Site icon Vistara News

IND vs SL: ಇಂದು ಲಂಕಾ ವಿರುದ್ಧ ಮೊದಲ ಟಿ20; ಹೇಗಿರಲಿದೆ ಭಾರತ ಆಡುವ ಬಳಗ?

IND vs SL

IND vs SL:India vs Sri Lanka 1st T20 Playing 11: Captain, teams, predictions, and other details

ಪೆಲೆಕೆಲೆ: ಇಂದು (ಶನಿವಾರ) ನಡೆಯುವ ಶ್ರೀಲಂಕಾ(IND vs SL) ತಂಡದ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲು ಟಿ20 ವಿಶ್ವ ಚಾಂಪಿಯನ್ ಭಾರತ ಸಜ್ಜಾಗಿ ನಿಂತಿದೆ. 2021ರ ಬಳಿಕ ಭಾರತ(Sri Lanka vs India) ಮೊದಲ ಬಾರಿಗೆ ಶ್ರೀಲಂಕಾದಲ್ಲಿ ಆಡುತ್ತಿರುವ ದ್ವಿಪಕ್ಷೀಯ ಸರಣಿ ಇದಾಗಿದೆ. ಪಂದ್ಯ ರಾತ್ರಿ 7ಕ್ಕೆ ಆರಂಭಗೊಳ್ಳಲಿದೆ.

ಟಿ20 ವಿಶ್ವ ಕಪ್​ ಆಡಿದ ಸೂರ್ಯಕುಮಾರ್​ ಯಾದವ್​ ನಾಯಕನಾಗಿದ್ದರೆ, ಯಶಸ್ವಿ ಜೈಸ್ವಾಲ್, ಶಿವಂ ದುಬೆ ಆಲ್‌ರೌಂಡರ್ ಅಕ್ಷರ್ ಪಟೇಲ್, ಹಾರ್ದಿಕ್​ ಪಾಂಡ್ಯ, ಸಂಜು ಸ್ಯಾಮ್ಸನ್​, ಅರ್ಶ್​ದೀಪ್​ ಸಿಂಗ್​, ಮೊಹಮ್ಮದ್​ ಸಿರಾಜ್​ ಅವರು ತಂಡದಲ್ಲಿದ್ದಾರೆ. ಇವರ ಜತೆ ವಾಷಿಂಗ್ಟನ್ ಸುಂದರ್, ಸ್ಪಿನ್ನರ್ ರವಿ ಅವರ ಬಲವೂ ತಂಡಕ್ಕೆ ಇದೆ.

ಪಿಚ್​ ರಿಪೋರ್ಟ್


ಪಲ್ಲೆಕೆಲೆ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚು ನೆರವು ನೀಡುತ್ತದೆ. ಮೊದಲು ಬ್ಯಾಟಿಂಗ್ ಮಾಡುವ ತಂಡಗಳು ಸಾಮಾನ್ಯವಾಗಿ 170 ರನ್‌ಗಳ ಗುರಿಯನ್ನು ದಾಟಿದರೆ ಮಾತ್ರ ಪಂದ್ಯದಲ್ಲಿ ಪೈಪೋಟಿ ನೀಡಬಹುದು. ಈ ಮೊತ್ತವನ್ನು ಇಲ್ಲಿ ಸ್ಪರ್ಧಾತ್ಮಕ ಮೊತ್ತವೆಂದು ಪರಿಗಣಿಸಲಾಗಿದೆ. ಹೀಗಾಗಿ ಮೊದಲು ಬ್ಯಾಟಿಂಗ್​ ನಡೆಸುವ ತಂಡ ಆದಷ್ಟು ಬೃಹತ್​ ಮೊತ್ತ ಬಾರಿಸರೆ ಉತ್ತಮ. ರಾತ್ರಿಯ ವೇಳೆ ಇಬ್ಬನಿಯ ಕಾಟ ಇರುವುದರಿಂದ ಚೇಸಿಂಗ್​ ನಡೆಸಲು ಉತ್ತಮ. ಹೀಗಾಗಿ ಟಾಸ್​ ಗೆದ್ದ ತಂಡ ಮೊದಲು ಫೀಲ್ಡಿಂಗ್​ ಆಯ್ಕೆಗೆ ಪ್ರಾಮುಖ್ಯತೆ ನೀಡಬಹುದು. ವೇಗಿಗಳಿಗಿಂತ ಇಲ್ಲಿ ಸ್ಪಿನ್ನ್​ ಬೌಲರ್​ಗಳು ಹೆಚ್ಚು ಪರಿಣಾಮ ಬೀರಬಹುದು. ಲಂಕಾದಲ್ಲಿ ಯಾವುದೇ ಮಳೆ ಭೀತಿ ಎದುರಾಗಿಲ್ಲ ಹೀಗಾಗಿ ಪಂದ್ಯ ಸಂಪೂರ್ಣವಾಗಿ ನಡೆಯಲಿದೆ.

ಮುಖಾಮುಖಿ


ಭಾರತ ಮತ್ತು ಶ್ರೀಲಂಕಾ ತಂಡಗಳು(SL vs IND Head to Head in T20) ಇದುವರೆಗೂ ಒಟ್ಟು 19 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ ಗರಿಷ್ಠ 19 ಪಂದ್ಯಗಳನ್ನು ಗೆದ್ದರೆ, ಶ್ರೀಲಂಕಾ 9 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಇತ್ತಂಡಗಳು ಕೊನೆಯ ಬಾರಿಗೆ ಟಿ20 ಪಂದ್ಯವನ್ನಾಡಿದ್ದು 2023ರಲ್ಲಿ. ಈ ಪಂದ್ಯದಲ್ಲಿ ಭಾರತ 91 ರನ್​ ಅಂತರದ ಗೆಲುವು ಸಾಧಿಸಿತ್ತು.

ಇದನ್ನೂ ಓದಿ India Tour of Sri Lanka 2024 : ಶ್ರೀಲಂಕಾ ತಂಡಕ್ಕೆ 3ನೇ ಹೊಡೆತ; ಭಾರತ ವಿರುದ್ಧದ ಟಿ20 ಸರಣಿಗೆ ಬಿನುರಾ ಫರ್ನಾಂಡೊ ಅಲಭ್ಯ

ಉಭಯ ತಂಡಗಳು ಮೊದಲ ಬಾರಿಗೆ ಟಿ20 ಆಡಿದ್ದು 2009ರಲ್ಲಿ. ಕೊಲಂಬೊದ ಪ್ರೇಮದಾಸ ಕ್ರಿಕೆಟ್​ ಸ್ಟೆಡಿಯಂನಲ್ಲಿ ನಡೆದ ಪಂದ್ಯ ಇದಾಗಿತ್ತು. ಇಲ್ಲಿ ಧೋನಿ ಪಡೆ 3 ವಿಕೆಟ್​ಗಳ ಗೆಲುವು ಕಂಡಿತ್ತು. ಶ್ರೀಲಂಕಾ ತಂಡ ಭಾರತ ವಿರುದ್ಧ ಮೊದಲ ಟಿ20 ಗೆಲುವು ಸಾಧಿಸಿದ್ದು ಕೂಡ 2009ರಲ್ಲಿ. ನಾಗ್ಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ. ಇಲ್ಲಿ ಲಂಕಾ ತಂಡ 29 ರನ್​​ಗಳ ಜಯ ಗಳಿಸಿತ್ತು. ಪ್ರಸ್ತುತ ಲಂಕಾ ತಂಡವನ್ನು ನೋಡುವಾಗ ಭಾರತ ಆರಾಮದಾಯಕವಾಗಿ ಈ ಸರಣಿ ಗೆಲ್ಲುವಂತಿದೆ.

ಸಂಭಾವ್ಯ ತಂಡಗಳು

ಭಾರತ: ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್ (ನಾಯಕ), ರಿಷಬ್ ಪಂತ್ (ವಿಕೀ), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್.

ಶ್ರೀಲಂಕಾ: ಅವಿಷ್ಕ ಫೆರ್ನಾಂಡೋ, ಚರಿತ್ ಅಸಲಂಕ (ನಾಯಕ), ದಿನೇಶ್ ಚಾಂಡಿಮಾಲ್, ಕುಸಲ್ ಮೆಂಡಿಸ್ (ವಿಕೀ), ಪಾತುಮ್ ನಿಸ್ಸಾಂಕ, ವನಿಂದು ಹಸರಂಗ, ದಸುನ್ ಶಾನಕ, ಮಥೀಶ ಪತಿರಣ, ಮಹೇಶ್ ತೀಕ್ಷಣ, ದುನಿತ್ ವೆಲ್ಲಲಾಗೆ, ಚಾಮಿಂದು ವಿಕ್ರಮಸಿಂಘೆ

Exit mobile version