Site icon Vistara News

IND vs WI 1st Test: ಭಾರತ ಟೆಸ್ಟ್​ ತಂಡಕ್ಕೆ ಪದಾರ್ಪಣೆ ಮಾಡಿದ ಜೈಸ್ವಾಲ್​,ಇಶಾನ್​ ಕಿಶನ್​

Yashasvi Jaiswal and Ishan Kishan pose after receiving their Test caps

ರೊಸೇಯೂ (ಡೊಮಿನಿಕಾ): ವಿಂಡೀಸ್(IND vs WI 1st Test)​ ವಿರುದ್ಧ 2 ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯ ಬುಧವಾರ ಆರಂಭಗೊಂಡಿದೆ. ಈ ಪಂದ್ಯದಲ್ಲಿ ಟಾಸ್​ ಸೋತ ಭಾರತ ಬೌಲಿಂಗ್​ ನಡೆಸುತ್ತಿದೆ. ಭಾರತ ಪರ ಇಶಾನ್​ ಕಿಶನ್​(Ishan Kishan) ಮತ್ತು ಯಶಸ್ವಿ ಜೈಸ್ವಾಲ್(Yashasvi Jaiswal)​ ಅವರು ಚೊಚ್ಚಲ ಕ್ಯಾಪ್​ ಧರಿಸಿದರು.

ಐಪಿಎಲ್​ 2023ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಜೈಸ್ವಾಲ್ ಅವರು 625 ರನ್ ಗಳಿಸಿ ಮಿಂಚಿದ್ದರು. ಇದು ಐಪಿಎಲ್ ಋತುವಿನಲ್ಲಿ ಅಂತಾರಾಷ್ಟ್ರೀಯ ಪಂದ್ಯವಾಡದ ಆಟಗಾರ ಪೇರಿಸಿದ ಅತಿ ಹೆಚ್ಚು ರನ್. ದೇಶೀಯ ಕ್ರಿಕೆಟ್​ನಲ್ಲೂ ಅತ್ಯುತ್ತಮ ರನ್​ ಗಳಿಕೆ ಮಾಡಿದ್ದ ಅವರು ಆಸೀಸ್​ ವಿರುದ್ಧದ ಡಬ್ಲ್ಯುಟಿಸಿ ಫೈನಲ್​​ನಲ್ಲಿ ಭಾರತ ತಂಡದ ಭಾಗವಾಗಿದ್ದರು. ಆದರೆ ಅಲ್ಲಿ ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ವಿಂಡೀಸ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದಾರೆ. ಈ ಮೂಲಕ ಕೆಂಪು-ಚೆಂಡಿನ ಆಟದ ಸ್ವರೂಪದಲ್ಲಿ ತನ್ನ ಪ್ರದರ್ಶನವನ್ನು ತೋರ್ಪಡಿಸುವ ವಿಶ್ವಾಸದಲ್ಲಿದ್ದಾರೆ.

ಇಶಾನ್​ ಕಿಶನ್​ ಅವರು ಈಗಾಗಲೇ ಏಕದಿನ ಮತ್ತು ಟಿ 20 ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಜತೆಗೆ ಅನೇಕ ಟೆಸ್ಟ್​ ಸರಣಿಗೆ ಆಯ್ಕೆಯೂ ಆಗಿದ್ದರೂ, ಆದರೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಶ್ರೀಕರ್​ ಭರತ್​ ಅವರಿಗೆ ಹೆಚ್ಚಿನ ಅವಕಾಶ ನೀಡಲಾಗಿತ್ತು. ಆದರೆ ಭರತ್​ ವಿಕೆಟ್​ ಕೀಪಿಂಗ್​ ಮತ್ತು ಬ್ಯಾಟಿಂಗ್​ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಇದೇ ಕಾರಣದಿಂದ ಇಶಾನ್​ ಕಿಶನ್​ಗೆ ಈ ಸರಣಿಯಲ್ಲಿ ಆಡುವ ಅವಕಾಶ ನೀಡಲಾಗಿದೆ. ಇಶಾನ್​ ಕಿಶನ್​ಗೆ ವಿರಾಟ್​ ಕೊಹ್ಲಿ ಕ್ಯಾಪ್​ ನೀಡಿ ತಂಡಕ್ಕೆ ಬರಮಾಡಿಕೊಂಡರು. ಜೈಸ್ವಾಲ್​ಗೆ ನಾಯಕ ರೋಹಿತ್​ ಶರ್ಮ ಕ್ಯಾಪ್ ನೀಡಿದರು.

ಜೈಸ್ವಾಲ್ ಅವರು ರೋಹಿತ್ ಜತೆ ಭಾರತದ ಇನಿಂಗ್ಸ್​ ಆರಂಭಿಸಿಲಿದ್ದಾರೆ. ಈ ಹಿಂದೆ ಆರಂಭಿಕನಾಗಿ ಆಡುತ್ತಿದ್ದ ಶುಭಮನ್​ ಗಿಲ್​ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಈ ಮೂಲಕ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅವರ ಸ್ಥಾನವನ್ನು ಗಿಲ್​ ತುಂಬಲಿದ್ದಾರೆ. ಇಶಾನ್​ ಕಿಶನ್​ ಮಾತ್ರ ಯಾವ ಕ್ರಮಾಂದಲ್ಲಿ ಆಡಲಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

ಇದನ್ನೂ ಓದಿ Ishan Kishan: ವಿಂಡೀಸ್​ ಸರಣಿಗೂ ಮುನ್ನ ಎನ್​ಸಿಎಗೆ ಭೇಟಿ ನೀಡಲಿದ್ದಾರೆ ​ಇಶಾನ್​ ಕಿಶನ್!

ಭಾರತ ತಂಡ

ಭಾರತ: ರೋಹಿತ್​ ಶರ್ಮ(ನಾಯಕ), ಯಶಸ್ವಿ ಜೈಸ್ವಾಲ್​,ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ (ಉಪ ನಾಯಕ),ಇಶಾನ್ ಕಿಶನ್ (ವಿ.ಕೀ), ಆರ್ ಅಶ್ವಿನ್, ಆರ್ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್​ ಸಿರಾಜ್, ಜಯದೇವ್ ಉನದ್ಕತ್.

Exit mobile version