Site icon Vistara News

IND vs WI: ಮೊದಲ ಟೆಸ್ಟ್​ ಪಂದ್ಯದ ಪಿಚ್​ ರಿಪೋರ್ಟ್​,ಸಂಭಾವ್ಯ ತಂಡ

Windsor Park Dominica

ರೊಸೇಯೂ (ಡೊಮಿನಿಕಾ): ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯಲ್ಲಿ ಸೋಲು ಕಂಡ ಭಾರತ ಬುಧವಾರ ವೆಸ್ಟ್​ ಇಂಡೀಸ್​ (IND vs WI)ವಿರುದ್ಧ ಟೆಸ್ಟ್​ ಪಂದ್ಯವನ್ನು(Ind vs WI 1st Test) ಆಡಲು ಸಜ್ಜಾಗಿದೆ. ಈ ಪಂದ್ಯದ ಪಿಚ್​ ರಿಪೋರ್ಟ್​ ಮತ್ತು ಸಂಭಾವ್ಯ ತಂಡಗಳ ಮಾಹಿತಿ ಇಂತಿದೆ.

ಪಿಚ್​ ರಿಪೋರ್ಟ್​

ವಿಂಡ್ಸರ್ ಪಾರ್ಕ್‌ನ(Windsor Park Dominica) ಪಿಚ್ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಸಮಾನ ನೆರವು ನೀಡುತ್ತದೆ. ಮೊದಲ ದಿನ ಪಿಚ್ ವೇಗಿಗಳಿಗೆ ನೆರವಾದರೆ, ನಾಲ್ಕು ಮತ್ತು ಐದನೇ ದಿನಗಳಲ್ಲಿ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತದೆ. ಬ್ಯಾಟರ್‌ಗಳಿಗೆ ಎರಡು ಮತ್ತು ಮೂರನೇ ದಿನ ಹೆಚ್ಚಿನ ನೆರವಾಗಿ ಪರಿಣಮಿಸಲಿದೆ. ಈ ಪಿಚ್​ನಲ್ಲಿ ಅಂತಿಮ ಎರಡು ದಿನ ಬ್ಯಾಟಿಂಗ್​ ನಡೆಸುವುದು ಅಷ್ಟು ಸುಲಭವಲ್ಲ. ಅದರಲ್ಲೂ ಚೇಸಿಂಗ್​ ಬಲು ಕಷ್ಟಕರವಾಗಿದೆ. ಹೀಗಾಗಿ ಟಾಸ್ ಗೆದ್ದ ತಂಡವು ಸಾಮಾನ್ಯವಾಗಿ ಇಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ IND vs WI: ಭಾರತ-ವಿಂಡೀಸ್​ ಟೆಸ್ಟ್​ ಇತಿಹಾಸವೇ ಬಲು ರೋಚಕ

ಮುಖಾಮುಖಿ

ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವೆ ಇದುವರೆಗೆ 98 ಟೆಸ್ಟ್​ ಪಂದ್ಯಗಳು(india vs west indies test history) ನಡೆದಿವೆ. ಇದರಲ್ಲಿ ವೆಸ್ಟ್​ ಇಂಡೀಸ್​ 30 ಪಂದ್ಯಗಳನ್ನು ಗೆದ್ದಿದೆ. ಭಾರತ 22 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ. 46 ಪಂದ್ಯಗಳು ಡ್ರಾದಲ್ಲಿ ಅಂತ್ಯ ಕಂಡಿದೆ. 2019ರಲ್ಲಿ ಕೊನೆಯ ಬಾರಿ ಭಾರತ ತಂಡ ವಿಂಡೀಸ್​ ವಿರುದ್ಧ 2 ಪಂದ್ಯಗಳ ಟೆಸ್ಟ್​ ಸೆರಣಿ ಆಡಿತ್ತು. ಇದನ್ನು 2-0 ಅಂತರದಿಂದ ಭಾರತ ಗೆದ್ದಿತ್ತು. ಈ ಸರಣಿಯಲ್ಲಿಯೂ ಭಾರತ ಗೆಲುವು ದಾಖಲಿಸುವ ವಿಶ್ವಾಸದಲ್ಲಿದೆ.

ಸಂಭಾವ್ಯ ತಂಡಗಳು

ವೆಸ್ಟ್​ ಇಂಡೀಸ್​ ತಂಡ: ಕ್ರೇಗ್ ಬ್ರಾತ್‌ವೇಟ್ (ನಾಯಕ), ಜರ್ಮೈನ್ ಬ್ಲ್ಯಾಕ್‌ವುಡ್ (ಉಪನಾಯಕ), ತೇಜನಾರಾಯಣ ಚಂದ್ರಪಾಲ್, ರಹಕೀಮ್ ಕಾರ್ನ್‌ವಾಲ್, ಜೋಶುವ ಡಿ ಸಿಲ್ವಾ, ಶಾನನ್ ಗೇಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕಿರ್ಕ್ ಮೆಕೆಂಜಿ, ಕೇಮರ್ ರೂಚ್, ಜೊಮೆಲ್ ವ್ಯಾರಿಕನ್.

ಭಾರತ: ರೋಹಿತ್​ ಶರ್ಮ(ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್​, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ (ಉಪ ನಾಯಕ), ಕೆಎಸ್ ಭರತ್ (ವಿ.ಕೀ)/ ಇಶಾನ್ ಕಿಶನ್ (ವಿ.ಕೀ), ಆರ್ ಅಶ್ವಿನ್, ಆರ್ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ ಸಿರಾಜ್, ಮುಖೇಶ್ ಕುಮಾರ್/ ಜಯದೇವ್ ಉನದ್ಕತ್.

Exit mobile version