Site icon Vistara News

Rohit Sharma| ಐಪಿಎಲ್​ ಬಳಿಕ ಟಿ20 ಕ್ರಿಕೆಟ್ ಭವಿಷ್ಯ ನಿರ್ಧಾರ; ರೋಹಿತ್​ ಶರ್ಮಾ ಹೀಗೆ ಹೇಳಿದ್ದು ಏಕೆ?

IND VS SL

ಗುವಾಹಟಿ: ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮಾ(Rohit Sharma) ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಟಿ20 ಕ್ರಿಕೆಟ್​ನಿಂದ ದೂರವಾಗಿಲ್ಲ. ಆದರೆ ಐಪಿಎಲ್​ ಬಳಿಕ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ.

ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್​, ನಾನು ಟಿ20 ಕ್ರಿಕೆಟ್​ನಿಂದ ದೂರ ಸರಿಸಲು ಬಯಸುತ್ತಿಲ್ಲ. ನಮಗೂ ವಿಶ್ರಾಂತಿ ಬೇಕಾಗಿರುತ್ತವೆ. ಅದಕ್ಕಾಗಿ ತಂಡದಿಂದ ಹೊರಗುಳಿದಿದ್ದೇನೆ ಎಂದಿದ್ದಾರೆ.

“ಸತತ ಪಂದ್ಯಗಳನ್ನು ಆಡಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ಎಲ್ಲ ಮಾದರಿಯ ಕ್ರಿಕೆಟ್​ ಆಡುವ ಆಟಗಾರರಿಗೆ ಕೆಲವೊಮ್ಮೆ ಸಾಕಷ್ಟು ವಿಶ್ರಾಂತಿಗಳನ್ನು ನೀಡಬೇಕಾಗುತ್ತದೆ. ನಾನು ಕೂಡ ಈ ಪಟ್ಟಿಯಲ್ಲಿ ಸೇರಿದ್ದೇನೆ. ಸದ್ಯ ನಾನು ಟಿ20 ಕ್ರಿಕೆಟ್​ನಿಂದ ಹಿಂದೆ ಸರಿಯಲು ನಿರ್ಧರಿಸಿಲ್ಲ. ಐಪಿಎಲ್ ಬಳಿಕ ಏನಾಗುತ್ತದೆ ಎಂಬುದನ್ನು ನೋಡೋಣ” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ರೋಹಿತ್ ಶರ್ಮಾ ಅವರ ಈ ಹೇಳಿಕೆ ಕೆಲ ಅನುಮಾನಕ್ಕೆ ಎಡೆಮಾಡಿದೆ. ಪ್ರಸ್ತುತ ಅವರ ಹೇಳಿಕೆಯು ಮುಂಬರುವ ಟಿ20 ಸರಣಿಗಳಿಂದ ಅವರನ್ನು ಕೈ ಬಿಡುವುದು ಖಚಿತ ಎಂಬುದನ್ನು ಸೂಚಿಸುತ್ತಿದೆ.

ಈಗಾಗಲೇ ಹಿರಿಯ ಆಟಗಾರರನ್ನು ಬಿಸಿಸಿಐ ಟಿ20 ಕ್ರಿಕೆಟ್​ ಸರಣಿಯಿಂದ ಕೈ ಬಿಟ್ಟು ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುತ್ತಿದೆ. ಈ ಮಧ್ಯೆ ರೋಹಿತ್​ ಫಿಟ್‌ನೆಸ್ ಕೂಡ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಒಟ್ಟಾರೆ ರೋಹಿತ್ ಅವರ ಈ ಹೇಳಿಕೆ, ಐಪಿಎಲ್​ ಬಳಿಕ ಅವರು​ ಟಿ20 ಕ್ರಿಕೆಟ್​ನಿಂದ ಹಿಂದೆ ಸರಿಯುವ ಸುಳಿವು ನೀಡಿದಂತಿದೆ.

ಇದನ್ನೂ ಓದಿ | INDvsSL ODI | ಮೊದಲ ಏಕ ದಿನ ಪಂದ್ಯ; ಟಾಸ್​ ಗೆದ್ದ ಶ್ರೀಲಂಕಾ ತಂಡದಿಂದ ಫೀಲ್ಡಿಂಗ್​ ಆಯ್ಕೆ, ಭಾರತಕ್ಕೆ ಮೊದಲು ಬ್ಯಾಟಿಂಗ್​​

Exit mobile version