ರೊಸೇಯೂ (ಡೊಮಿನಿಕಾ): ಪ್ರವಾಸಿ ಭಾರತ ಮತ್ತು ಆತಿಥೇಯ ವೆಸ್ಟ್ ಇಂಡೀಸ್(IND vs WI) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ.
2019ರಲ್ಲಿ ಕೊನೆಯ ಬಾರಿ ಭಾರತ ತಂಡ ವಿಂಡೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸೆರಣಿ ಆಡಿತ್ತು. ಇದನ್ನು 2-0 ಅಂತರದಿಂದ ಭಾರತ ಗೆದ್ದಿತ್ತು.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇದುವರೆಗೆ 98 ಟೆಸ್ಟ್ ಪಂದ್ಯಗಳು(india vs west indies test history) ನಡೆದಿವೆ. ಇದರಲ್ಲಿ ವೆಸ್ಟ್ ಇಂಡೀಸ್ 30 ಪಂದ್ಯಗಳನ್ನು ಗೆದ್ದಿದೆ. ಭಾರತ 22 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ. 46 ಪಂದ್ಯಗಳು ಡ್ರಾದಲ್ಲಿ ಅಂತ್ಯ ಕಂಡಿದೆ.
ವಿಂಡ್ಸರ್ ಪಾರ್ಕ್‌ನ(Windsor Park Dominica) ಪಿಚ್ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಸಮಾನ ನೆರವು ನೀಡುತ್ತದೆ. ಮೊದಲ ದಿನ ಪಿಚ್ ವೇಗಿಗಳಿಗೆ ನೆರವಾದರೆ, ನಾಲ್ಕು ಮತ್ತು ಐದನೇ ದಿನಗಳಲ್ಲಿ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತದೆ. ಬ್ಯಾಟರ್‌ಗಳಿಗೆ ಎರಡು ಮತ್ತು ಮೂರನೇ ದಿನ ಹೆಚ್ಚಿನ ನೆರವಾಗಿ ಪರಿಣಮಿಸಲಿದೆ. ಈ ಪಿಚ್ನಲ್ಲಿ ಅಂತಿಮ ಎರಡು ದಿನ ಬ್ಯಾಟಿಂಗ್ ನಡೆಸುವುದು ಅಷ್ಟು ಸುಲಭವಲ್ಲ. ಅದರಲ್ಲೂ ಚೇಸಿಂಗ್ ಬಲು ಕಷ್ಟಕರವಾಗಿದೆ. ಹೀಗಾಗಿ ಟಾಸ್ ಗೆದ್ದ ತಂಡವು ಸಾಮಾನ್ಯವಾಗಿ ಇಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ವಿಂಡೀಸ್ ವಿರುದ್ಧ ಕಳೆದ 21 ವರ್ಷಗಳ ಅವಧಿಯಲ್ಲಿ ಆಡಿದ 8 ಟೆಸ್ಟ್ ಸರಣಿಯಲ್ಲಿ ಭಾರತ ಅಜೇಯ ದಾಖಲೆ ಕಾಯ್ದುಕೊಂಡಿದೆ.
ಶಿವನಾರಾಯಣ್ ಚಂದ್ರಪಾಲ್ ಅವರ ಪುತ್ರ ತೇಜನಾರಾಯಣ ಚಂದ್ರಪಾಲ್, ಕ್ರೆಗ್ ಬ್ರಾತ್ವೇಟ್ ಸೇರಿ ಅನೇಕ ಯುವ ಆಟಗಾರರನ್ನು ಹೊಂದಿರುವ ವಿಂಡೀಸ್ ತಂಡ ಭಾರತಕ್ಕೆ ಸಡ್ಡು ಹೊಡೆದು ನಿಂತರೆ ವಿಂಡೀಸ್ ತಂಡ ತನ್ನ ಹಳೆಯ ಫಾರ್ಮ್ಗೆ ಮರಳಲು ಇಟ್ಟ ಮೊದಲ ಹೆಜ್ಜೆ ಇದು ಎನ್ನಬಹುದು.