Site icon Vistara News

IND VS SL | ಶ್ರೀಲಂಕಾ ವಿರುದ್ಧ ಟಿ20 ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿ ಟೀಮ್​ ಇಂಡಿಯಾ!

ind vs sl

ಮುಂಬಯಿ: ಪ್ರವಾಸಿ ಶ್ರೀಲಂಕಾ ವಿರುದ್ಧ ಮಂಗಳವಾರ ನಡೆದ ಮೊದಲ ಟಿ20(IND VS SL) ಪಂದ್ಯದಲ್ಲಿ ಗೆಲುವು ಸಾಧಿಸಿದ ಭಾರತ, ಇದೀಗ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 1-0 ಮುನ್ನಡೆ ಕಾಯ್ದುಕೊಂಡಿರುವ ಪಾಂಡ್ಯ ಪಡೆ ಈ ಪಂದ್ಯವನ್ನೂ ಗೆದ್ದು ಸರಣಿ ವಶಪಡಿಸಿಕೊಳ್ಳುವ ಯೋಜನೆಯಲ್ಲಿದೆ.

ಇನ್ನೊಂಡೆದೆ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಶ್ರೀಲಂಕಾ ಈ ಪಂದ್ಯದಲ್ಲಿ ಹೇಗಾದರೂ ಮಾಡಿ ಗೆಲುವು ಸಾಧಿಸಿ ಸರಣಿ ಆಸೆ ಜೀವಂತವಿರಿಸಬೇಕಾದ ಸಂಕಟಕ್ಕೆ ಸಿಲುಕಿದೆ. ಆದ್ದರಿಂದ ದಸುನ್ ಶನಕ ಪಡೆಗೆ ಇದು ಮಾಡು ಇಲ್ಲ ಮಡಿ ಪಂದ್ಯವಾಗಿದೆ. ಮೊದಲ ಪಂದ್ಯದಲ್ಲಿ ಲಂಕಾ ಗೆಲುವಿನ ಅಂಚಿನವರೆಗೆ ತಲುಪಿದರೂ ಅಂತಿಮವಾಗಿ 2 ರನ್​ ಗಳಿಸಲಾಗದೆ ಸೋಲು ಕಂಡಿತು. ಸೋಲಿನ ಬಳಿಕ ಮಾತನಾಡಿದ ನಾಯಕ ಶನಕ ಎಲ್ಲ ತಪ್ಪುಗಳನ್ನು ಸರಿಪಡಿಸಿ ಮುಂದಿನ ಪಂದ್ಯದಲ್ಲಿ ಮೇಲುಗೈ ಸಾಧಿಸಲಿದ್ದೇವೆ ಎಂದು ಹೇಳಿದ್ದರು. ಅದರಂತೆ ಲಂಕಾ ಈ ಪಂದ್ಯದಲ್ಲಿ ತಿರುಗಿ ಬೀಳುವ ಸಾಧ್ಯತೆ ಇದೆ.

ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ

ಭಾರತ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೂ ದ್ವಿತೀಯ ಪಂದ್ಯಕ್ಕೆ ತಂಡದಲ್ಲಿ ಒಂದು ಬದಲಾವಣೆ ಮಾಡುವ ಸಾಧ್ಯತೆ ಇದೆ. ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಎಡಗೈ ವೇಗಿ ಅರ್ಶ್​ದೀಪ್​ ಸಿಂಗ್​ ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಒಂದೊಮ್ಮೆ ಅವರು ತಂಡಕ್ಕೆ ಮರಳಿದರೆ ಹರ್ಷಲ್ ಪಟೇಲ್ ತಂಡದದಿಂದ ಹೊರಗುಳಿಯಬಹುದು. ಉಳಿದಂತೆ ಯಾವುದೇ ಬದಲಾವಣೆ ಸಂಭವಿಸದು.

ಪದಾರ್ಪಣ ಪಂದ್ಯದಲ್ಲೇ ಭರ್ಜರಿ ಪ್ರದರ್ಶನ ತೋರಿದ ಶಿವಂ ಮಾವಿ ಮೇಲೆ ಈ ಪಂದ್ಯದಲ್ಲಿಯೂ ತಂಡ ಹೆಚ್ಚಿನ ಭರವಸೆ ಇರಿಸಿದೆ. ಕಳೆದ ಪಂದ್ಯದಲ್ಲಿ ಅವರು ನಾಲ್ಕು ಓವರ್​ ಎಸೆದು 22 ರನ್​ಗೆ ಪ್ರಮುಖ 4 ವಿಕೆಟ್​ ಉಡಾಯಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಉಳಿದಂತೆ ಸ್ಫೋಟಕ ಬ್ಯಾಟಿಂಗ್​ ನಡೆಸಿದ ದೀಪಕ್​ ಹೂಡಾ ಮೇಲು ನಿರೀಕ್ಷೆ ಇರಿಸಲಾಗಿದೆ.

ಇದನ್ನೂ ಓದಿ | IndvsSL | ಲಂಕಾ ವಿರುದ್ಧ ಆಡಿದ ಶಿವಂ ಮಾವಿಗೆ ಯಾಕೆ 100ನೇ ಸಂಖ್ಯೆಯ ಕ್ಯಾಪ್​, ಗಿಲ್​ಗೆ ಯಾಕೆ 101?

Exit mobile version