ಮುಂಬಯಿ: ಇದೇ ತಿಂಗಳು 27ರಿಂದ ಆರಂಭಗೊಳ್ಳಲಿರುವ ಶ್ರೀಲಂಕಾ(IND vs SL) ವಿರುದ್ಧದ ಸೀಮಿತ ಓವರ್ಗಳ ಕ್ರಿಕೆಟ್(India tour of Sri Lanka) ಸರಣಿಗೆ ರೋಹಿತ್ ಶರ್ಮ(Rohit Sharma) ಮತ್ತು ವಿರಾಟ್ ಕೊಹ್ಲಿ(Virat Kohli) ವಿಶ್ರಾಂತಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಹಂಗಾಮಿ ನಾಯಕನಾಗಿ ಹಾರ್ದಿಕ್ ಪಾಂಡ್ಯ ಅಥವಾ ಕೆ.ಎಲ್ ರಾಹುಲ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.
ರೋಹಿತ್ ಶರ್ಮಾ ವಿರಾಮ ತೆಗೆದುಕೊಳ್ಳದೆ ಸುಮಾರು ಆರು ತಿಂಗಳು ಕಳೆದಿದೆ. ಸುದೀರ್ಘವಾಗಿ ಆಡುತ್ತಿರುವ ಕಾರಣದಿಂದ ಅವರಿಗೆ ಬಿಸಿಸಿಐ ವಿಶ್ರಾಂತಿ ನೀಡಲು ಬಯಸಿದೆ ಎನ್ನಲಾಗಿದೆ. ಜತೆಗೆ ಕೊಹ್ಲಿಯೂ ವಿಶ್ರಾಂತಿ ನೀಡಲಾಗುವುದು ಎಂದು ವರದಿಯಾಗಿದೆ. ತವರಿನ ದೀರ್ಘ ಟೆಸ್ಟ್ ಋತುವಿನ ಹಿನ್ನಲೆಯಲ್ಲಿ ಉಭಯ ಆಟಗಾರರಿಗೆ ವಿಶ್ರಾಂತಿ ನೀಡಲು ಯೋಚಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಕ್ರಿಕ್ಇನ್ಫೋ ತನ್ನ ವರದಿಯಲ್ಲಿ ತಿಳಿಸಿದೆ.
ಶ್ರೀಲಂಕಾ ವಿರುದ್ಧ ಭಾರತ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನಾಡಲಿದೆ. ಇದಾದ ಬಳಿಕ ಭಾರತ ಸೆಪ್ಟೆಂಬರ್ನಲ್ಲಿ ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಮತ್ತು ಟಿ20 ಸರಣಿ ಆಡಲಿದೆ. ರೋಹಿತ್ ಮತ್ತು ಕೊಹ್ಲಿ ಈ ಟೆಸ್ಟ್ ಸರಣಿಗೆ ತಂಡ ಸೇರುವ ಸಾಧ್ಯತೆ ಇದೆ. ಕೊಹ್ಲಿ ಹಾಗೂ ರೋಹಿತ್ ಈಗಾಗಲೇ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಇದನ್ನೂ ಓದಿ Rohit Sharma: ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಕುಟುಂಬದ ಜತೆ ವಿದೇಶ ಪ್ರವಾಸ ಕೈಗೊಂಡ ರೋಹಿತ್
ಬಾಂಗ್ಲಾ ಸರಣಿಯ ವೇಳಾಪಟ್ಟಿ
ಸೆಪ್ಟೆಂಬರ್-19 ಮೊದಲ ಟೆಸ್ಟ್ ಪಂದ್ಯ. ತಾಣ: ಚೆನ್ನೈ
ಸೆಪ್ಟೆಂಬರ್-27 ದ್ವಿತೀಯ ಟೆಸ್ಟ್. ತಾಣ; ಕಾನ್ಪುರಅಕ್ಟೋಬರ್-6 ಮೊದಲ ಟಿ20. ತಾಣ: ಧರ್ಮಶಾಲಾ
ಅಕ್ಟೋಬರ್-9 ದ್ವಿತೀಯ ಟಿ20. ತಾಣ: ದೆಹಲಿಅಕ್ಟೋಬರ್-12 ಮೂರನೇ ಟಿ20. ತಾಣ: ಹೈದರಾಬಾದ್
ನ್ಯೂಜಿಲ್ಯಾಂಡ್ ಸರಣಿಯ ವೇಳಾಪಟ್ಟಿ
ಅಕ್ಟೋಬರ್-16 ಮೊದಲ ಟಿ20. ತಾಣ: ಬೆಂಗಳೂರು
ಅಕ್ಟೋಬರ್-24 ದ್ವಿತೀಯ ಟಿ20. ತಾಣ: ಪುಣೆ
ನವೆಂಬರ್-1 ಮೂರನೇ ಟಿ20. ತಾಣ: ಮುಂಬಯಿ
ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳಾಪಟ್ಟಿ
ಜನವರಿ-22 ಮೊದಲ ಟಿ20. ತಾಣ:ಚೆನ್ನೈ
ಜನವರಿ-25 ದ್ವಿತೀಯ ಟಿ20. ತಾಣ: ಕೋಲ್ಕತ್ತಾ
ಜನವರಿ-28 ಮೂರನೇ ಟಿ20. ತಾಣ: ರಾಜ್ಕೋಟ್
ಜನವರಿ-31 ನಾಲ್ಕನೇ ಟಿ20. ತಾಣ:ಪುಣೆ
ಫೆಬ್ರವರಿ-2 ಐದನೇ ಟಿ20. ತಾಣ: ಮುಂಬಯಿ
ಫೆಬ್ರವರಿ-6 ಮೊದಲ ಏಕದಿನ. ತಾಣ:ನಾಗ್ಪುರ
ಫೆಬ್ರವರಿ-9 ದ್ವಿತೀಯ ಏಕದಿನ. ತಾಣ: ಕಟಕ್
ಫೆಬ್ರವರಿ-12 ಮೂರನೇ ಏಕದಿನ. ತಾಣ: ಅಹಮದಾಬಾದ್