ಟರೂಬ: ಮಂಗಳವಾರ ಇಲ್ಲಿನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯುವ ಭಾರತ ಮತ್ತು ವಿಂಡೀಸ್ ನಡುವಿನ 3ನೇ ಹಾಗೂ ನಿರ್ಣಾಯಕ(IND vs WI 3rd Odi) ಮುಖಾಮುಖಿಗೆ ಮಳೆ ಅಡ್ಡಿ ಪಡಿಒಸುವ ಸಾಧ್ಯತೆ(weather forecast) ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶೇ.41 ರಷ್ಟು ಮಳೆಯಾಗುವುದು ಎಂದು ತಿಳಿಸಿದೆ.
ವಿಂಡೀಸ್ ಕಾಲಮಾನದ ಪ್ರಕಾರ ಸಂಜೆಯ ವೇಳೆ ಇಲ್ಲಿ ಜೋರು ಮಳೆಯಾಗುವ ಎಲ್ಲ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ದ್ವಿತೀಯ ಪಂದ್ಯದ ವೇಳೆಯೂ ಮಳೆ ಬಂದು ಪಂದ್ಯಕ್ಕೆ ಅಡಚಣೆಯಾಗಿತ್ತು. ಒಂದೊಮ್ಮೆ ಈ ಪಂದ್ಯ ಮಳೆಯಿಂದ ರದ್ದಾದರೆ ಸರಣಿ ಡ್ರಾದಲ್ಲಿ ಅಂತ್ಯ ಕಾಣಲಿದೆ. ಆಗ ಭಾರತದ ಸರಣಿ ಗೆಲುವಿನ ಕೊಂಡಿಯೊಂದು ಕಳಚಿಕೊಳ್ಳಲಿದೆ. 2006ರಿಂದ ಭಾರತ ವಿಂಡೀಸ್ ವಿರುದ್ಧ ಆಡಿದ ಎಲ್ಲ ಏಕದಿನ ಸರಣಿಯನ್ನು ಗೆದ್ದಿದೆ.
ವಿರಾಟ್ ಕೊಹ್ಲಿ ಅನುಮಾನ
ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಈ ಪಂದ್ಯ ಆಡುವುದು ಅನುಮಾನ ಎನ್ನಲಾಗಿದೆ. ಕೊಹ್ಲಿ ತಂಡದೊಂದಿಗೆ ಟ್ರಿನಿಡಾಡ್‌ಗೆ ಪ್ರಯಾಣಿಸಿಲ್ಲ ಹೀಗಾಗಿ ಅವರು ಆಡದಿರುವುದು ಬಹುತೇಕ ಖಚಿತ ಎನ್ನುವಂತಿದೆ. ದ್ವಿತೀಯ ಪಂದ್ಯದಲ್ಲಿಯೂ ವಿಶ್ರಾಂತಿ ಪಡೆದಿದ್ದರು. ಆದರೆ ನಾಯಕ ರೋಹಿತ್ ಈ ಪಂದ್ಯ ಆಡಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ.
ಇದನ್ನೂ ಓದಿ Team India : ಗಾಯದ ನಡುವೆ ಐಪಿಎಲ್ ಆಡುವವರು ಭಾರತ ತಂಡಕ್ಕೆ ಯಾಕೆ ಆಡುವುದಿಲ್ಲ; ಕಪಿಲ್ದೇವ್ ಪ್ರಶ್ನೆ
ಸಂಭಾವ್ಯ ಆಡುವ ಬಳಗ
ವೆಸ್ಟ್ ಇಂಡೀಸ್: ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಅಲಿಕ್ ಅಥಾನಾಜೆ, ಶೈ ಹೋಪ್ (ನಾಯಕ), ಶಿಮ್ರಾನ್ ಹೆಟ್ಮೇರ್, ಕೀಸಿ ಕಾರ್ಟಿ, ರೊಮಾರಿಯೊ ಶೆಫರ್ಡ್, ಯಾನಿಕ್ ಕ್ಯಾರಿಯಾ, ಅಲ್ಜಾರಿ ಜೋಸೆಫ್, ಗುಡಕೇಶ್ ಮೋಟಿ, ಜೇಡನ್ ಸೀಲ್ಸ್.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.