Site icon Vistara News

IND VS SL | ಭಾರತಕ್ಕೆ ಬಂದ ಶ್ರೀಲಂಕಾ ಕ್ರಿಕೆಟ್ ತಂಡ; ಜ.03ಕ್ಕೆ ಮೊದಲ ಟಿ20 ಪಂದ್ಯ

ind vs sl

ನವದೆಹಲಿ: ವರ್ಷಾರಂಭದಲ್ಲಿ ನಡೆಯಲಿರುವ ಭಾರತ(IND VS SL) ವಿರುದ್ಧದ ಟಿ20 ಮತ್ತು ಏಕದಿನ ಸರಣಿಯನ್ನಾಡಲು ಶ್ರೀಲಂಕಾ ತಂಡ ಭಾರತಕ್ಕೆ ಬಂದಿಳಿದಿದೆ. ಲಂಕಾ ಕ್ರಿಕೆಟಿಗರು ಕೊಲಂಬೊದಿಂದ ಮುಂಬೈಗೆ ಬಂದಿಳಿದ ಫೋಟೊವನ್ನು ಲಂಕಾ ಕ್ರಿಕೆಟ್​ ಮಂಡಳಿ ತನ್ನ ಅಧಿಕೃತ ಟ್ವಿಟರ್ (Twitter) ಖಾತೆಯಲ್ಲಿ ಹಂಚಿಕೊಂಡಿದೆ.

ಉಭಯ ತಂಡಗಳು ಮೊದಲು ಟಿ20 ಪಂದ್ಯವನ್ನಾಡುವ ಮೂಲಕ ಹೊಸ ವರ್ಷದ ಮೊದಲ ಸರಣಿಗೆ ಚಾಲನೆ ನೀಡಲಿದೆ. ಜನವರಿ 3, 5 ಮತ್ತು 7ರಂದು ಟಿ20 ಸರಣಿಯ ಪಂದ್ಯಗಳು ಕ್ರಮವಾಗಿ ಮುಂಬೈ, ಪುಣೆ ಮತ್ತು ರಾಜ್‌ಕೋಟ್‌ನಲ್ಲಿ ನಡೆಯಲಿವೆ. ಬಳಿಕ ಏಕ ದಿನ ಸರಣಿ ಜ. 10, 12 ಮತ್ತು 15 ರಂದು ಕ್ರಮವಾಗಿ ಗುವಾಹಟಿ, ಕೋಲ್ಕತಾ ಮತ್ತು ತಿರುವನಂತಪುರಂನಲ್ಲಿ ಆಯೋಜಿಸಲಾಗಿದೆ.

ಕಳೆದ ವರ್ಷ ಏಷ್ಯಾಕಪ್ ಗೆದ್ದು ಬೀಗಿದ್ದ ಶ್ರೀಲಂಕಾ ತಂಡ ಇದೀಗ ವರ್ಷಾರಂಭದ ಭಾರತ ವಿರುದ್ಧದ ಸರಣಿಯಲ್ಲಿಯೂ ಮೇಲುಗೈ ಸಾಧಿಸುವ ಯೋಜನೆಯಲ್ಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಅವರಂತಹ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ಟೀಮ್ ಇಂಡಿಯಾದ ಯುವ ಆಟಗಾರರಿಗೆ ಈ ಸರಣಿ ಅಗ್ನಿಪರೀಕ್ಷೆ ಎಂದರೂ ತಪ್ಪಾಗಲಾರದು.

ಭಾರತ ಟಿ20 ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್ ಯಾದವ್‌ ಇದೇ ಮೊದಲ ಬಾರಿ ಉಪನಾಯಕನಾಗಿ ಆಯ್ಕೆ ಆಗಿದ್ದಾರೆ. ಉಳಿದಂತೆ ಋತುರಾಜ್‌ ಗಾಯಕ್ವಾಡ್‌, ಇಶಾನ್​ ಕಿಶನ್, ​ಶುಭಮನ್​ ಗಿಲ್, ದೀಪಕ್‌ ಹೂಡ ಮತ್ತು ಸಂಜು ಸ್ಯಾಮ್ಸನ್‌ ಪ್ರಮುಖ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ.

ಭಾರತ ಟಿ20 ತಂಡ

ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್​ಕೀಪರ್​), ರುತುರಾಜ್ ಗಾಯಕ್ವಾಡ್, ಶುಬ್ಮನ್​ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಅರ್ಶ್​ದೀಪ್​ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್

ಪಂದ್ಯ ವೇಳಾಪಟ್ಟಿ

ಪಂದ್ಯದಿನಾಂಕಸ್ಥಳ
ಮೊದಲ ಟಿ20ಜನವರಿ 03ಮುಂಬಯಿ
ಎರಡನೇ ಟಿ20ಜನವರಿ 05ಪುಣೆ
ಮೂರನೇ ಟಿ20ಜನವರಿ 07ರಾಜ್​ಕೋಟ್​
ಮೊದಲ ಏಕದಿನಜನವರಿ 10ಗುವಾಹಟಿ
ಎರಡನೇ ಏಕದಿನಜನವರಿ 12ಕೋಲ್ಕೊತಾ
ಮೂರನೇ ಏಕದಿನಜನವರಿ 15ತಿರುವನಂತಪುರ

ಇದನ್ನೂ ಓದಿ | Team India | ಟಿ20 ತಂಡದಿಂದ ಕೆ ಎಲ್​ ರಾಹುಲ್​ ಔಟ್?​; ಗಾಯದಿಂದ ಸುಧಾರಿಸದ ರೋಹಿತ್​ ಶರ್ಮ

Exit mobile version