ಗುವಾಹಟಿ: ಶ್ರೀಲಂಕಾ(IND VS SL) ವಿರುದ್ಧದ ಮೊದಲ ಏಕದಿನ ಪಂದ್ಯಿಂದ ಇಶಾನ್ ಕಿಶನ್ ಅವರನ್ನು ತಂಡದಿಂದ ಕೈಬಿಟ್ಟಿರುವ ಬಗ್ಗೆ ನಾಯಕ ರೋಹಿತ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.
ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ರೋಹಿತ್, ಶುಭ್ಮನ್ ಗಿಲ್ ಮತ್ತು ಇಶಾನ್ ಕಿಶನ್ ಟೀಮ್ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಇಬ್ಬರೂ ಹೇಗೆ ಆಡಿದ್ದಾರೆ ಎಂಬುದನ್ನು ಪರಿಗಣಿಸಿ ಗಿಲ್‌ಗೆ ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.
“ಇಶಾನ್‌ಗೆ ಸ್ಥಾನ ಸಿಗದಿರುವುದು ದುರದೃಷ್ಟಕರ, ಆದರೆ ಕಳೆದ ಎಂಟು-ಒಂಬತ್ತು ತಿಂಗಳು ಹೇಗೆ ಸಾಗಿವೆ ಎಂಬುದನ್ನು ಗಮನಿಸಿದರೆ ಗಿಲ್‌ಗೆ ಅವಕಾಶ ನೀಡಿರುವುದು ನ್ಯಾಯಯುತವಾಗಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯುವ ಏಕದಿನ ವಿಶ್ವಕಪ್‌ಗೂ ಮುನ್ನ ಸಾಕಷ್ಟು ಪಂದ್ಯಗಳನ್ನು ನಾವು ಆಡಲಿದ್ದೇವೆ. ಈ ವೇಳೆ ಇಶಾನ್ ಕಿಶನ್ ಅವಕಾಶ ಪಡೆಯಲಿದ್ದಾರೆ” ಎಂದು ರೋಹಿತ್ ಭರವಸೆ ನೀಡಿದ್ದಾರೆ.
ಶುಭ್ಮನ್ ಗಿಲ್ ಈವರೆಗೆ 13 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದು, 57ರ ಸರಾಸರಿಯಲ್ಲಿ 687ರನ್ ಕಲೆಹಾಕಿದ್ದಾರೆ. 99ಕ್ಕಿಂತ ಹೆಚ್ಚಿನ ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಜತೆಗೆ ಒಂದು ಶತಕ ಮತ್ತು 4 ಅರ್ಧಶತಕಗಳು ಬಾರಿಸಿದ್ದಾರೆ.
10 ಪಂದ್ಯಗಳ 9 ಇನಿಂಗ್ಸ್‌ಗಳಲ್ಲಿ ಆಡಿರುವ ಕಿಶನ್, 53ರ ಸರಾಸರಿಯಲ್ಲಿ 477 ರನ್ ಗಳಿಸಿದ್ದಾರೆ. ಒಂದು ದ್ವಿಶತಕ ಹೊರತುಪಡಿಸಿ ಮೂರು ಅರ್ಧಶತಕ ಗಳಿಸಿದ್ದಾರೆ. ಆದರೆ ಗಿಲ್ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಈ ಕಾರಣದಿಂದ ಅವರಿಗೆ ಅವಕಾಶ ನೀಡಲಾಗಿದೆ ಎಂದು ರೋಹಿತ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ | Rohit Sharma| ಐಪಿಎಲ್ ಬಳಿಕ ಟಿ20 ಕ್ರಿಕೆಟ್ ಭವಿಷ್ಯ ನಿರ್ಧಾರ; ರೋಹಿತ್ ಶರ್ಮಾ ಹೀಗೆ ಹೇಳಿದ್ದು ಏಕೆ?