Site icon Vistara News

IND vs WI 1st T20: ಭಾರತ-ವಿಂಡೀಸ್​ ಟಿ20 ಮುಖಾಮುಖಿ, ಸಂಭಾವ್ಯ ತಂಡ, ಹವಾಮಾನ ವರದಿ ಹೀಗಿದೆ!

Brian Lara Stadium, Tarouba, Trinidad

ಟ್ರಿನಿಡಾಡ್: ವಿಂಡೀಸ್​ ವಿರುದ್ಧದ ಟೆಸ್ಟ್​ ಮತ್ತು ಏಕದಿನ ಸರಣಿಯನ್ನು ಗೆದ್ದು ಬೀಗಿದ ಟೀಮ್​ ಇಂಡಿಯಾ ಆಟಗಾರರು ಇದೀಗ ಟಿ20(IND vs WI 1st T20) ಸರಣಿಯನ್ನಾಡಲು ರೆಡಿಯಾಗಿದ್ದಾರೆ. 5 ಪಂದ್ಯಗಳ ಈ ಸರಣಿಯ ಮೊದಲ ಪಂದ್ಯ ಆಗಸ್ಟ್​ 3(ಗುರುವಾರ) ರಿಂದ ಆರಂಭಗೊಳ್ಳಲಿದೆ. ಪಂದ್ಯ ಭಾರತೀಯ ಕಾಲಮಾನ ರಾತ್ರಿ 8ರಿಂದ ಆರಂಭಗೊಳ್ಳಲಿದೆ. ಪಂದ್ಯದ ಪಿಚ್​ ರಿಪೋರ್ಟ್​ ಮತ್ತು ಸಂಭಾವ್ಯ ತಂಡದ ಮಾಹಿತಿ ಇಲ್ಲಿದೆ.

ಮುಖಾಮುಖಿ

ಭಾರತ ಮತ್ತು ವೆಸ್ಟ್​ ಇಂಡೀಸ್​ ಇದುವರೆಗೆ 25 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ(india vs west indies t20 head to head). ಭಾರತ 17 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದರೆ, ವಿಂಡೀಸ್​ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ರದ್ದುಗೊಂಡಿದೆ. ಉಭಯ ತಂಡಗಳು ಮೊದಲು ಟಿ20 ಆಡಿದ್ದು 2009ರಲ್ಲಿ. ಈ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ತಂಡ 7 ವಿಕೆಟ್​ಗಳ ಗೆಲುವು ಕಂಡಿತ್ತು. ಭಾರತ ತಂಡ ವಿಂಡೀಸ್​ ವಿರುದ್ಧ ಮೊದಲ ಟಿ20 ಪಂದ್ಯ ಗೆದ್ದಿದ್ದು 2011ರಲ್ಲಿ 16 ರನ್​ಗಳಿಂದ ಭಾರತ ಗೆಲುವು ಸಾಧಿಸಿತ್ತು.

ಪಿಚ್​ ರಿಪೋರ್ಟ್​

ಟರೂಬದ (ಟ್ರಿನಿಡಾಡ್‌ ಆ್ಯಂಡ್‌ ಟೊಬೆಗೊ) ಬ್ರಿಯಾನ್‌ ಲಾರಾ ಸ್ಟೇಡಿಯಂನಲ್ಲಿ 4 ಟಿ20 ಪಂದ್ಯಗಳು ನಡೆದಿದೆ. ಇದರಲ್ಲಿ ಮೂರು ಪಂದ್ಯಗಳು ಚೇಸಿಂಗ್​ ನಡೆಸಿದ ತಂಡಗಳು ಗೆದ್ದಿವೆ. ಕೇವಲ ಒಂದು ಪಂದ್ಯ ಮಾತ್ರ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಗೆದ್ದಿದೆ. ಹೀಗಾಗಿ ಟಾಸ್​ ಗೆದ್ದ ತಂಡ ಬೌಲಿಂಗ್​ ಆಯ್ಕೆ ಮಾಡುವ ಸಾಧ್ಯತೆ ಅಧಿಕ. ಮೊದಲು ಇನಿಂಗ್ಸ್​ನಲ್ಲಿ ಇಲ್ಲಿ 145 ರನ್​ ಎವರೇಜ್​ ಮೊತ್ತವಾಗಿದೆ. ಇಲ್ಲಿ ಅತ್ಯಧಿಕ ಮೊತ್ತ ಪೇರಿಸಿದ ದಾಖಲೆ ಭಾರತ ತಂಡದ ಹೆಸರಿನಲ್ಲಿದೆ. ಭಾರತ 190 ರನ್​ ಬಾರಿಸಿತ್ತು. ಬೌಲಿಂಗ್​ ಸ್ನೇಹಿ ಇದಾಗಿದೆ.

ಹವಾಮಾನ ವರದಿ

ಈ ಪಂದ್ಯಕ್ಕೆ ಮಳೆ ಕಾಟ ಇರದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಅಂತಿಮ ಏಕದಿನ ಪಂದ್ಯವೂ ಇದೇ ಮೈದಾನದಲ್ಲಿ ನಡೆದಿತ್ತು. ಈ ಪಂದ್ಯಕ್ಕೆ ಯಾವುದೇ ಮಳೆ ಕಾಟ ಇರಲಿಲ್ಲ. ಹೀಗಾಹಿ ಟಿ20 ಪಂದ್ಯವೂ ನಿರಾಳವಾಗಿ ನಡೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ಗಾಳಿಯ ಕಾಟ ಕೊಂಚಮಟ್ಟಿನಲ್ಲಿ ಇರುವು ಸಾಧ್ಯತೆ ಇದೆ.

ಇದನ್ನೂ ಓದಿ IND vs WI 3rd Odi: ಐಷಾರಾಮಿ ಬೇಡ,ಮೂಲ ಸೌಕರ್ಯ ಒದಗಿಸಿ; ಹಾರ್ದಿಕ್​ ಪಾಂಡ್ಯ ಅಸಮಾಧಾನ

ಸಂಭಾವ್ಯ ತಂಡ

ಭಾರತ: ಇಶಾನ್​ ಕಿಶನ್​, ಶುಭಮನ್​ ಗಿಲ್​, ಯಶಸ್ವಿ ಜೈಸ್ವಾಲ್​, ಸೂರ್ಯಕುಮಾರ್​ ಯಾದವ್​, ಹಾರ್ದಿಕ್​​ ಪಾಂಡ್ಯ(ನಾಯಕ),ಸಂಜು ಸ್ಯಾಮ್ಸನ್, ಯಜುವೇಂದ್ರ ಚಹಲ್​, ಕುಲ್​ದೀಪ್​ ಯಾದವ್​, ಆರ್ಶ್​ದೀಪ್​ ಸಿಂಗ್​, ಉಮ್ರಾನ್​ ಮಲಿಕ್​, ಮುಖೇಶ್​ ಕುಮಾರ್​.

ವೆಸ್ಟ್​ ಇಂಡೀಸ್​: ರೋವ್ಮನ್ ಪೊವೆಲ್‌ (ನಾಯಕ), ಕೈಲ್ ಮೇಯರ್ಸ್ (ಉಪ ನಾಯಕ), ರೋಸ್ಟನ್ ಚೇಸ್, ಶಿಮ್ರೋನ್ ಹೆಟ್​ಮೇರ್​, ಜೇಸನ್ ಹೋಲ್ಡರ್, ಶೈಯ್​ ಹೋಪ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ನಿಕೋಲಸ್ ಪೂರನ್, ರೊಮಾರಿಯೋ ಶೆಫರ್ಡ್​, ಒಶಾನೆ ಥಾಮಸ್.

ವೇಳಾಪಟ್ಟಿ

ಮೊದಲ ಟಿ20 ಪಂದ್ಯ ಆಗಸ್ಟ್​ 3, ಸ್ಥಳ: ಟ್ರಿನಿಡಾಡ್

ದ್ವಿತೀಯ ಟಿ20 ಪಂದ್ಯ ಆಗಸ್ಟ್​ 6, ಸ್ಥಳ: ಗಯಾನಾ

ಮೂರನೇ ಟಿ20 ಪಂದ್ಯ ಆಗಸ್ಟ್​ 8, ಸ್ಥಳ: ಗಯಾನಾ

ನಾಲ್ಕನೇ ಟಿ20 ಪಂದ್ಯ ಆಗಸ್ಟ್​ 12, ಸ್ಥಳ: ಫ್ಲೋರಿಡಾ

5ನೇ ಟಿ20 ಪಂದ್ಯ ಆಗಸ್ಟ್​ 13, ಸ್ಥಳ: ಫ್ಲೋರಿಡಾ

Exit mobile version