ರೊಸೇಯೂ (ಡೊಮಿನಿಕಾ): ಭಾರತದ ಅಗ್ರ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್ ಪಡೆಯುವ ಮೂಲಕ ಆರ್.ಅಶ್ವಿನ್ ನೂತನ ಸಾಧನೆ ಮಾಡಿದ್ದಾರೆ. ಡೊಮಿನಿಕಾದ ರೆಸೇಯೂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ (IND vs WI) ವಿಂಡೀಸ್‌ನ ಅಲ್ಜರಿ ಜೋಸೆಫ್ ವಿಕೆಟ್ ಪಡೆಯುವ ಮೂಲಕ ಅಶ್ವಿನ್ 700 ವಿಕೆಟ್ ಮೈಲುಗಲ್ಲು ತಲುಪಿದರು.
ಆರ್. ಅಶ್ವಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೂರನೇ ಬೌಲರ್ ಎನಿಸಿದರು. ಈಗಾಗಲೇ ಅನಿಲ್ ಕುಂಬ್ಳೆ ಹಾಗೂ ಹರ್ಭಜನ್ ಸಿಂಗ್ ಈ ಸಾಧನೆ ಮಾಡಿದ್ದಾರೆ. ಅಲ್ಲದೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹರ್ಭಜನ್ ಸಿಂಗ್ 711 ವಿಕೆಟ್ ಪಡೆದಿದ್ದು, ಆರ್.ಅಶ್ವಿನ್ ಇನ್ನೂ 11 ವಿಕೆಟ್ ಪಡೆದರೆ ಭಜ್ಜಿ ದಾಖಲೆ ಮುರಿಯಲಿದ್ದಾರೆ. ಸದ್ಯ, ಜಾಗತಿಕ ಕ್ರಿಕೆಟ್‌ನಲ್ಲಿ ಆರ್.ಅಶ್ವಿನ್ 701 ವಿಕೆಟ್ ಪಡೆದಿದ್ದಾರೆ.
ಅಶ್ವಿನ್ 5 ವಿಕೆಟ್ ಗೊಂಚಲು
7 five-wicket haul vs AUS.
— Johns. (@CricCrazyJohns) July 12, 2023
6 five-wicket haul vs ENG.
6 five-wicket haul vs NZ.
5 five-wicket haul vs WI.
5 five-wicket haul vs SA.
3 five-wicket haul vs SL.
1 five-wicket haul vs BAN.
The GOAT – Ashwin in Tests. pic.twitter.com/TVap1gp1nt
ಆರ್.ಅಶ್ವಿನ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅವರು ಟೆಸ್ಟ್‌ನಲ್ಲಿ 477 ವಿಕೆಟ್, ಏಕದಿನದಲ್ಲಿ 151 ಹಾಗೂ ಟಿ-20 ಪಂದ್ಯಗಳಲ್ಲಿ 72 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಅಶ್ವಿನ್ ಆಡಿರಲಿಲ್ಲ. ಆದರೆ, ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್‌ನಲ್ಲಿ ಐದು ವಿಕೆಟ್ ಪಡೆಯುವ ಮೂಲಕ ಅವರು ಒಳ್ಳೆಯ ಕಮ್‌ಬ್ಯಾಕ್ ಮಾಡಿದ್ದಾರೆ.
ಇದನ್ನೂ ಓದಿ: Asia Cup 2023: ಏಷ್ಯಾಕಪ್ ವೇಳಾಪಟ್ಟಿ ಫೈನಲ್; ಪಾಕ್‌ಗೆ ಹೋಗಲ್ಲ ಭಾರತ, ಬದ್ಧ ವೈರಿಗೆ ಮುಖಭಂಗ
ಮೊದಲ ದಿನವೇ ಭಾರತ ಬಿಗಿಹಿಡಿತ
ವೆಸ್ಟ್ ಇಂಡೀಸ್ ವಿರುದ್ಧ ಬುಧವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ ಭಾರತ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಆರ್.ಅಶ್ವಿನ್ (5 ವಿಕೆಟ್) ಹಾಗೂ ರವೀಂದ್ರ ಜಡೇಜಾ (3 ವಿಕೆಟ್) ಮಾರಕ ದಾಳಿಗೆ ಸಿಲುಕಿದ ಕೆರಿಬಿಯನ್ನರು 150 ರನ್‌ಗಳಿಗೆ ಆಲೌಟ್ ಆಗಿದ್ದಾರೆ. ಇನ್ನು ಬ್ಯಾಟಿಂಗ್ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆದಿದೆ. ಮೊದಲ ದಿನದ ಅಂತ್ಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 80 ರನ್ ಗಳಿಸಿದ್ದು, ಬೃಹತ್ ಮುನ್ನಡೆಯ ಮುನ್ಸೂಚನೆ ನೀಡಿದೆ. ರೋಹಿತ್ ಶರ್ಮಾ 30 ಹಾಗೂ ಯಶಸ್ವಿ ಜೈಸ್ವಾಲ್ 40 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ.