ಬಾರ್ಬಡಾಸ್: ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ(IND vs WI 1st ODI) ನಡೆಸಿದ ಬ್ಯಾಟಿಂಗ್ ಕ್ರಮಾಂಕದ ಪ್ರಯೋಗಕ್ಕೆ ನಾಯಕ ರೋಹಿತ್ ಶರ್ಮ(Rohit Sharma) ಅವರು ಸ್ಪಷ್ಟನೆ ನೀಡಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್ಗಳ ಗೆಲುವು ಸಾಧಿಸಿ ಸರಣಿಯಲ್ಲಿ ಗೆಲುವಿನ ಖಾತೆ ತೆರೆದಿದೆ.
ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ರೋಹಿತ್ ಶರ್ಮ, “ಏಕದಿನ ವಿಶ್ವಕಪ್ ದೃಷ್ಟಿಯಿಂದ ಎಲ್ಲ ಆಟಗಾರರಿಗೂ ಅವಕಾಶ ಕಲ್ಪಿಸುವುದು ನಮ್ಮ ಉದ್ದೇಶವಾಗಿತ್ತು. ಈ ಮೂಲಕ ಆಟಗಾರ ಸಾಮಥ್ಯವನ್ನು ತಿಳಿಯುವ ಪ್ರಯೋಗ ಇದಾದಿತ್ತು. ಇದೇ ಕಾರಣಕ್ಕೆ ನಾವು ಯುವ ಆಟಗಾರರಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡಲು ನಿರ್ಧರಿಸಿದೆವು ಆದರೆ ಈ ರೀತಿಯ ಅವಕಾಶಗಳು ಮುಂದಿನ ಪಂದ್ಯಗಳಲ್ಲೂ ಸಿಗುತ್ತದೆ ಎಂಬುದನ್ನು ನಾನು ಹೇಳುವುದಿಲ್ಲ” ಒಟ್ಟಾರೆ ವಿಶ್ವಕಪ್ಗೆ ಆಟಗಾರರ ಸಿದ್ಧತೆಯಲ್ಲಿ ಹಕವು ಪ್ರಯೋಗ ನಡೆಸಲಿದ್ದೇವೆ” ಎಂದು ಹೇಳಿದರು.
ಈ ಪಂದ್ಯದಲ್ಲಿ ರೋಹಿತ್ ಅವರು ತಮ್ಮ ಆರಂಭಿಕ ಸ್ಥಾನದ ಬದಲು 7ನೇ ಸ್ಥಾನದಲ್ಲಿ ಬ್ಯಾಟಿಂಗ್ ನಡೆಸಿದರು. ಇಶಾನ್ ಕಿಶನ್ ಅವರು ಆರಂಭಿಕನಾಗಿ ಕಣಕ್ಕಿಳಿದು ಅರ್ಧಶತಕ ಬಾರಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ ಬಗ್ಗೆ ಅಭಿಪ್ರಾಯ ಹಂಚಿಕೊಂಡ ರೋಹಿತ್, ತಾನು ಭಾರತ ಪರ ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದೆ. ಇದೀಗ ಹಲವು ವರ್ಷಗಳ ಬಳಿಕ ಈ ಕ್ರಮಾಂಕದಲ್ಲಿ ಆಡುತ್ತಿರುವುದು ಖುಷಿ ಮತ್ತು ಹಳೆಯ ನೆನಪುಗಳು ಮರುಕಳಿಸಿದವು ಎಂದರು.
ಇದನ್ನೂ ಓದಿ IND vs WI: ವಿಂಡೀಸ್ ವಿರುದ್ಧ ದಾಖಲೆ ಬರೆದ ಕುಲ್ದೀಪ್ ಯಾದವ್
ಇಲ್ಲಿನ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ(Kensington Oval, Bridgetown, Barbados) ಗುರುವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ವಿಂಡೀಸ್ ಕುಲ್ದೀಪ್ ಯಾದವ್ ಮತ್ತು ಜಡೇಜಾ ಸ್ಪಿನ್ ಮೋಡಿಗೆ ಸಿಲುಕಿ 23 ಓವರ್‌ಗಳಲ್ಲಿ 114 ರನ್ನಿಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಭಾರತ 22.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿ ಜಯ ಸಾಧಿಸಿತು.
ಚೇಸಿಂಗ್ ವೇಳೆ ಇಶಾನ್ ಕಿಶನ್ 52, ಗಿಲ್ 7, ಸೂರ್ಯಕುಮಾರ್ 19, ಶಾರ್ದೂಲ್ ಠಾಕೂರ್ 1 ರನ್ ಗಳಿಸಿ ಔಟಾದರು. ಜಡೇಜಾ ಔಟಾಗದೆ 16 ಮತ್ತು ಕೆಳ ಕ್ರಮಾಂದಲ್ಲಿ ಆಡಲಿಳಿದ ರೋಹಿತ್ ಶರ್ಮಾ ಔಟಾಗದೆ 12 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಮೂರು ಓವರ್ ನಡೆಸಿ ಕೇವಲ 6 ರನ್ 4 ವಿಕೆಟ್ ಪಡೆದ ಕುಲ್ದೀಪ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.