ಕೊಲಂಬೊ: ವರ್ಷಾರಂಭದಲ್ಲಿ ಭಾರತ ವಿರುದ್ಧ ನಡೆಯಲಿರುವ ಟಿ20 ಹಾಗೂ ಏಕ ದಿನ ಸರಣಿಗೆ ಶ್ರೀಲಂಕಾ ತಂಡಗಳನ್ನು ಪ್ರಕಟಿಸಲಾಗಿದೆ. ಅಚ್ಚರಿ ಎಂಬಂತೆ ಅಗ್ರ ಕ್ರಮಾಂಕದ ಹಿರಿಯ ಬ್ಯಾಟರ್ ಆವಿಷ್ಕ ಫೆರ್ನಾಂಡೊ 11 ತಿಂಗಳ ಬಳಿಕ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಭಾರತ ಪ್ರವಾಸದಲ್ಲಿ ಶ್ರೀಲಂಕಾ ತಲಾ ಮೂರು ಏಕ ದಿನ ಮತ್ತು ಟಿ20 ಪಂದ್ಯಗಳ ಸರಣಿಯನ್ನಾಡಲಿದೆ. ಎರಡೂ ತಂಡಗಳನ್ನು ದಸುನ್ ಶಣಕ ಮುನ್ನಡೆಸಲಿದ್ದಾರೆ. ಆದರೆ ಟಿ20 ತಂಡಕ್ಕೆ ವನಿಂದು ಹಸರಂಗ, ಏಕ ದಿನಕ್ಕೆ ಕುಸಲ್ ಮೆಂಡಿಸ್ ಉಪನಾಯಕರಾಗಿದ್ದಾರೆ.
ಶ್ರೀಲಂಕಾ ತಂಡ
ದಸುನ್ ಶಣಕ (ನಾಯಕ), ಪಥುಮ್ ನಿಸ್ಸಂಕ, ಆವಿಷ್ಕ ಫೆರ್ನಾಂಡೊ, ಕುಸಲ್ ಮೆಂಡಿಸ್, ಭನುಕ ರಾಜಪಕ್ಸ (ಟಿ20ಗೆ ಮಾತ್ರ), ಚರಿತ ಅಸಲಂಕ, ಧನಂಜಯ ಡಿ ಸಿಲ್ವ, ವನಿಂದು ಹಸರಂಗ, ಅಶೇನ್ ಬಂಡಾರ, ಮಹೀಶ್ ತೀಕ್ಷಣ, ಜೆಫ್ರಿ ವಾಂಡರ್ಸೆ (ಏಕದಿನಕ್ಕೆ ಮಾತ್ರ), ಚಮಿಕ ಕರುಣಾರತ್ನೆ, ದಿಲ್ಶನ್ ಮದುಶಂಕ, ಕಸುನ್ ರಜಿತ, ನುವನಿದು ಫೆರ್ನಾಂಡೊ (ಏಕದಿನಕ್ಕೆ ಮಾತ್ರ). ದುನಿತ್ ವೆಲ್ಲಲಗೆ, ಪ್ರಮೋದ್ ಮದುಶಾನ್, ಲಹಿರು ಕುಮಾರ, ನುವಾನ್ ತುಷಾರ (ಟಿ20ಗೆ ಮಾತ್ರ).
ಪಂದ್ಯ ವೇಳಾಪಟ್ಟಿ
ಪಂದ್ಯ | ದಿನಾಂಕ | ಸ್ಥಳ |
ಮೊದಲ ಟಿ20 | ಜನವರಿ 03 | ಮುಂಬಯಿ |
ಎರಡನೇ ಟಿ20 | ಜನವರಿ 05 | ಪುಣೆ |
ಮೂರನೇ ಟಿ20 | ಜನವರಿ 07 | ರಾಜ್ಕೋಟ್ |
ಮೊದಲ ಏಕದಿನ | ಜನವರಿ 10 | ಗುವಾಹಟಿ |
ಎರಡನೇ ಏಕದಿನ | ಜನವರಿ 12 | ಕೋಲ್ಕತಾ |
ಮೂರನೇ ಏಕದಿನ | ಜನವರಿ 15 | ತಿರುವನಂತಪುರ |
ಇದನ್ನೂ ಓದಿ | INDvsSL | ಲಂಕಾ ಸರಣಿಗೆ ಭಾರತ ತಂಡ ಪ್ರಕಟ, ಒಡಿಐನಲ್ಲಿ ರಾಹುಲ್ಗೆ ಚಾನ್ಸ್, ರೋಹಿತ್ ವಾಪಸ್