Site icon Vistara News

IND VS SL | ಲಂಕಾ ವಿರುದ್ಧ ಮೂರು ವಿಕೆಟ್​ ಕಿತ್ತು ವಿಶೇಷ ಸಾಧನೆ ಮಾಡಿದ ಕುಲ್​ದೀಪ್​ ಯಾದವ್​!

kuldeep yadav

ಕೋಲ್ಕೊತಾ: ಶ್ರೀಲಂಕಾ(IND VS SL) ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಮೂರು ವಿಕೆಟ್​ ಕಿತ್ತು ಮಿಂಚಿದ ಕುಲ್​ದೀಪ್​ ಯಾದವ್​ ದಾಖಲೆಯೊಂದನ್ನು​ ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲ ಮೂರು ಮಾದರಿ ಸೇರಿ 200 ವಿಕೆಟ್‌ಗಳನ್ನು ಪೂರೈಸಿದ ಆಟಗಾರನಾಗಿ ಮೂಡಿಬಂದರು.

ಬಹಳ ಸಮಯದ ಬಳಿಕ ಏಕದಿನ ತಂಡದಲ್ಲಿ ಸ್ಥಾನ ಪಡೆದ ಕುಲ್​ದೀಪ್​ ಯಾದವ್​ ಒಟ್ಟು 107 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ ಈ ಮೈಲಿಗಲ್ಲನ್ನು ತಲುಪಿದರು. ಜತೆಗೆ ಈ ಸಾಧನೆ ಮಾಡಿದ ಭಾರತದ 23ನೇ ಬೌಲರ್ ಎನಿಸಿಕೊಂಡಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಸದ್ಯ 122 ವಿಕೆಟ್ ಪಡೆದಿರುವ ಕುಲ್​ದೀಪ್​ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದ್ದಾರೆ. ಟೆಸ್ಟ್‌ನಲ್ಲಿ 14 ಇನಿಂಗ್ಸ್‌ಗಳಲ್ಲಿ 34 ವಿಕೆಟ್‌ಗಳನ್ನು ಮತ್ತು 24 ಟಿ20 ಇನಿಂಗ್ಸ್‌ಗಳಲ್ಲಿ 44 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ | IND VS SL | ಅಲ್ಪ ಮೊತ್ತಕ್ಕೆ ಕುಸಿದ ಶ್ರೀಲಂಕಾ; ಭಾರತ ಗೆಲುವಿಗೆ 216 ರನ್​ ಗುರಿ

Exit mobile version