Site icon Vistara News

IND VS SL | ಭಾರತ-ಶ್ರೀಲಂಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದ ಪಿಚ್​ ರಿಪೋರ್ಟ್​

IND VS SL

ಕೋಲ್ಕೊತಾ: ಮೊದಲ ಏಕದಿನ ಪಂದ್ಯವನ್ನು ಗೆದ್ದು ಸಂತಸದ ಅಲೆಯಲ್ಲಿ ತೇಲಾಡುತ್ತಿರುವ ಟೀಮ್​ ಇಂಡಿಯಾ(IND VS SL) ಇದೀಗ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಶ್ರೀಲಂಕಾ ವಿರುದ್ಧ ಗುರುವಾರ ಈಡನ್ ಗಾರ್ಡನ್​ನಲ್ಲಿ ಈ ಮುಖಾಮುಖಿ ನಡೆಯಲಿದೆ. ಈ ಪಂದ್ಯದ ಪಿಚ್​ ರಿಪೋರ್ಟ್​ ಮಾಹಿತಿ ಈ ಕೆಳಗಿನಂತಿದೆ.

ದೇಶದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹಿರಿಮೆಗೆ ಪಾತ್ರವಾದ ಈಡನ್ ಗಾರ್ಡನ್​ನ ಪಿಚ್​ ಬ್ಯಾಟರ್​ಗಳಿಗೆ ಸರ್ಗದ ತಾಣವಾಗಿದೆ. ಆದ್ದರಿಂದ ಈ ಮೇಲಾಟದಲ್ಲಿ ದೊಡ್ಡ ಮೊತ್ತವನ್ನು ನಿರೀಕ್ಷಿಸಬಹುದು. ಪ್ರಸ್ತುತ ಈಡನ್ ಗಾರ್ಡನ್ 68,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. ಈಗಾಗಲೇ ಪಂದ್ಯದ ಬಹುತೇಕ ಟಿಕೆಟ್​ಗಳು ಮರಾಟವಾಗಿದೆ ಎಂದು ವರದಿಯಾಗಿದೆ. ಆದ್ದರಿಂದ ಪಂದ್ಯದ ವೇಳೆ ಪ್ರೇಕ್ಷಕರ ಸಾಮರ್ಥ್ಯ ಪೂರ್ಣವಾಗುವ ಸಾಧ್ಯತೆ ಇದೆ.

ಪಂದ್ಯದ ವೇಳೆ ಇಬ್ಬನಿಯ ಸಮಸ್ಯೆ ಕಾಡುವುದರಿಂದ ಟಾಸ್​ ಗೆದ್ದ ತಂಡ ಮೊದಲು ಬೌಲಿಂಗ್​ ಮಾಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಹೆಚ್ಚು. ಏಕೆಂದರೆ ದ್ವಿತೀಯ ಇನಿಂಗ್ಸ್​ ವೇಳೆ ಇಲ್ಲಿ ಬೌಲಿಂಗ್​ ನಡೆಸುವುದು ಕಷ್ಟ ಸಾಧ್ಯ. ಒಟ್ಟಾರೆ ಈ ಪಿಚ್​ನಲ್ಲಿ ದೊಡ್ಡ ಮೊತ್ತದ ಸ್ಕೋರ್​ ನಿರೀಕ್ಷಿಸಬಹುದು.

ಸಂಭಾವ್ಯ ತಂಡಗಳು

ಭಾರತ: ರೋಹಿತ್​ ಶರ್ಮಾ(ನಾಯಕ), ಶುಭಮನ್​ ಗಿಲ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆ.ಎಲ್​. ರಾಹುಲ್​, ಹಾರ್ದಿಕ್​ ಪಾಂಡ್ಯ, ಯಜುವೇಂದ್ರ ಚಹಲ್​, ಮೊಹಮ್ಮದ್​ ಸಿರಾಜ್​, ಉಮ್ರಾನ್​ ಮಲಿಕ್​, ಮೊಹಮ್ಮದ್​ ಶಮಿ, ಅಕ್ಷರ್​ ಪಟೇಲ್​.

ಶ್ರೀಲಂಕಾ: ದಸುನ್ ಶನಕ (ನಾಯಕ), ಕುಸಾಲ್ ಮೆಂಡಿಸ್, ಪಾಥುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಧನಂಜಯ ಡಿ ಸಿಲ್ವ, ಚರಿತ್ ಅಸಲಂಕ, ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುನಿತ್ ವೆಲ್ಲಲಗೆ, ಕಸುನ್​ ರಜಿತ, ದಿಲ್ಶನ್​ ಮದುಶಂಕ.

ಇದನ್ನೂ ಓದಿ | INDvsSL ODI | ಶ್ರೀಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯದಲ್ಲಿ ಭಾರತಕ್ಕೆ 67 ರನ್​ ಜಯ, ಸರಣಿಯಲ್ಲಿ 1-0 ಮುನ್ನಡೆ

Exit mobile version