ರಾಜ್‌ಕೋಟ್: ಶ್ರೀಲಂಕಾ(IND VS SL) ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್ ದಾಖಲೆಯೊಂದನ್ನು ಬರೆದಿದ್ದಾರೆ. ಭಾರತದ ಪರ ಅತಿ ವೇಗದ ಸೆಂಚುರಿ ಸಿಡಿಸಿದ ಎರಡನೇ ಆಟಗಾರ ಎಂಬ ದಾಖಲೆ ಬರೆದರು. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೊದಲಿಗರಾಗಿದ್ದಾರೆ.
ರಾಜ್ಕೋಟ್ನಲ್ಲಿ ನಡೆಯುತ್ತಿರುವ ಲಂಕಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಮೂಲಕ ಆಕರ್ಷಕ ಶತಕ ಸಿಡಿಸಿದರು. ಲಂಕಾ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಅವರು 45 ಎಸೆತದಲ್ಲಿ ಶತಕ ಪೂರ್ತಿಗೊಳಿಸಿ ಈ ಸಾಧನೆ ಮರೆದರು. ಒಟ್ಟು 51 ಎಸೆತ ಎದುರಿಸಿದ ಅವರು ಅಜೇಯ 112 ರನ್ ಪೇರಿಸಿದರು. ಈ ಇನಿಂಗ್ಸ್ ವೇಳೆ 9 ಸಿಕ್ಸರ್ ಹಾಗೂ 7 ಬೌಂಡರಿ ಸಿಡಿಯಿತು. ಇವರ ಬ್ಯಾಟಿಂಗ್ ಸಾಹಸದಿಂದ ಭಾರತ 228 ರನ್ ಗಳಿಸಿ ಲಂಕಾಗೆ ಬೃಹತ್ ಮೊತ್ತದ ಗುರಿ ನೀಡಿದೆ.
ಟಿ20 ಮಾದರಿಯಲ್ಲಿ ಸೂರ್ಯಕುಮಾರ್ ಯಾದವ್ ಬಾರಿಸಿದ 3ನೇ ಶತಕ ಇದಾಗಿದೆ. ಇದಕ್ಕೂ ಮೊದಲು ಸೂರ್ಯಕುಮಾರ್ ಯಾದವ್ 2022ರಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಕ್ರಮವಾಗಿ 117 ಮತ್ತು 111* ರನ್ಗಳಿಸಿ ಶತಕ ಬಾರಿಸಿದ್ದರು.
ಭಾರತದ ಪರ ಅತಿ ವೇಗದ ಟಿ20 ಶತಕ ಬಾರಿಸಿದ ಸಾಧಕರು
ರೋಹಿತ್ ಶರ್ಮಾ 35 ಎಸೆತ, 2017, ಶ್ರೀಲಂಕಾ ವಿರುದ್ಧ
ಸೂರ್ಯಕುಮಾರ್ 45 ಎಸೆತ, 2023. ಶ್ರೀಲಂಕಾ ವಿರುದ್ಧ
ಕೆ.ಎಲ್. ರಾಹುಲ್ 46 ಎಸೆತದ, 2016, ವೆಸ್ಟ್ ಇಂಡೀಸ್ ವಿರುದ್ಧ
ಸೂರ್ಯಕುಮಾರ್ ಯಾದವ್ 48 ಎಸೆತ, 2022, ಇಂಗ್ಲೆಂಡ್ ವಿರುದ್ಧ
ಸೂರ್ಯಕುಮಾರ್ ಯಾದವ್ 49 ಎಸೆತ, 2022, ನ್ಯೂಜಿಲ್ಯಾಂಡ್ ವಿರುದ್ಧ
ಇದನ್ನೂ ಓದಿ | IND VS SL | ಸೂರ್ಯಕುಮಾರ್ ಬ್ಯಾಟಿಂಗ್ ಪ್ರತಾಪ; ಲಂಕಾ ಗೆಲುವಿಗೆ 229 ರನ್ ಗುರಿ