ಮುಂಬಯಿ: ಶ್ರೀಲಂಕಾ ವಿರುದ್ಧದ ದ್ವಿತೀಯ ಟಿ20 ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ(IND VS SL) ಆಘಾತ ಎದುರಾಗಿದೆ. ಯುವ ಆಟಗಾರ ಸಂಜು ಸ್ಯಾಮ್ಸನ್ ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದಾರೆ. ಇವರ ಸ್ಥಾನಕ್ಕೆ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಜಿತೇಶ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಸಂಜು ಎಡ ಮೊಣಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಅವರ ಸ್ಕ್ಯಾನಿಂಗ್ ನಡೆಸಿದ ವೈದ್ಯರು ಸಂಜುಗೆ ಗಂಭೀರ ಗಾಯವಾಗಿದೆ, ಅವರಿಗೆ ವಿಶ್ರಾಂತಿ ಅಗತ್ಯ ಎಂದು ಸೂಚಿಸಿರುವುದಾಗಿ ಬಿಸಿಸಿಐ ತಿಳಿಸಿದೆ.
ಸಂಜು ಬದಲಿಗೆ ರಣಜಿಯಲ್ಲಿ ವಿದರ್ಭ ಪರ ಆಡುತ್ತಿರುವ ಜಿತೇಶ್ ಶರ್ಮಾಗೆ ಟೀಮ್ ಇಂಡಿಯಾದಿಂದ ಬುಲಾವ್ ಸಿಕ್ಕಿದೆ. ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುವ ಅವರು ಕಳೆದ ಸೀಸನ್ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು.
ಸ್ಯಾಮ್ಸನ್ ಗಾಯದ ಕಾರಣದಿಂದ ರಾಹುಲ್ ತ್ರಿಪಾಠಿ ಅವರಿಗೆ ಪುಣೆ ಪಂದ್ಯದಲ್ಲಿ ಅವಕಾಶ ಸಿಗಬಹುದು. ಐಪಿಎಲ್ ನಲ್ಲಿ ಸ್ಥಿರ ಪ್ರದರ್ಶನ ನೀಡುವ ತ್ರಿಪಾಠಿ ಕಳೆದ ಕೆಲವು ಸರಣಿಯಲ್ಲಿ ತಂಡದೊಂದಿಗೆ ಪ್ರಯಾಣಿಸಿದ್ದರೂ ಕೂಡಾ ಇನ್ನೂ ಟಿ20 ಪಂದ್ಯವಾಡುವ ಅವಕಾಶ ಪಡೆದಿಲ್ಲ. ಆದ್ದರಿಂದ ಪುಣೆ ಪಂದ್ಯದಲ್ಲಿ ತ್ರಿಪಾಠಿಗೆ ಅವಕಾಶದ ಬಾಗಿಲು ತೆರೆಯಬಹುದು.
ಇದನ್ನೂ ಓದಿ | IND VS SL | ವೈಡ್ ನೀಡದ್ದಕ್ಕೆ ಅಂಪೈರ್ ಮೇಲೆ ಸಿಟ್ಟಾದ ದೀಪಕ್ ಹೂಡಾ; ವಿಡಿಯೊ ವೈರಲ್