ಫ್ಲೋರಿಡಾ: ಮೂರನೇ ಟಿ20 ಪಂದ್ಯದಲ್ಲಿ ಗೆದ್ದು ಬೀಗಿ ಸರಣಿಯನ್ನು ಜೀವಂತವಾಗಿರಿಸಿದ ಟೀಮ್ ಇಂಡಿಯಾ ಮತ್ತೊಂದು ಪಂದ್ಯವನ್ನು ಆಡಲು ಸಜ್ಜಾಗಿದೆ. ಯುಎಸ್‌ಎಯ(USA) ಫ್ಲೋರಿಡಾದಲ್ಲಿ(Florida) ನಡೆಯುವ ನಾಲ್ಕನೇ ಪಂದ್ಯದಲ್ಲಿ ವಿಂಡೀಸ್(IND vs WI) ಸವಾಲು ಎದುರಿಸಲಿದೆ. ಇದು ಹಾರ್ದಿಕ್(hardik pandya) ಪಡೆಗೆ ಮಸ್ಟ್ ವಿನ್ ಪಂದ್ಯವಾಗಿದೆ. ಏಕೆಂದರೆ ವಿಂಡೀಸ್ ಈಗಾಗಲೇ 2-1 ಮುನ್ನಡೆ ಸಾಧಿಸಿದೆ. ಈ ಪಂದ್ಯದ ಪಿಚ್ ರಿಪೋರ್ಟ್ ಮತ್ತು ಸಂಭಾವ್ಯ ತಂಡದ ಮಾಹಿತಿ ಇಂತಿದೆ.
ಪಿಚ್ ರಿಪೋರ್ಟ್
ಯುಎಸ್‌ಎಯ ಫ್ಲೋರಿಡಾದ(Florida) ಲೌಡರ್‌ಹಿಲ್(Lauderhill Cricket Stadium) ಪಿಚ್ ಹೆಚ್ಚಾಗಿ ಮೊದಲು ಬ್ಯಾಟಿಂಗ್ ನಡೆಸಿದ ತಂಡಕ್ಕೆ ನೆರವು ನೀಡಲಿದೆ. ಇಲ್ಲಿ ಇದುವರೆಗೆ 14 ಟಿ20 ಪಂದ್ಯಗಳು ನಡೆದಿವೆ ಇದರಲ್ಲಿ 11 ಬಾರಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಜಯ ಸಾಧಿಸಿದೆ. ಕೇವಲ 2 ಪಂದ್ಯಗಳಲ್ಲಿ ಮಾತ್ರ ಚೇಸಿಂಗ್ ನಡೆಸಿದ ತಂಡ ಗೆದ್ದಿದೆ. ಒಂದು ಪಂದ್ಯ ರದ್ದುಗೊಂಡಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ನಡೆಸುವ ಸಾಧ್ಯತೆ ಅಧಿಕ.
ಧೋನಿ ನಾಯಕತ್ವದಲ್ಲಿ ಆಡಿದ್ದ ಭಾರತ
ಟೀಮ್ ಇಂಡಿಯಾ ಫ್ಲೋರಿಡಾದ ಲೌಡರ್ಹಿಲ್ನಲ್ಲಿ ಆಡುತ್ತಿರುವುದು ಇದೇ ಮೊದಲೇನಲ್ಲ. 2016ರಲ್ಲಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದಲ್ಲಿ ಭಾರತ ತಂಡ ಇಲ್ಲಿ ಮೊದಲ ಬಾರಿ ಟಿ20 ಪಂದ್ಯ ಆಡಿತ್ತು. ಅದೂ ಕೂಡ ವಿಂಡೀಸ್ ವಿರುದ್ಧದ ಸರಣಿಯಾಗಿತ್ತು. ಈ ಮೈದಾನದಲ್ಲಿ ಭಾರತ ವಿಂಡೀಸ್ ವಿರುದ್ಧ 6 ಟಿ20 ಪಂದ್ಯಗಳನ್ನು ಆಡಿದ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಹೀಗಾಗಿ ಭಾರತಕ್ಕೆ ಇದು ಫೇವರಿಟ್ ಮೈದಾನವಾಗಿದೆ.
ಟಿ20 ವಿಶ್ವಕಪ್ ಕೂಡ ನಡೆಯಲಿದೆ
ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ ಪಂದ್ಯಗಳು ಈ ಸ್ಟೇಡಿಯಂನಲ್ಲಿಯೂ ನಡೆಯಲಿದೆ. ಏಕೆಂದರೆ ಟೂರ್ನಿಗೆ ಅಮೆರಿಕ ಮತ್ತು ವಿಂಡೀಸ್ ಆತಿಥ್ಯವಹಿಸಿಕೊಂಡಿದೆ. ಇಲ್ಲಿ ಪಂದ್ಯಗಳು ಮಾತ್ರ ನಡೆಯುವುದಲ್ಲದೆ. ಮೊತ್ತ ಮೊದಲ ಬಾರಿಗೆ ಅಮೆರಿಕ ವಿಶ್ವ ಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ.
ಸಂಭಾವ್ಯ ತಂಡ
ವೆಸ್ಟ್ ಇಂಡೀಸ್: ರೋವ್ಮನ್ ಪೊವೆಲ್ (ನಾಯಕ), ಕೈಲ್ ಮೇಯರ್ಸ್ (ಉಪ ನಾಯಕ), ರೋಸ್ಟನ್ ಚೇಸ್, ಶಿಮ್ರೋನ್ ಹೆಟ್ಮೇರ್, ಜೇಸನ್ ಹೋಲ್ಡರ್, ಶೈಯ್ ಹೋಪ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ನಿಕೋಲಸ್ ಪೂರನ್, ರೊಮಾರಿಯೋ ಶೆಫರ್ಡ್, ಒಶಾನೆ ಥಾಮಸ್.
ಭಾರತ: ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ),ಅಕ್ಷರ್ ಪಟೇಲ್, ತಿಲಕ್ ವರ್ಮ ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಆರ್ಶ್ದೀಪ್ ಸಿಂಗ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್.