ಮುಂಬಯಿ: ಭಾರತ ತಂಡ ಮುಂದಿನ ಜನವರಿ (2023) 3ರಿಂದ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಮೂಲಕ ದ್ವೀಪ ರಾಷ್ಟ್ರದ ವಿರುದ್ಧ ತನ್ನ ಕ್ರಿಕೆಟ್ ಅಭಿಯಾನ ಆರಂಭಿಸಲಿದೆ. ಲಂಕಾ ವಿರುದ್ಧ ಒಟ್ಟು ಮೂರು ಟಿ20 ಮತ್ತು ಮೂರು ಏಕ ದಿನ ಪಂದ್ಯಗಳ ಸರಣಿ ನಡೆಯಲಿದೆ.
ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಮೊದಲ ಟಿ20 ಪಂದ್ಯವನ್ನು ಆಯೋಜಿಸಲಿದ್ದು ವರದಿಗಳ ಪ್ರಕಾರ ಪ್ರೇಕ್ಷಕರ ಟಿಕೆಟ್ ದರಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಟಿ20 ಸ್ಪರ್ಧೆಯನ್ನು ಆಯೋಜಿಸುವ ಬಜೆಟ್ ಹೆಚ್ಚಾದ ಕಾರಣ ಪ್ರವೇಶ ಟಿಕೆಟ್‌ಗಳ ಬೆಲೆಯನ್ನು ಹೆಚ್ಚಿಸಲು ಎಂಸಿಎ ನಿರ್ಧರಿಸಿದೆ.
“ಟಿ20 ಆಯೋಜಿಸುವ ಬಜೆಟ್ ಹೆಚ್ಚಾಗಿದೆ. ಆದ್ದರಿಂದ ಸಾರ್ವಜನಿಕರಿಗೆ ಟಿಕೆಟ್ ದರವನ್ನು ಸ್ವಲ್ಪ ಹೆಚ್ಚಿಸುವ ಅಗತ್ಯವಿದೆ ಎಂದು ನಾವು ಭಾವಿಸಿದ್ದೇವೆ. ಆದರೆ ಎಂಸಿಎ ಕ್ಲಬ್‌ಗಳು ಮತ್ತು ದಾನಿಗಳ (7,000) ಟಿಕೆಟ್ ದರಗಳು ಯಥಾಸ್ಥಿತಿಯಲ್ಲಿರುತ್ತವೆ” ಎಂದು ಮೂಲಗಳು ತಿಳಿಸಿವೆ. 2019 ಡಿಸೆಂಬರ್ 6 ರಂದು ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಮುಖಾಮುಖಿಯಾದಾಗ ವಾಂಖೆಡೆ ಸ್ಟೇಡಿಯಂ ಕೊನೆಯ ಬಾರಿಗೆ ಟಿ20 ಪಂದ್ಯವನ್ನು ಆಯೋಜಿಸಿತ್ತು. ಇದಾದ ಬಳಿಕ ಕೊರೊನಾದಿಂದ ಇಲ್ಲಿ ಪಂದ್ಯಗಳು ನಡೆದಿರಲಿಲ್ಲ. ಇದೀಗ ಕೋವಿಡ್ ಬಳಿಕ ಆಯೋಜನೆಯಾಗುತ್ತಿರುವ ಮೊದಲ ಸರಣಿ ಇದಾಗಿದೆ.
ಇದನ್ನೂ ಓದಿ | INDvsBAN | ಆಕ್ರಮಣಕಾರಿ ಆಟ ಆಡುತ್ತೇವೆ; ಬಾಂಗ್ಲಾಗೆ ಎಚ್ಚರಿಕೆ ಕೊಟ್ಟ ನಾಯಕ ರಾಹುಲ್