ಮುಂಬಯಿ: 16ನೇ ಆವೃತ್ತಿಯ ಐಪಿಎಲ್(IPL 2023) ಟೂರ್ನಿಯ ಆನ್ಲೈನ್ ಪ್ರಸಾರವನ್ನು ಉಚಿತವಾಗಿ ನೀಡಿ ಎಲ್ಲಡೆ ಸಂಚಲನ ಮೂಡಿಸಿದ್ದ ಜಿಯೋ ಸಿನಿಮಾ(JioCinema) ಇದೀಗ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಪ್ಯಾಕೆಜ್ ನೀಡಲು ನಿರ್ಧರಿಸಿದೆ. ಬಹುನಿರೀಕ್ಷಿತ ಭಾರತ ಮತ್ತು ವೆಸ್ಟ್ ಇಂಡೀಸ್(IND vs WI) ನಡುವಣ ಕ್ರಿಕೆಟ್ ಸರಣಿಯನ್ನು ಉಚಿತವಾಗಿ ನೀಡಲಿದೆ. ಈ ಸರಣಿಯ ಆನ್ಲೈನ್ ನೇರಪ್ರಸಾರದ ಹಕ್ಕನ್ನು ಪಡೆದಿರುವುದಾಗಿ ಜಿಯೋ ಸಿನಿಮಾ ಬುಧವಾರ ತಿಳಿಸಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ 2 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ಏರ್ಪಡಲಿದೆ. ಹೆಚ್ಚುವರಿಯಾಗಿ 2 ಟಿ20 ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಾಗುವುದು. ವಿಂಡೀಸ್ಗೆ ಪ್ರವಾಸಗೈಯಲಿರುವ ಭಾರತ ತಂಡ ಮೊದಲು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಪಂದ್ಯಗಳ ತಾಣ ರೊಸೇಯು (ಜು. 12-16) ಮತ್ತು ಪೋರ್ಟ್ ಆಫ್ ಸ್ಪೇನ್ (ಜು. 20-24). ಪೋರ್ಟ್ ಆಫ್ ಸ್ಪೇನ್‌ನ “ಕ್ವೀನ್ಸ್‌ಪಾರ್ಕ್ ಓವಲ್’ನಲ್ಲಿ ನಡೆಯುವ 100ನೇ ಟೆಸ್ಟ್ ಪಂದ್ಯ ಇದಾಗಿದೆ.
ಇದನ್ನೂ ಓದಿ Viral video: ಒಂದೇ ಎಸೆತದಲ್ಲಿ 18 ರನ್ ಬಿಟ್ಟುಕೊಟ್ಟ ನಾಯಕ; ವಿಡಿಯೊ ವೈರಲ್
ಟೆಸ್ಟ್ ಸರಣಿಯ ನಂತರ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಮೊದಲ 50 ಓವರ್ಗಳ ಪಂದ್ಯವು ಜುಲೈ 27 ರಂದು ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆಯಲಿದೆ. ಎರಡನೇ ಏಕದಿನ ಪಂದ್ಯವು ಜುಲೈ 29ರಂದು ಬಾರ್ಬಡೋಸ್ನಲ್ಲಿ ಆಯೋಜನೆಗೊಂಡಿದೆ. ಆಗಸ್ಟ್ 1ರಂದು ಟ್ರಿನಿಡಾಡ್ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿಯ ಸ್ಟೇಡಿಯಮ್ ಸರಣಿ ನಿರ್ಣಾಯಕ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಆಗಸ್ಟ್ 3ರಿಂದ ಆಗಸ್ಟ್ 13 ರವರೆಗೆ ಭಾರತ ಐದು ಪಂದ್ಯಗಳ ಟಿ 20 ಐ ಸರಣಿಯನ್ನು ಆಡಲಿದೆ. ಗಯಾನಾ ನ್ಯಾಷನಲ್ ಸ್ಟೇಡಿಯಂ ಮತ್ತು ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಐದು ಪಂದ್ಯಗಳ ಟಿ20ಐಗಳಿಗೆ ಆತಿಥ್ಯ ವಹಿಸಲಿದೆ.
🚨 NEWS 🚨
— BCCI (@BCCI) June 12, 2023
2️⃣ Tests
3️⃣ ODIs
5️⃣ T20Is
Here's the schedule of India's Tour of West Indies 🔽#TeamIndia | #WIvIND pic.twitter.com/U7qwSBzg84
ಸದ್ಯದ ಮಾಹಿತಿ ಪ್ರಕಾರ ಬಿಸಿಸಿಐ(BCCI) ಆಸೀಸ್ ವಿರುದ್ಧದ ಸೋಲಿನ ಬಳಿಕ ಕೆಲ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗಿದ್ದು ಅನೇಕ ಹಿರಿಯ ಆಟಗಾರರಿಗೆ ವೆಸ್ಟ್ ಇಂಡೀಸ್ ಪ್ರವಾಸದಿಂದ ಕೊಕ್ ನೀಡು ತೀರ್ಮಾನಿಸಿದೆ ಎಂದು ವರದಿಯಾಗಿದೆ.