ರೊಸೇಯೂ (ಡೊಮಿನಿಕಾ): ಭಾರತ ಮತ್ತು ವೆಸ್ಟ್ ಇಂಡೀಸ್(IND vs WI) ನಡುವಣ ಕ್ರಿಕೆಟ್ ಸರಣಿ ಬುಧವಾರದಿಂದ ಆರಂಭವಾಗಲಿದೆ. ಟೆಸ್ಟ್ ಆಡುವ ಮೂಲಕ ಉಭಯ ತಂಡಗಳ ಕ್ರಿಕೆಟ್ ಸರಣಿಗೆ ಚಾಲನೆ ದೊರೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೋಲಿನ ಬಳಿಕ ಬಿಸಿಸಿಐ ಕೆಲ ಬದಲಾವಣೆಯೊಂದಿಗೆ ಈ ಸರಣಿಗೆ ತಂಡವನ್ನು ಆಯ್ಕೆ ಮಾಡಿದೆ. ಇದೀಗ ಟೆಸ್ಟ್ನಲ್ಲಿ ನಾಲ್ವರು ಆಟಗಾರರು ಪದಾರ್ಪಣ ಪಂದ್ಯವನ್ನಾಡುವ ನಿರೀಕ್ಷೆಯಲ್ಲಿದ್ದಾರೆ. ರಣಜಿ ಮತ್ತು ಐಪಿಎಲ್ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಯಶಸ್ವಿ ಜೈಸ್ವಾಲ್(Yashasvi Jaiswal), ಋತುರಾಜ್ ಗಾಯಕ್ವಾಡ್(Ruturaj Gaikwad), ಇಶಾನ್ ಕಿಶನ್(Ishan Kishan), ಮುಖೇಶ್ ಕುಮಾರ್(Mukesh Kumar) ಈ ಪಟ್ಟಿಯಲ್ಲಿರುವ ಆಟಗಾರರಾಗಿದ್ದಾರೆ.
ಇಶಾನ್ ಕಿಶನ್ ಅವರು ಈಗಾಗಲೇ ಅನೇಕ ಟೆಸ್ಟ್ ಸರಣಿಗೆ ಆಯ್ಕೆ ಆಗಿದ್ದರೂ ಆಡುವ ಅವಕಾಶ ಸಿಕ್ಕಿರಲಿಲ್ಲ. ಶ್ರೀಕರ್ ಭರತ್ ಅವರಿಗೆ ಹೆಚ್ಚಿನ ಅವಕಾಶ ನೀಡಲಾಗಿತ್ತು. ಆದರೆ ಅವರು ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಇದೇ ಕಾರಣದಿಂದ ಇಶಾನ್ ಕಿಶನ್ಗೆ ಈ ಸರಣಿಯಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆ ಅಧಿಕವಾಗಿದೆ. ಒಂದೊಮ್ಮೆ ಅವಕಾಶ ಸಿಕ್ಕರೂ ಅವರಿಗೆ ಆರಂಭಿಕನಾಗಿ ಬ್ಯಾಟಿಂಗ್ ಸಿಗುವುದು ಅನುಮಾನ ಮಧ್ಯಮ ಕ್ರಮಾಂಕದಲ್ಲೇ ಬ್ಯಾಟ್ ಬೀಸಬೇಕಾದಿತು. ಏಕೆಂದರೆ ಇಲ್ಲಿ ಗಿಲ್,ರೋಹಿತ್ ಮತ್ತು ಯಶಸ್ವಿ ಜೈಸ್ವಾಲ್ ಗುರುತಿಸಿಕೊಂಡಿದ್ದಾರೆ.
ಜೈಸ್ವಾಲ್ಗೂ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಗುವುದು ಬಹುತೇಕ ಖಚಿತ ಎನ್ನುವಂತಿದೆ. ಈಗಾಗಲೇ ಅವರು ರೋಹಿತ್ ಜತೆ ಆರಂಭಿಕನಾಗಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಜೈಸ್ವಾಲ್ ಆರಂಭಿಕನಾಗಿ ಇಳಿದರೆ ಆಗ ಶುಭಮನ್ ಗಿಲ್ ಅವರು ದ್ವಿತೀಯ ಸ್ಥಾನದಲ್ಲಿ ಬ್ಯಾಟಿಂಗ್ ನಡೆಸಬೇಕಾಗುತ್ತದೆ. ಈ ಮೂಲಕ ಪೂಜಾರ ಅವರಿಂದ ತೆರವಾದ ಸ್ಥಾನವನ್ನು ತುಂಬಲಿದ್ದಾರೆ. ಸದ್ಯಕ್ಕೆ ಋತುರಾಜ್ ಗಾಯಕ್ವಾಡ್ಗೆ ಈ ಪಂದ್ಯದಲ್ಲಿ ಅವಕಾಶ ಸಿಗುವುದು ಕಷ್ಟಕರ ಏಕೆಂದರೆ ಆರಂಭಿಕ ಬ್ಯಾಟರ್ ಆಗಿರುವ ಅವರಿಗೆ ಅವಕಾಶ ನೀಡಲು ಯಾವುದೇ ಸ್ಥಾನ ಖಾಲಿ ಉಳಿದಿಲ್ಲ.
ಪ್ರಮುಖ ಬೌಲರ್ಗಳ ಅನುಪಸ್ಥಿತಿಯಲ್ಲಿ ಮುಖೇಶ್ ಕುಮಾರ್ಗೆ ಅವಕಾಶ ಸಿಕ್ಕರೂ ಅಚ್ಚರಿ ಇಲ್ಲ. ಮೊಹಮ್ಮದ್ ಸಿರಾಜ್ ಅವರು ಮಾತ್ರ ಸದ್ಯ ತಂಡದಲ್ಲಿರುವ ಅನುಭವಿ ಬೌಲರ್ ಆಗಿದ್ದಾರೆ. ಹೀಗಾಗಿ ಮುಖೇಶ್ ಕುಮಾರ್ಗೆ ಚಾನ್ಸ್ ಸಿಗಬಹುದು. ಸಿರಾಜ್ ಭಾರತದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಈ ನಾಲ್ವರು ಆಟಗಾರರಲ್ಲಿ ಯಾರೇ ಅವಕಾಶ ಗಿಟ್ಟಿಸಿಕೊಂಡರು ಇದು ಅವರ ಚೊಚ್ಚಲ ಟೆಸ್ಟ್ ಪಂದ್ಯವಾಗಲಿದೆ.
Satta khilane wali company replaced 'India' name from Jersey, Well done @BCCI , kafi sahi ja rhe hain ham. pic.twitter.com/3K8fD0WQt8
— Prayag (@theprayagtiwari) July 11, 2023
ಇದನ್ನೂ ಓದಿ ind vs wi : ಭಾರತ ವಿರುದ್ಧ ಟೆಸ್ಟ್ ಸರಣಿಗೆ ತಂಡ ಘೋಷಿಸಿದ ವಿಂಡೀಸ್; ಯಾರ್ಯಾರು ಇದ್ದಾರೆ ತಂಡದಲ್ಲಿ?
ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉ.ನಾ), ಕೆಎಸ್ ಭರತ್ (ವಿ.ಕೀ), ಇಶಾನ್ ಕಿಶನ್ (ವಿ.ಕೀ), ಆರ್ ಅಶ್ವಿನ್, ಆರ್ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.