ರೊಸೇಯೂ (ಡೊಮಿನಿಕಾ): ವೆಸ್ಟ್ ಇಂಡೀಸ್ ಮತ್ತು ಭಾರತ(IND vs WI) ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಬುಧವಾರ ಆರಂಭಗೊಳ್ಳಲಿದೆ. ಇದಕ್ಕೂ ಮುನ್ನ ದಿನವಾದ ಮಂಗಳವಾರ ಟೀಮ್ ಇಂಡಿಯಾ ಆಟಗಾರರು ನೂತನ ಜೆರ್ಸಿ ತೊಟ್ಟು ಫೋಟೊಶೂಟ್ ಮಾಡಿಸಿದ್ದಾರೆ. ಆಟಗಾರರ ಫೋಟೊಗಳನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಫೋಟೊಗಳು ವೈರಲ್ ಆಗಿವೆ. ರೆಟ್ರೋ ಲುಕ್ನಲ್ಲಿ ಭಾರತೀಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಆದರೆ ಇದು ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಭಾರತ ತಂಡದ ಆಟಗಾರರು ಈ ಜೆರ್ಸಿಯಲ್ಲಿ ಕ್ಯಾಮರಾಗೆ ಫೋಸ್ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಅಜಿಂಕ್ಯ ರಹಾನೆ, ಯಶಸ್ವಿ ಜೈಸ್ವಾಲ್ ಸೇರಿ ಇತರ ಆಟಗಾರರ ಫೋಟೋಗಳನ್ನು ಬಿಸಿಸಿಐ ಮತ್ತು ಐಸಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಇತ್ತೀಚೆಗೆ ಭಾರತ ಕ್ರಿಕೆಟ್ ತಂಡ ಆಟಗಾರರ ಕಿಟ್ ಪ್ರಾಯೋಜಕ್ವವನ್ನು ಅಡಿಡಾಸ್ ವಹಿಸಿಕೊಂಡಿತ್ತು. ಮೂರು ಮಾದರಿಯ ಕ್ರಿಕೆಟ್ಗೆ ಹೊಸ ಜರ್ಸಿ ಸಿದ್ಧಪಡಿಸಲಾಗಿದೆ. ಟೆಸ್ಟ್ಗೆ ಸಾಂಪ್ರದಾಯಿಕ ಬಿಳಿ ಮತ್ತು ಏಕದಿನಕ್ಕೆ ನೀಲಿ ಬಣ್ಣದ ಡ್ರೆಸ್ನಲ್ಲಿ ಭಾರತ ಇನ್ನು ಮುಂದೆ ಕಣಕ್ಕಿಳಿಯಲಿದೆ. ಟೈಟಲ್ ಸ್ಪಾನ್ಸರ್ ಆಗಿ ಡ್ರೀಮ್ ಇಲೆವೆನ್ ಕಾಣಿಸಿಕೊಂಡಿದೆ.
Satta khilane wali company replaced 'India' name from Jersey, Well done @BCCI , kafi sahi ja rhe hain ham. pic.twitter.com/3K8fD0WQt8
— Prayag (@theprayagtiwari) July 11, 2023
ಟೆಸ್ಟ್ನ ನೂತನ ಜೆರ್ಸಿಯಲ್ಲಿ ಡ್ರೀಮ್ ಇಲೆವೆನ್ ಲೋಗೊ ಕಂಡ ಕೆಲ ನೆಟ್ಟಿಗರು ವಿಶ್ರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಡಬ್ಲ್ಯುಟಿಸಿ ಫೈನಲ್‌ನಲ್ಲಿ ಇದ್ದ ಜೆರ್ಸಿಯಲ್ಲಿ ತಂಡದ ಹೆಸರನ್ನು ಬರೆಯಲಾದ ಸ್ಥಳದಲ್ಲಿ ಈಗ ಡ್ರೀಮ್ 11 ಲೋಗೋ ಇರುವುದು ಸರಿಯಲ್ಲ. ಹಣಕ್ಕಾಗಿ ದೇಶದ ಹೆಸರನ್ನೇ ಬಿಸಿಸಿಐ ಮಾರಿದೆ ಎಂದಿದ್ದಾರೆ. ಇನ್ನು ಕೆಲವರು ದೊಡ್ಡ ಗಾತ್ರದಲ್ಲಿ ಬರೆಯಲಾದ ಕಾರಣ ಇದು ಜೆರ್ಸಿಯ ಅಂದವನ್ನೇ ಕಡೆಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ IND vs WI: ಮೊದಲ ಟೆಸ್ಟ್ ಪಂದ್ಯದ ಪಿಚ್ ರಿಪೋರ್ಟ್,ಸಂಭಾವ್ಯ ತಂಡ
ಸಂಭಾವ್ಯ ತಂಡಗಳು
ವೆಸ್ಟ್ ಇಂಡೀಸ್ ತಂಡ: ಕ್ರೇಗ್ ಬ್ರಾತ್‌ವೇಟ್ (ನಾಯಕ), ಜರ್ಮೈನ್ ಬ್ಲ್ಯಾಕ್‌ವುಡ್ (ಉಪನಾಯಕ), ತೇಜನಾರಾಯಣ ಚಂದ್ರಪಾಲ್, ರಹಕೀಮ್ ಕಾರ್ನ್‌ವಾಲ್, ಜೋಶುವ ಡಿ ಸಿಲ್ವಾ, ಶಾನನ್ ಗೇಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕಿರ್ಕ್ ಮೆಕೆಂಜಿ, ಕೇಮರ್ ರೂಚ್, ಜೊಮೆಲ್ ವ್ಯಾರಿಕನ್.
INDIA ❤✅
— Shamsi (MSH) (@ShamsiHaidri) July 11, 2023
DREAM 11 ❌
Where is Country Name ??
Team India are playing for country or Brands ??
Money is important for Sameless BCCI @JayShah @BCCI 😭😡. #INDvsWI pic.twitter.com/zschKs4nfn
ಭಾರತ: ರೋಹಿತ್ ಶರ್ಮ(ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ (ಉಪ ನಾಯಕ), ಕೆಎಸ್ ಭರತ್ (ವಿ.ಕೀ)/ ಇಶಾನ್ ಕಿಶನ್ (ವಿ.ಕೀ), ಆರ್ ಅಶ್ವಿನ್, ಆರ್ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ ಸಿರಾಜ್, ಮುಖೇಶ್ ಕುಮಾರ್/ ಜಯದೇವ್ ಉನದ್ಕತ್.