Site icon Vistara News

IND vs SL: ಇಂದು ಭಾರತ-ಲಂಕಾ ಮೊದಲ ಏಕದಿನ ಹಣಾಹಣಿ; ಎಷ್ಟು ಗಂಟೆಗೆ ಪಂದ್ಯ ಆರಂಭ?

IND vs SL: When and where to watch ODI, squads, predicted XI, venues

IND vs SL: When and where to watch ODI, squads, predicted XI, venues

ಕೊಲಂಬೊ: ಟಿ20 ಸರಣಿಯನ್ನು ಕ್ಲೀನ್‌ಸ್ವೀಪ್ ಸಾಧನೆಗೈದ ಭಾರತ ತಂಡ ಶುಕ್ರವಾರದಿಂದ ಆರಂಭವಾಗುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲು(IND vs SL) ಸಜ್ಜಾಗಿದೆ. ಇತ್ತಂಡಗಳ ಮೊದಲ ಪಂದ್ಯಕ್ಕೆ ಆರ್‌. ಪ್ರೇಮದಾಸ ಕ್ರೀಡಾಂಗಣ ಅಣಿಯಾಗಿದೆ. ಇಂದು ಮಧ್ಯಾಹ್ನ 2.30ರಿಂದ ಪಂದ್ಯ ಆರಂಭಗೊಳ್ಳಲಿದೆ. ಸೋನಿ ಸ್ಪೋರ್ಟ್ಸ್​ನಲ್ಲಿ ಪ್ರಸಾರ ಕಾಣಲಿದೆ.

ಕೊಹ್ಲಿ, ರೋಹಿತ್​ ಕಮ್​ಬ್ಯಾಕ್​


ಈ ಸರಣಿಯ ಮೂಲಕ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮ ಮತ್ತೆ ಏಕದಿನ ಪಂದ್ಯಕ್ಕೆ ಕಮ್​ಬ್ಯಾಕ್​ ಮಾಡಲಿದ್ದಾರೆ. ಕಳೆದ ವರ್ಷ(2023) ನವೆಂಬರ್​ 19ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿದ್ದ ಏಕದಿನ ಫೈನಲ್​ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್​ ಅಂತರದ ಸೋಲು ಕಂಡು ನಿರಾಸೆ ಅನುಭವಿಸಿತ್ತು. ಇದಾದ ಬಳಿಕ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ ಯಾವುದೇ ಏಕದಿನ ಪಂದ್ಯವನ್ನಾಡಿರಲಿಲ್ಲ. ಇದೀಗ ಬರೋಬ್ಬರಿ 9 ತಿಂಗಳ ಬಳಿಕ ಏಕದಿನ ಸರಣಿಯನ್ನಾಡಲು ಸಜ್ಜಾಗಿದ್ದಾರೆ. ಅತ್ತ ಇದು ಹೊಸ ಕೋಚ್‌ ಗೌತಮ್‌ ಗಂಭೀರ್‌ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ ಮೊದಲ ಏಕದಿನ ಸರಣಿಯಾಗಿದೆ. ಹೀಗಾಗಿ ನಿರೀಕ್ಷೆ ದೊಡ್ಡ ಮಟ್ಟದಿಂದ ಕೂಡಿದೆ.

ವಿಕೆಟ್​ ಕೀಪಿಂಗ್​ ವಿಚಾರದಲ್ಲಿ ಕನ್ನಡಿಗ ಕೆ.ಎಲ್‌ ರಾಹುಲ್‌ ಮತ್ತು ರಿಷಭ್‌ ಪಂತ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದರೂ ಕೂಡ ರಾಹುಲ್​ ಮೊದಲ ಆಯ್ಕೆಯ ಕೀಪರ್​ ಆಗಿದ್ದಾರೆ. ಏಕೆಂದರೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್​ ಅಗರ್ಕರ್​ ತಂಡ ಪ್ರಕಟಿಸುವ ವೇಳೆಯೇ ರಾಹುಲ್​ ಮೊದಲ ಕೀಪಿಂಗ್​ ಆಯ್ಕೆ ಎಂದು ಹೇಳಿದ್ದರು. ಮುಂದಿನ ವರ್ಷ ಪಾಕ್​ ಆತಿಥ್ಯದಲ್ಲಿ ನಡೆಯುವ ಏಕದಿನ ಮಾದರಿಯ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಟೂರ್ನಿಯ ನಿಟ್ಟಿನಲ್ಲಿ ಯುವ ಆಟಗಾರರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಬಹುದು.

ವಿರಾಟ್​ ಕೊಹ್ಲಿಗೆ(Virat Kohli) ಶ್ರೀಲಂಕಾ(India tour of Sri Lanka) ವಿರುದ್ಧದ ಏಕದಿನ ಸರಣಿಯಲ್ಲಿ ವಿಶೇಷ ದಾಖಲೆಯೊಂದನ್ನು ಬರೆಯುವ ಅವಕಾಶವಿದೆ. ಹೌದು, ಕೊಹ್ಲಿ 152 ರನ್ ಗಳಿಸಿದರೆ ಏಕದಿನ ಕ್ರಿಕೆಟ್​ನಲ್ಲಿ 14 ಸಾವಿರ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಇದನ್ನೂ ಓದಿ IND vs SL 1st ODI: ವಿಶ್ವಕಪ್​ ಫೈನಲ್​ ಸೋಲಿನ ಬಳಿಕ ಮೊದಲ ಏಕದಿನ ಆಡಲು ಸಜ್ಜಾದ ಕೊಹ್ಲಿ, ರೋಹಿತ್​, ಬುಮ್ರಾ

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಲಂಕಾ ತಂಡ ಭಾರತದ ಸವಾಲು ಎದುರಿಸೀತೇ ಎನ್ನುವುದು ಇಲ್ಲಿ ಪ್ರಮುಖ ಸಂಗತಿ. ತಂಡದ ಪ್ರಧಾನ ವೇಗಿಗಳಾದ ಮತೀಷ ಪತಿರಣ ಮತ್ತು ದಿಲ್ಶನ್‌ ಮಧುಶಂಕ ಹೊರಬಿದ್ದಿರುವುದರಿಂದ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಭಾರತ ತಂಡ


ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

Exit mobile version