ಮುಂಬಯಿ: ಶ್ರೀಲಂಕಾ(IND VS SL) ವಿರುದ್ಧದ ಟಿ20 ಸರಣಿಯಿಂದ ಗಾಯಗೊಂಡು ಸಂಜು ಸ್ಯಾಮ್ಸನ್ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಈಗಾಗಲೇ ಬಿಸಿಸಿಐ ಬದಲಿ ಆಟಗಾರನಾಗಿ ಜಿತೇಶ್ ಶರ್ಮಾ ಅವರನ್ನು ಆಯ್ಕೆ ಮಾಡಿದೆ. ಆದರೆ ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ರಾಹುಲ್ ತ್ರಿಪಾಠಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
ಇಂದು (ಗುರುವಾರ) ಪುಣೆಯಲ್ಲಿ ನಡೆಯಲಿರುವ 2ನೇ ಟಿ20 ಪಂದ್ಯದಲ್ಲಿ ತ್ರಿಪಾಠಿ ಟೀಮ್ ಇಂಡಿಯಾ ಪರ ಚೊಚ್ಚಲ ಕ್ಯಾಪ್ ತೊಡುವ ಸಾಧ್ಯತೆ ಇದೆ. ತಿಪಾಠಿ ಐಪಿಎಲ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಕಳೆದ ಕೆಲವು ಸರಣಿಯಲ್ಲಿ ಭಾರತ ತಂಡದೊಂದಿಗೆ ಪ್ರಯಾಣಿಸಿದ್ದರೂ ಕೂಡಾ ಇನ್ನೂ ಅವರಿಗೆ ಟಿ20 ಪಂದ್ಯವಾಡುವ ಅವಕಾಶ ಸಿಕ್ಕಿಲ್ಲ. ಆದ್ದರಿಂದ ಪುಣೆ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ಐಪಿಎಲ್ನಲ್ಲಿ ರಾಹುಲ್ ತ್ರಿಪಾಠಿ ಒಟ್ಟು 76 ಪಂದ್ಯಗಳನ್ನಾಡಿದ್ದು 1,798 ರನ್ ಗಳಿಸಿದ್ದಾರೆ. 93 ಅವರ ಗರಿಷ್ಠ ಮೊತ್ತವಾಗಿದೆ. ಇನ್ನೊಂಡೆದೆ ಋತುರಾಜ್ ಗಾಯಕ್ವಾಡ್ ಕೂಡಾ ರೇಸ್ನಲ್ಲಿದ್ದಾರೆ. ದೇಶಿ ಕ್ರಿಕೆಟ್ನಲ್ಲಿ ಸ್ಫೋಟಕ ಆಡವಾಡಿ ಹೆಸರು ಗಳಿಸಿರುವ ಗಾಯಕ್ವಾಡ್ ಕೂಡ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ | IND VS SL | ಸಂಜು ಬದಲು ಟೀಮ್ ಇಂಡಿಯಾಕ್ಕೆ ಎಂಟ್ರಿಕೊಟ್ಟ ಜಿತೇಶ್ ಶರ್ಮಾ ಯಾರು? ಅವರ ಕ್ರಿಕೆಟ್ ಸಾಧನೆ ಏನು?