Site icon Vistara News

IND VS SL | ಕಣ್ಣೀರು ಹಾಕಿದ ಪುಟ್ಟ ಅಭಿಮಾನಿಯನ್ನು ಸಂತೈಸಿದ ರೋಹಿತ್​ ಶರ್ಮಾ; ವಿಡಿಯೊ ವೈರಲ್

Rohit Sharma

ಗುವಾಹಟಿ: ಪ್ರವಾಸಿ ಶ್ರೀಲಂಕಾ(IND VS SL) ವಿರುದ್ಧದ ಮೊದಲ ಏಕದಿನ ಪಂದ್ಯ ಗುವಾಹಟಿಯ ಬರ್ಸಾಪಾರಾ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿದೆ. ಪಂದ್ಯ ಆರಂಭಕ್ಕೂ ಮುನ್ನ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮಾ ಕಣ್ಣೀರು ಹಾಕಿದ ಪುಟ್ಟ ಅಭಿಮಾನಿಯನ್ನು ಸಂತೈಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮೊದಲ ಏಕದಿನ ಪಂದ್ಯ ನೋಡಲು ಬಂದಿದ್ದ ಅಭಿಮಾನಿಗಳನ್ನು ಭೇಟಿ ಮಾಡಲು ಹೋದಾಗ ಬಾಲಕನೋರ್ವ ರೋಹಿತ್​ ಶರ್ಮಾ ಅವರನ್ನು ನೋಡಿ ಅಳಲು ಪ್ರಾರಂಭಿಸಿದ. ಇದೇ ವೇಳೆ ರೋಹಿತ್ ಆತನನ್ನು ಸಮಾಧಾನಪಡಿಸಿದ್ದಾರೆ. ರೋಹಿತ್​, ಬಾಲಕನನ್ನು ಸಮಾಧಾನಗೊಳಿಸಿದ ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಬಾಲಕನ ಕಣ್ಣೀರು ಒರೆಸುತ್ತಾ, ಯಾಕೆ ಅಳುತ್ತಿದ್ದೀಯಾ? ಹೀಗೆಲ್ಲ ಅಳಬಾರದು ಎಂದು ಕೆನ್ನೆ ಮುಟ್ಟಿ ಮುದ್ದಾಡಿದ್ದಾರೆ. ಬಳಿಕ ಅವರ ಜತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ | Rohit Sharma| ಐಪಿಎಲ್​ ಬಳಿಕ ಟಿ20 ಕ್ರಿಕೆಟ್ ಭವಿಷ್ಯ ನಿರ್ಧಾರ; ರೋಹಿತ್​ ಶರ್ಮಾ ಹೀಗೆ ಹೇಳಿದ್ದು ಏಕೆ?

Exit mobile version