ಗುವಾಹಟಿ: ಶ್ರೀಲಂಕಾ(IND VS SL) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಕ್ರೀಡಾ ಸ್ಫೂರ್ತಿ ಮೆರೆದಿದ್ದಾರೆ. ಮೊಹಮ್ಮದ್ ಶಮಿ ಲಂಕಾದ ನಾಯಕ ದಸುನ್ ಶನಕ ಅವರನ್ನು ಮಂಕಡ್ ಮೂಲಕ ರನೌಟ್ ಮಾಡಿದರೂ ಇದನ್ನು ತಿರಸ್ಕರಿಸಿದ್ದಾರೆ. ರೋಹಿತ್ ಅವರ ಈ ನಡೆಗೆ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದಸುನ್ ಶನಕ ಅವರು 98 ರನ್ ಗಳಿಸಿದ್ದ ವೇಳೆ ಈ ಘಟನೆ ನಡೆದಿದೆ. ನಾನ್ಸ್ಟ್ರೇಕ್ನಲ್ಲಿದ್ದ ಶನಕ ಅವರು ಮೊಹಮ್ಮದ್ ಶಮಿ ಬೌಲಿಂಗ್ ನಡೆಸುವ ಮುನ್ನವೇ ಕ್ರೀಸ್ ತೊರೆದು ಮುಂದೆ ಸಾಗಿದರು. ಇದೇ ವೇಳೆ ಶಮಿ ಬೇಲ್ಸ್ ಹಾರಿಸಿ ಅಂಪೈರ್ಗೆ ಔಟ್ ಎಂದು ಮನವಿ ಸಲ್ಲಿಸಿದರು. ತಕ್ಷಣ ಅಂಪೈರ್ ಮೂರನೇ ಅಂಪೈರ್ಗೆ ಮನವಿಯನ್ನು ನೀಡಿದರು. ಇದೇ ವೇಳೆ ರೋಹಿತ್ ಶರ್ಮಾ ಅವರು ಶಮ್ಮಿಯನ್ನು ಕರೆದು ತಮ್ಮ ಮನವಿಯನ್ನು ಹಿಂಪಡೆಯುಂತೆ ಹೇಳಿದರು. ಅದರಂತೆ ಶಮಿ ಅಂಪೈರ್ ಬಳಿಕ ತರೆಳಿ ತಮ್ಮ ಮನವಿಯನ್ನು ಹಿಂಡೆದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಂದೊಮ್ಮೆ ರೋಹಿತ್ ಶರ್ಮಾ ಅವರು ಈ ಮನವಿಯನ್ನು ತಿರಸ್ಕರಿಸಲು ಸೂಚಿಸದಿದ್ದರೆ ಶನಕ ಅವರು ಔಟ್ ಆಗಿ ಶತಕ ವಂಚಿತರಾಗುತ್ತಿದ್ದರು. ಶನಕ ಅವರು ಈ ಜೀವದಾನದಿಂದ ಅಜೇಯ 108 ರನ್ ಸಿಡಿಸಿ ಶತಕ ಪೂರೈಸಿದರು. ಇದೀಗ ರೋಹಿತ್ ಅವರ ಕ್ರೀಡಾ ಸ್ಫೂರ್ತಿಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಈ ಪಂದ್ಯದಲ್ಲಿ ಭಾರತ 67 ರನ್ಗಳಿಂದ ಗೆಲುವು ಸಾಧಿಸಿತು.
ಇದನ್ನೂ ಓದಿ | INDvsSL ODI | ಶ್ರೀಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯದಲ್ಲಿ ಭಾರತಕ್ಕೆ 67 ರನ್ ಜಯ, ಸರಣಿಯಲ್ಲಿ 1-0 ಮುನ್ನಡೆ