Site icon Vistara News

IND VS SL | ಗೆಲುವಿನ ಬಳಿಕ ಸಖತ್​ ಸ್ಟೆಪ್ಸ್​ ಹಾಕಿದ ವಿರಾಟ್​ ಕೊಹ್ಲಿ, ಇಶಾನ್​ ಕಿಶನ್​; ವಿಡಿಯೊ ವೈರಲ್​

Virat Kohli-Ishan Kishan

ಕೋಲ್ಕೊತಾ: ಪ್ರವಾಸಿ ಶ್ರೀಲಂಕಾ(IND VS SL) ವಿರುದ್ಧದ ದ್ವಿತೀಯ ಏಕದಿನ ಪಂದ್ಯವನ್ನು 4 ವಿಕೆಟ್​ಗಳಿಂದ ಗೆದ್ದ ಬಳಿಕ ಟೀಮ್​ ಇಂಡಿಯಾ ಆಟಗಾರರಾದ ವಿರಾಟ್​ ಕೊಹ್ಲಿ ಮತ್ತು ಇಶಾನ್​ ಕಿಶನ್ ಡ್ಯಾನ್ಸ್​ ಮಾಡಿದ್ದಾರೆ. ಗೆಲುವಿನ ಸಂಭ್ರಮದಲ್ಲಿ ಪ್ರೇಕ್ಷಕರ ಮುಂದೆ ಉಭಯ ಆಟಗಾರರು ಕುಣಿದು ಕುಪ್ಪಳಿಸಿದ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

​ಈಡನ್​ ಗಾರ್ಡನ್ಸ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಗುರುವಾರ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್​ ಮಾಡಿದ ಶ್ರೀಲಂಕಾ ತಂಡ 39.4 ಓವರ್​ಗಳಲ್ಲಿ 215 ರನ್​ಗಳಿಗೆ ಆಲ್​ಔಟ್​ ಆಯಿತು. ಗುರಿ ಬೆನ್ನಟ್ಟಿದ ಭಾರತ ತಂಡ 43. ಓವರ್​ಗಳಲ್ಲಿ 6 ವಿಕೆಟ್​ಗೆ 219 ರನ್​ ಬಾರಿಸಿ ಗೆಲುವು ಕಂಡಿತು.

ಭಾರತ ಈ ಗೆಲುವಿನೊಂದಿಗೆ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು 2-0 ಅಂತರದಿಂದ ಕೈವಶ ಮಾಡಿಕೊಂಡಿದೆ. ಈ ಖುಷಿಯಲ್ಲಿ ವಿರಾಟ್​ ಕೊಹ್ಲಿ ಮತ್ತು ಇಶಾನ್​ ಕಿಶಾನ್​ ನೆರೆದಿದ್ದ ಪ್ರೇಕ್ಷಕರ ಮುಂದೆ ಭರ್ಜರಿ ಸ್ಟೆಪ್ಸ್​ ​ ಹಾಕಿದ್ದಾರೆ. ಇದೇ ವೇಳೆ ಪ್ರೇಕ್ಷಕರು ಕೊಹ್ಲಿ ಮತ್ತು ಇಶಾನ್​ಗೆ ಹುರಿದುಂಬಿಸಿದ್ದಾರೆ. ಹಿಂದಿ ಸಿನೆಮಾದ ಹಾಡಿಗೆ ನೃತ್ಯಮಾಡಿದ ಈ ಆಟಗಾರರ ವಿಡಿಯೊ ವೈರಲ್​ ಆಗಿದೆ.

ಕೊಹ್ಲಿಯ ಈ ನೃತ್ಯಕಂಡು ಕೆಲವು ನೆಟ್ಟಿಗರು ಮೈದಾನದಲ್ಲಿಯೂ ಕಿಂಗ್​, ಡ್ಯಾನ್ಸ್​ನಲ್ಲಿಯೂ ಕಿಂಗ್​ ಎಂದು ಕಮೆಂಟ್​ ಮಾಡಿದ್ದಾರೆ. ಭಾರತ ಮತ್ತು ಲಂಕಾ ವಿರುದ್ಧದ ಅಂತಿಮ ಪಂದ್ಯ ಜನವರಿ 15ರಂದು ತಿರುವನಂತಪುರದಲ್ಲಿ ನಡೆಯಲಿದೆ.

ಇದನ್ನೂ ಓದಿ | IND VS SL | ಚಿರತೆ ವೇಗದಲ್ಲಿ ಕ್ಯಾಚ್​ ಹಿಡಿದ ಅಕ್ಷರ್​ ಪಟೇಲ್​; ವಿಡಿಯೊ ವೈರಲ್​

Exit mobile version