ಟ್ರಿನಿಡಾಡ್: ಈಗಾಗಲೇ ಡೊಮಿನಿಕಾದ ರೋಸೋದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡ ವೆಸ್ಟ್ ಇಂಡೀಸ್(IND vs WI) ದ್ವಿತೀಯ ಪಂದ್ಯ ಆಡಲು ಸಜ್ಜಾಗಿದೆ. ಮೊದಲ ಪಂದ್ಯ ಗೆದ್ದ ಭಾರತ ಈ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ಯೋಜನೆಯಲ್ಲಿದೆ. ಪೋರ್ಟ್ ಆಫ್ ಸ್ಪೇನ್‌ನ(Port of Spain) ಕ್ವೀನ್ಸ್‌ಪಾರ್ಕ್(Queen’s Park Oval) ಓವಲ್‌ನಲ್ಲಿ ಗುರುವಾರ ನಡೆಯುವ ಈ ಪಂದ್ಯ ಉಭಯ ತಂಡಗಳ ನಡುವಿನ 100ನೇ ಟೆಸ್ಟ್ ಪಂದ್ಯವೆಂಬುದು ವಿಂಡೀಸ್ ಕ್ರಿಕೆಟ್ ಪಾಲಿಗೆ ಸಂಭ್ರಮದ ಸಂಗತಿ. ಆದರೆ ವಿಂಡೀಸ್ನ ಈಗಿನ ಸ್ಥಿತಿ ನೋಡುವಾಗ ಬೇಸರವಾಗುತ್ತದೆ. 48 ವರ್ಷಗಳ ಏಕದಿನ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಅರ್ಹತೆಗಿಟ್ಟಿಸಿಕೊಳ್ಳದೆ. ಟೂರ್ನಿಯಿಂದ ಹೊರಬಿದ್ದಿದೆ.
ಮೊದಲ ಮುಖಾಮುಖಿ
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇದುವರೆಗೆ 99 ಟೆಸ್ಟ್ ಪಂದ್ಯಗಳು(india vs west indies test history) ನಡೆದಿವೆ. ಇದರಲ್ಲಿ ವೆಸ್ಟ್ ಇಂಡೀಸ್ 30 ಪಂದ್ಯಗಳನ್ನು ಗೆದ್ದಿದೆ. ಭಾರತ 23 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ. 46 ಪಂದ್ಯಗಳು ಡ್ರಾದಲ್ಲಿ ಅಂತ್ಯ ಕಂಡಿದೆ. ಬಲಾಬಲದ ಲೆಕ್ಕಾಚಾರದಲ್ಲಿ ವಿಂಡೀಸ್ ಮುಂದಿದ್ದರೂ ಈಗಿನ ಸ್ಥಿತಿಯಲ್ಲಿ ವಿಂಡೀಸ್ ತಂಡವನ್ನು ಯಾರು ಬೇಕಾದರೂ ಸೋಲಿಸುವಷ್ಟರ ಮಟ್ಟಿಗೆ ಈ ತಂಡ ಬಂದು ನಿಂತಿದೆ.
ಉಭಯ ತಂಡಗಳ ಮಧ್ಯೆ ಮೊದಲ ಟೆಸ್ಟ್ ಮುಖಾಮುಖಿ ನಡೆದದ್ದು 1948-49ರಲ್ಲಿ. ಐದು ಪಂದ್ಯಗಳ ಸರಣಿ ಇದಾಗಿತ್ತು. ಈ ಸರಣಿಯನ್ನು ವಿಂಡೀಸ್ 1-0 ಅಂತರದಿಂದ ಗೆದ್ದು ಬೀಗಿತ್ತು. ಈ ಸರಣಿಗೆ ಭಾರತ ಆತಿಥ್ಯ ವಹಿಸಿಕೊಂಡಿತ್ತು. ಭಾರತ ತಂಡ ವಿಂಡೀಸ್ ವಿರುದ್ಧ ಮೊತ್ತ ಮೊದಲ ಟೆಸ್ಟ್ ಸರಣಿ ಗೆದ್ದಿದ್ದು 1970ರಲ್ಲಿ, ವಿಂಡೀಸ್ ನೆಲದಲ್ಲೇ ಭಾರತ ಮೊದಲ ಗೆಲುವು ದಾಖಲಿಸಿತ್ತು. ಇದು ಕೂಡ 5 ಪಂದ್ಯಗಳ ಸರಣಿ ಆಗಿತ್ತು. ಭಾರತ 1-0 ಅಂತರದಿಂದ ಮೇಲುಗೈ ಸಾಧಿಸಿತ್ತು.
ಇದನ್ನೂ ಓದಿ IND vs WI 2nd Test: ದ್ವಿತೀಯ ಟೆಸ್ಟ್ಗೆ ಬಲಿಷ್ಠ ತಂಡ ಪ್ರಕಟಿಸಿದ ವೆಸ್ಟ್ ಇಂಡೀಸ್
India take the 1st Cycle Pure Agarbathi Test. #WIHome #RallywithWI pic.twitter.com/V27wQoGU51
— Windies Cricket (@windiescricket) July 14, 2023
21 ವರ್ಷಗಳಿಂದ ಭಾರತ ಅಜೇಯ
2002ರಿಂದ ಭಾರತ ತಂಡ ವಿಂಡೀಸ್ ವಿರುದ್ಧ ಇದುವರೆಗೆ 8 ಟೆಸ್ಟ್ ಸರಣಿಯನ್ನು ಆಡಿದೆ. 8 ಸರಣಿಯಲ್ಲಿಯೂ ಭಾರತ ಗೆಲುವು ಸಾಧಿಸಿ ಕಳೆದ 21 ವರ್ಷಗಳಿಂದ ಅಜೇಯ ದಾಖಲೆ ಕಾಯ್ದುಕೊಂಡಿದೆ. 2019ರಲ್ಲಿ ಕೊನೆಯ ಬಾರಿ ಭಾರತ ತಂಡ ವಿಂಡೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸೆರಣಿ ಆಡಿತ್ತು. ಇದನ್ನು 2-0 ಅಂತರದಿಂದ ಭಾರತ ಗೆದ್ದಿತ್ತು.