Site icon Vistara News

IND vs WI 3rd Odi: ಐಷಾರಾಮಿ ಬೇಡ,ಮೂಲ ಸೌಕರ್ಯ ಒದಗಿಸಿ; ಹಾರ್ದಿಕ್​ ಪಾಂಡ್ಯ ಅಸಮಾಧಾನ

Hardik Pandya slams West Indies cricket board

ಟ್ರಿನಿನಾಡ್​: ವೆಸ್ಟ್​ ಇಂಡೀಸ್​ ವಿರುದ್ಧ ಮಂಗಳವಾರ ನಡೆದ ಅಂತಿಮ ಏಕದಿನ(IND vs WI 3rd Odi) ಪಂದ್ಯದಲ್ಲಿ ಭಾರತ 200 ರನ್​ಗಳ ಭರ್ಜರಿ ಗೆಲುವು ಸಾಧಿಸಿ ಸರಣಿ ತನ್ನದಾಗಿಸಿಕೊಂಡಿತು. ಆದರೆ ಹಂಗಾಮಿ ನಾಯಕ ಹಾರ್ದಿಕ್​ ಪಾಂಡ್ಯ(Hardik Pandya) ಅವರು ವಿಂಡೀಸ್​ ಕ್ರಿಕೆಟ್​ ಮಂಡಳಿಯ(West Indies cricket board) ಬಗ್ಗೆ ಬೇಸರದ ಮಾತುಗಳನ್ನಾಡಿದ್ದಾರೆ. ನಮಗೆ ಯಾವುದೇ ಐಷಾರಾಮಿ ಸೌಕರ್ಯ ಬೇಡ. ಆದರೆ ಕನಿಷ್ಠ ಪಕ್ಷ ಮೂಲ ಸೌಕರ್ಯಗಳನ್ನಾದರೂ ಸರಿಯಾಗಿ ಕಲ್ಪಿಸಬೇಕು ಎಂದು ಹೇಳಿದ್ದಾರೆ.

ಏಕದಿನ ಸರಣಿ ಆರಂಭದ ವೇಳೆಯೂ ಇಲ್ಲಿ ಭಾರತೀಯ ಆಟಗಾರರಿಗೆ ಸರಿಯಾದ ವಿಮಾನ ಸೇವೆ ಲಭ್ಯವಾಗದೆ ಆಟಗಾರರು ಬೆಳಗಿನ ಜಾವದವರೆಗೆ ವಿಮಾನ ನಿಲ್ದಾಣದಲ್ಲೇ ಕಾಲ ಕಳೆದ ಘಟನೆಯೂ ವರದಿಯಾಗಿತ್ತು. ಅಂತಿಮ ಪಂದ್ಯದ ಬಳಿಕ ಮಾತನಾಡಿದ ಹಾರ್ದಿಕ್​ ಪಾಂಡ್ಯ, ಪ್ರವಾಸಿ ತಂಡಕ್ಕೆ ಲಭ್ಯವಾಗುತ್ತಿರುವ ಕಳಪೆ ಆತಿಥ್ಯದ ಬಗ್ಗೆ ಅಸಮಾಧಾನ ಹೊರಹಾಕಿ ಸಾಮಾನ್ಯ ವ್ಯವಸ್ಥೆಗಳನ್ನು ಒದಗಿಸಲು ವಿಫಲವಾಗಿರುವ ವೆಸ್ಟ್‌ ಇಂಡೀಸ್ ಕ್ರಿಕೆಟ್‌ ಮಂಡಳಿ ಈ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

“ವೆಸ್ಟ್​ ಇಂಡೀಸ್​ ಪ್ರವಾಸವೆಂದರೆ ಎಲ್ಲ ಕ್ರಿಕೆಟ್ ಆಟಗಾರರು ಈ ಸರಣಿಯನ್ನು ಆಡಲು ಎದುರು ನೋಡುತ್ತಿರುತ್ತಾರೆ. ಆದರೆ ಈಗ ಇಲ್ಲಿನ ಪರಿಸ್ಥಿತಿ ಬದಲಾಗಿದೆ.​ ಮುಂದಿನ ಬಾರಿ ನಾವು ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಂಡಾಗ ಪರಿಸ್ಥಿತಿಗಳು ಮತ್ತಷ್ಟು ಸುಧಾರಿಸಿರುತ್ತವೆ ಎಂದು ಭಾವಿಸುತ್ತೇನೆ. ಪ್ರಯಾಣದಿಂದ ಹಿಡಿದು ಎಲ್ಲ ಮೂಲಭೂತ ಸೌಕರ್ಯಗಳನ್ನು ಸರಿಯಾಗಿ ನಿಭಾಯಿಸಬೇಕಾದ ಅನಿವಾರ್ಯತೆ ಇದೆ ಎಂದು ಪಾಂಡ್ಯ ಹೇಳಿದ್ದಾರೆ.

ಇದನ್ನೂ ಓದಿ India vs West Indies: ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತ ದಾಖಲೆ ಜಯ, ಪಾಕ್‌ ದಾಖಲೆಯೂ ಭಗ್ನ

ಪಾಂಡ್ಯ ಹೇಳಿಕೆಯನ್ನು ಗಮನಿಸುವಾಗ ವಿಂಡೀಸ್​ ಕ್ರಿಕೆಟ್​ ಮಂಡಳಿಯ ನಿರ್ಲಕ್ಷ್ಯದಿಂದಕಲೇ ಇಂದು ವಿಂಡೀಸ್​ ತಂಡ ಅವನತಿಯ ಹಾದಿ ಹಿಡಿಯಲು ಪ್ರಮುಖ ಕಾರಣ ಎನ್ನಬಹುದು. 48 ವರ್ಷಗಳ ಏಕದಿನ ಕ್ರಿಕೆಟ್​ ವಿಶ್ವಕಪ್​ ಇತಿಹಾಸದಲ್ಲಿ ಮೊದಲ ಬಾರಿ ವಿಂಡೀಸ್​ ಈ ಮಹತ್ವದ ಟೂರ್ನಿಗೆ ಅರ್ಹತೆ ಪಡೆಯದ ಅವಮಾನಕ್ಕೆ ಸಿಲುಕಿತ್ತು. ಒಟ್ಟಾರೆ ವಿಂಡೀಸ್​ ಕ್ರಿಕೆಟ್​ ಮಂಡಳಿ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎನ್ನುವುದಕ್ಕೆ ಪಾಂಡ್ಯ ಹೇಳಿಕೆಯೂ ಪ್ರಮುಖವಾಗಿದೆ.

Exit mobile version