Site icon Vistara News

IND VS SL | ರನ್​ ಗಳಿಸಲು ಉದಾಸೀನ ತೋರಿದ ಪಾಂಡ್ಯರನ್ನು ದಿಟ್ಟಿಸಿ ನೋಡಿದ ಕೊಹ್ಲಿ; ವಿಡಿಯೊ ವೈರಲ್​!

Virat Kohli Stares At Hardik Pandya

ಗುವಾಹಟಿ: ಶ್ರೀಲಂಕಾ(IND VS SL) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿ ಮಿಂಚಿದ್ದಾರೆ. ಇದೇ ವೇಳೆ ಕೊಹ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ವರ್ತನೆಗೆ ಬೇಸರ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಭಾರತದ ಇನಿಂಗ್ಸ್‌ನ 43ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಕಸುನ್ ರಜಿತಾ ಓವರ್​ನಲ್ಲಿ ಕೊಹ್ಲಿ ವೇಗವಾಗಿ ಸಿಂಗಲ್ ತೆಗೆದುಕೊಂಡ ಬಳಿಕ ಎರಡನೇ ರನ್ ಓಡಲು ಯತ್ನಿಸಿ ಪಿಚ್‌ನ ಅರ್ಧ ದೂರ ತಲುಪಿದ್ದರು. ಆದರೆ ಇನ್ನೊಂದು ತುದಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಹಾರ್ದಿಕ್ ಈ ರನ್​ ಓಡಲು ನಿರಾಕರಿಸಿದರು. ಇದರಿಂದ ಕೋಪಗೊಂಡ ವಿರಾಟ್​ ಕೊಹ್ಲಿ ಅವರು ಹಾರ್ದಿಕ್ ಪಾಂಡ್ಯರನ್ನು ದಿಟ್ಟಿಸಿ ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ ಕೊಹ್ಲಿ 87 ಎಸೆತಗಳಲ್ಲಿ 113 ರನ್ ಗಳಿಸಿ ಮಿಂಚಿದ್ದರು. ಇವರ ಬ್ಯಾಟಿಂಗ್​ ಸಾಹಸದಿಂದ ಟೀಮ್​ ಇಂಡಿಯಾ 67 ರನ್​ ಅಂತರದ ಗೆಲುವು ಸಾಧಿಸಿತು.

ಇದನ್ನೂ ಓದಿ | IND VS SL | ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿ ಟೀಮ್​ ಇಂಡಿಯಾ

Exit mobile version