Site icon Vistara News

IND vs WI 2nd Odi: ದ್ವಿತೀಯ ಏಕದಿನದಲ್ಲಿ ಸೋಲು; ಕೋಚ್​ ದ್ರಾವಿಡ್​ ವಿರುದ್ಧ ಆಕ್ರೋಶ

Rahul dravid

ಬಾರ್ಬಡಾಸ್:​ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್​ ಕ್ರಮಾಂಕದ ಪ್ರಯೋಗ ನಡೆಸಿದ ಭಾರತ ತಂಡ ದ್ವಿತೀಯ ಏಕದಿನದಲ್ಲಿ(IND vs WI 2nd Odi) ನಾಯಕ ರೋಹಿತ್​ ಶರ್ಮ(Rohit Sharma) ಮತ್ತು ವಿರಾಟ್​ ಕೊಹ್ಲಿ(Virat Kohli)ಗೆ ವಿಶ್ರಾಂತಿ ನೀಡಿತು. ಉಪನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ(Hardik Pandya)​ ತಂಡವನ್ನು ಮುನ್ನಡೆಸಿದರು. ಆದರೆ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್​ಗಳ ಸೋಲು ಕಂಡಿತು.

ಏಷ್ಯಾ ಕಪ್​ ಮತ್ತು ವಿಶ್ವಕಪ್​ಗೆ ಕೆಲ ದಿನಗಳು ಮಾತ್ರ ಉಳಿದಿರುವಾಗ ತಂಡ ಸಂಯೋಜನೆಗೆ ಉತ್ತಮ ಅವಕಾಶ ಎನಿಸಿರುವ ಈ ಸರಣಿಯಲ್ಲಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಪ್ರಯೋಗ ನಡೆಸಿದ ತಂಡದ ಕೋಚ್​ ರಾಹುಲ್​ ದ್ರಾವಿಡ್​(Rahul Dravid) ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು ಅವರನ್ನು ತಂಡದ ಕೋಚ್​ ಹುದ್ದೆಯಿಂದ ಕೈಬಿಡಬೇಕು ಎನ್ನುವ ಮಾತುಗಳು ಕೂಡ ಕೇಳಿಬಂದಿವೆ. ಹಾಲಿ ವರ್ಷದಲ್ಲಿ 11 ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್​ 9 ಮತ್ತು ವಿರಾಟ್​ ಅವರು 10 ಪಂದ್ಯಗಳನ್ನು ಆಡಿದ್ದಾರೆ. ಅದಲ್ಲದೆ ಟಿ20 ಸರಣಿಯಿಂದ ಉಭಯ ಆಟಗಾರರನ್ನು ಕೈಬಿಟ್ಟಿರುವಾಗ ಏಕದಿನ ಪಂದ್ಯದಲ್ಲಿ ಆಡಿಸಬೇಕಿತ್ತು ಎಂಬುದು ಹಲವರ ಅಭಿಪ್ರಾಯವಾಗಿದೆ.

ವಿಶ್ವಕಪ್​ ಸಮಯದಲ್ಲಿ ಉತ್ತಮ ಫಾರ್ಮ್​ನಲ್ಲಿರುವ ಆಟಗಾರರಿಗೆ ವಿಶ್ರಾಂತಿ ಮತ್ತು ಅವರ ಬ್ಯಾಟಿಂಗ್​ ಕ್ರಮಾಂಕವನ್ನು ಬದಲಿಸುವುದು ಅತ್ಯಂತ ಅಪಾಯಕಾರಿ. ಇದು ತಂಡದ ಮೇಲೆ ದೊಡ್ಡ ಪ್ರಭಾವ ಬೀರಲಿದೆ. ಕಳೆದ ಹಲವು ವರ್ಷಗಳಿಂದ ನಡೆಸದ ಈ ಪ್ರಯೋಗ ಇದೀಗ ವಿಶ್ವಕಪ್​ಕೆ ಕೆಲ ದಿನಗಳು ಬಾಕಿ ಇರುವಾಗ ನಡೆಸಿದರೆ ಏನೂ ಪ್ರಯೋಜನವಿಲ್ಲ ಎಂದು ಅನೇಕ ಮಾಜಿ ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ IND vs WI: ಭಾರತಕ್ಕೆ 6 ವಿಕೆಟ್​ ಸೋಲು; ಸರಣಿಯಲ್ಲಿ ಹಿಡಿತ ಸಾಧಿಸಿದ ವಿಂಡೀಸ್​

ಕೋಚ್​ ದ್ರಾವಿಡ್​ ಅವರು ಮಾತ್ರ ವಿಶ್ವಕಪ್​ಗೆ ಬಲಿಷ್ಠ ತಂಡವನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಯುವ ಆಟಗಾರರಿಗೆ ಅವಕಾಶ ಕಲ್ಪಿಸಿ ನಮ್ಮ ಬೆಂಚ್​ ಸಾಮರ್ಥ್ಯವನ್ನು ಪರೀಕ್ಷಿಸಲು ಈ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ ಎಂದಿದ್ದಾರೆ.

Exit mobile version