Site icon Vistara News

IND vs WI 1st ODI: ಸಿರಾಜ್​ ಹೊರಬಿದ್ದ ಬಳಿಕ ಭಾರತದ ಆಡುವ ಬಳಗ ಹೀಗಿರಲಿದೆ

rohit sharma and shubman gill

ಬಾರ್ಬಡೋಸ್​: ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಏಕದಿನ ಪಂದ್ಯ(IND vs WI 1st ODI) ಆರಂಭಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಂತೆ ಬಿಸಿಸಿಐ(BCCI) ಅಚ್ಚರಿಯ ನಿರ್ಧಾರವೊಂದನ್ನು ಪ್ರಕಟಿಸಿತು. ಕೆಲಸದ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮೊಹಮ್ಮದ್​ ಸಿರಾಜ್​ಗೆ(Mohammed Siraj) ವಿಶ್ರಾಂತಿ ನೀಡಿ ಅವರನ್ನು ಭಾರತಕ್ಕೆ ಕಳುಹಿಸಿಕೊಟ್ಟಿದೆ. ತಂಡದಲ್ಲಿದ್ದ ಏಕೈಕ ಅನುಭವಿ ಬೌಲರ್ ಕೂಡ ಹೊರಬಿದ್ದ ಕಾರಣ ಇದೀಗ ಆಡುವ ಬಳಗದ ಬಹತ್ವದ ಬದಲಾವಣೆ ಸಂಭವಿಸುವ ಸಾಧ್ಯತೆ ಇದೆ.

2023ರ ಏಕದಿನ ವಿಶ್ವಕಪ್(icc world cup 2023) ಮತ್ತು ಏಷ್ಯಾಕಪ್​(asia cup 2023) ಗಮನದಲ್ಲಿಟ್ಟುಕೊಂಡು ಸಿರಾಜ್ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಸಿರಾಜ್ ಅವರು ಟೆಸ್ಟ್ ತಂಡದಲ್ಲಿದ್ದ ಅಶ್ವಿನ್, ಅಜಿಂಕ್ಯ ರಹಾನೆ, ಕೆಎಸ್ ಭರತ್ ಮತ್ತು ನವದೀಪ್ ಸೈನಿ ಜತೆ ಭಾರತಕ್ಕೆ ಪ್ರಯಾಣಿಸಲಿದ್ದಾರೆ.

ಜಸ್​ಪ್ರೀತ್​ ಬುಮ್ರಾ, ಶ್ರೇಯಸ್​ ಅಯ್ಯರ್​ ಮತ್ತು ಕೆ.ಎಲ್​ ರಾಹುಲ್​ ಗಾಯಗೊಂಡು ತಂಡದಿಂದ ಹೊರಗುಳಿದಿದ್ದಾರೆ. ಅವರ ಕಮ್​ಬ್ಯಾಕ್​ ಯಾವಾಗ ಎಂದು ಇನ್ನೂ ಖಚಿತವಾಗಿಲ್ಲ. ಹೀಗಿರುವಾಗ ಲಭ್ಯವಿರುವ ಆಟಗಾರರಿಗೆ ಗಾಯಗಳಾಗಬಾರದು ಎಂದು ಬಿಸಿಸಿಐ ಸಿರಾಜ್​ಗೆ ವಿಶ್ರಾಂತಿ ನೀಡಿದೆ. ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಿ ಅವರನ್ನೂ ಬೆಳೆಸುವುದು ಬಿಸಿಸಿಐ ಯೋಜನೆಯಾಗಿದೆ.

ಸಿರಾಜ್ ಅವರ ಅನುಪಸ್ಥಿತಿಯಲ್ಲಿ ಉಮ್ರಾನ್‌ ಮಲಿಕ್‌, ಜಯ್​ದೇವ್​ ಉನಾದ್ಕತ್​ ಮತ್ತು ಮುಖೇಶ್​ ಕುಮಾರ್​ ಅವರು ಭಾರತದ ವೇಗದ ಬೌಲಿಂಗ್​ ವಿಭಾಗ ನಿರ್ವಹಿಸಲಿದ್ದಾರೆ. ಉನಾದ್ಕತ್​ ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ 10 ವರ್ಷಗಳ ಬಳಿಕ ಟೀಮ್​ ಇಂಡಿಯಾ ಪರ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡಂತಾಗುತ್ತದೆ. ಸ್ಯಾರಸ್ಯವೆಂದರೆ ಉನಾದ್ಕತ್​ ಅವರು ಕೊನೆಯ ಬಾರಿ ಏಕದಿನ ಪಂದ್ಯ ಆಡಿದ್ದು ವಿಂಡೀಸ್​ ವಿರುದ್ಧವೇ. ಇದೀಗ ಮತ್ತೆ ವಿಂಡೀಸ್​ ಸರಣಿಯ ಮೂಲಕವೇ ಕಮ್​ಬ್ಯಾಕ್​ ಮಾಡಲಿದ್ದಾರೆ.

ಭಾರತ ಸಂಭಾವ್ಯ ಆಡುವ ಬಳಗ

ಭಾರತ: ರೋಹಿತ್‌ ಶರ್ಮ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌/ ಇಶಾನ್‌ ಕಿಶನ್‌, ಹಾರ್ದಿಕ್‌ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜ, ಯಜುವೇಂದ್ರ ಚಹಲ್‌, ಜೈದೇವ್‌ ಉನಾದ್ಕತ್‌, ಉಮ್ರಾನ್‌ ಮಲಿಕ್‌, ಮುಕೇಶ್‌ ಕುಮಾರ್‌.

Exit mobile version