತಿ ಹೆಚ್ಚು 20 ಏಕದಿನ ಶತಕ ಬಾರಿಸಿದ ಸಚಿನ್ ಅವರ ದಾಖಲೆಯನ್ನೂ ವಿರಾಟ್ ಸರಿದೂಗಿಸಿದ್ದಾರೆ. ಒಂದೊಮ್ಮೆ ವಿರಾಟ್ ಕೊಹ್ಲಿ ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಶತಕ ಸಿಡಿಸಿದರೂ ಆಗ ಸಚಿನ್ ಅವರ ದಾಖಲೆ ಮುರಿಯಲಿದೆ. ಇನ್ನು ಕೊಹ್ಲಿ ಈ ಪಂದ್ಯದಲ್ಲಿ 87 ಎಸೆತ ಎದುರಿಸಿ 1 ಸಿಕ್ಸರ್ ಮತ್ತು 12 ಬೌಂಡರಿ ನೆರವಿನಿಂದ 113 ರನ್ ಬಾರಿಸಿದರು.
ಇದನ್ನೂ ಓದಿ | IND VS SL | ಇಶಾನ್ ಕಿಶನ್ ಬದಲು ಶುಭ್ಮನ್ ಗಿಲ್ಗೆ ಅವಕಾಶ; ಸ್ಪಷ್ಟನೆ ನೀಡಿದ ನಾಯಕ ರೋಹಿತ್ ಶರ್ಮಾ!