ಪುಣೆ: ಶ್ರೀಲಂಕಾ(IND VS SL)ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ 16 ರನ್ಗಳ ಸೋಲನುಭವಿಸಿದೆ. ಪಂದ್ಯದ ಸೋಲಿಗೆ ಪ್ರಮುಖ ಕಾರಣವಾದ ನೋಬಾಲ್ ಬಗ್ಗೆ ನಾಯಕ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ ನೀಡಿದ್ದಾರೆ.
ಗುರುವಾರ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ನಮ್ಮ ತಂಡದ ಬೌಲರ್ಗಳು ಎಸೆದ ನೋ ಬಾಲ್ ಸೋಲಿಗೆ ಪ್ರಮುಖ ಕಾರಣ ಎಂದು ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಈ ಪಂದ್ಯದಲ್ಲಿ ವೇಗಿ ಅರ್ಶ್ದೀಪ್ ಸಿಂಗ್ ಮೊದಲ ಓವರ್ನಲ್ಲಿ ಹ್ಯಾಟ್ರಿಕ್ ನೋಬಾಲ್ ಸೇರಿ ಒಟ್ಟು ಐದು ನೋಬಾಲ್‌ಗಳನ್ನು ಎಸೆದರು. ಶಿವಂ ಮಾವಿ ಮತ್ತು ಉಮ್ರಾನ್ ಮಲಿಕ್ ತಲಾ ಒಂದು ನೋಬಾಲ್ ಎಸೆದು ಒಟ್ಟು 12 ಹೆಚ್ಚುವರಿ ರನ್‌ಗಳನ್ನು ಎದುರಾಳಿ ತಂಡಕ್ಕೆ ಬಿಟ್ಟು ಕೊಟ್ಟಿದ್ದು ತಂಡಕ್ಕೆ ಹಿನ್ನಡೆಯಾಯಿತು ಎಂದರು.
“ಅರ್ಶ್ದೀಪ್ ಸಿಂಗ್ ಉತ್ತಮ ಬೌಲರ್. ಇದರಲ್ಲಿ ಎರಡು ಮಾತಿಲ್ಲ. ಇಲ್ಲಿ ಅವರನ್ನು ದೂಷಿಸುತ್ತಿಲ್ಲ. ಆದರೆ ಈ ರೀತಿ ನೋ ಬಾಲ್ ಎಸೆಯುವುದು ದೊಡ್ಡ ಅಪರಾಧ ಎಂದು ಪಾಂಡ್ಯ ಪರೋಕ್ಷವಾಗಿ ಅರ್ಶ್ದೀಪ್ಗೆ ಎಚ್ಚರಿಕೆ ನೀಡಿದ್ದಾರೆ.
ಪವರ್ ಪ್ಲೇಯಲ್ಲಿ ಹಿನ್ನಡೆ
ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ಪವರ್ ಪ್ಲೇಯಲ್ಲಿ ನಮಗೆ ಹಿನ್ನಡೆಯಾದದ್ದೂ ಕೂಡ ಸೋಲಿಗೆ ಪ್ರಮುಖ ಕಾರಣ. ನಾವು ಈ ಮಟ್ಟದಲ್ಲಿ ಕೆಲ ತಪ್ಪುಗಳನ್ನು ಮಾಡಿದೆವು. ಇದು ನಮಗೆ ಪಂದ್ಯದ ಮೇಲೆ ಪರಿಣಾಮ ಬೀರಿತು. ಆದರೆ ಎಲ್ಲ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಪಂದ್ಯದಲ್ಲಿ ಗ್ರೇಟ್ ಕಮ್ಬ್ಯಾಕ್ ಮಾಡುತ್ತೇವೆ ಎಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ | IND VS SL | ಲಂಕಾ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿ ಮೂರು ಪ್ರಮುಖ ದಾಖಲೆ ಬರೆದ ಅಕ್ಷರ್ ಪಟೇಲ್!