Site icon Vistara News

IND vs WI: ಗಿಲ್​ ಅವರ ಶೈಲಿಯಲ್ಲಿ ಶತಕ ಸಂಭ್ರಮಿಸಿದ ಕಿಂಗ್​ ಕೊಹ್ಲಿ

Virat Kohli takes a bow after scoring his 29th Test century

ಪೋರ್ಟ್‌ ಆಫ್ ಸ್ಪೇನ್: ವೆಸ್ಟ್​ ಇಂಡೀಸ್(IND vs WI)​ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ ವಿರಾಟ್​ ಕೊಹ್ಲಿ ಹಲವು ದಿಗ್ಗಜ ಆಟಗಾರರ ದಾಖಲೆಗಳನ್ನುಯ ಮುರಿದಿದ್ದಾರೆ. ಆದರೆ ಇದೆಲ್ಲಕ್ಕಿಂತ ಟ್ರೆಂಡ್​ ಆಗಿದ್ದು ಕೊಹ್ಲಿ ಶತಕ ಬಾರಿಸಿದ ಬಳಿಕ ಸಂಭ್ರಮಿಸಿದ ಶೈಲಿ.

ಪೋರ್ಟ್‌ ಆಫ್ ಸ್ಪೇನ್​ನಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ನಾಲ್ಕು ವಿಕೆಟ್‌ ಕಳೆದುಕೊಂಡು 288 ರನ್‌ ಗಳಿಸಿತ್ತು. 87 ರನ್ನುಗಳಿಂದ ಎರಡನೇ ದಿನದಾಟ ಆರಂಭಿಸಿದ್ದ ಕೊಹ್ಲಿ ಶತಕ ಪೂರ್ತಿಗೊಳಿಸಿದರು. ಇದೇ ವೇಳೆ ಅವರು ಶತಕವನ್ನು ಯುವ ಆಟಗಾರ ಶುಭಮನ್​ ಗಿಲ್(shubman gill)​ ಅವರ ಶೈಲಿಯಲ್ಲಿ ಸಂಭ್ರಮಿಸಿದ್ದಾರೆ. ಇದನ್ನು ಕಂಡ ನೆಟ್ಟಿಗರು ಕೊಹ್ಲಿ ಅವರು ಗಿಲ್​ ಅವರ ಶೈಲಿಯನ್ನು ಕಾಪಿ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ Virat Kohli: ವಿಂಡೀಸ್​ ಆಟಗಾರನ ತಾಯಿಯಿಂದ ಕೊಹ್ಲಿಗೆ ಮಮತೆಯ ಅಪ್ಪುಗೆ; ವಿಡಿಯೊ ವೈರಲ್​

500ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ಕೊಹ್ಲಿ ಕ್ರಿಕೆಟ್‌ ಬಾಳ್ವೆಯಲ್ಲಿ 76ನೇ ಶತಕ ಬಾರಿಸಿ ಸ್ಮರಣೀಯಗೊಳಿಸಿದರು. ವಿದೇಶದ ಟೆಸ್ಟ್‌ ಸರಣಿಯಲ್ಲಿ 2018ರ ಡಿಸೆಂಬರ್‌ ಬಳಿಕ ಅವರು ದಾಖಲಿಸಿದ ಮೊದಲ ಶತಕ ಇದಾಗಿದೆ. ಪ್ರಿನ್ಸ್​ ಕೊಹ್ಲಿ ಎಂದೆ ಕರೆಯಲ್ಪಡುವ ಶುಭಮನ್​ ಗಿಲ್​ ಅವರ ಶೈಲಿಯನ್ನು ಕಿಂಗ್​ ಕೊಹ್ಲಿ ಅನುಕರಣೆ ಮಾಡಿದ್ದಾರೆ ಎಂದು ಕೆಲವರು ಉಭಯ ಆಟಗಾರರ ಶತಕ ಸಂಭ್ರಮದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಗಿಲ್​ ಅವರಂತೆ ಶತಕ ಸಂಭ್ರಮಿಸಿದ ವಿರಾಟ್​ ಕಂಡು ಡಗೌಡ್​ನಲ್ಲಿ ಕುಳಿತ ಟೀಮ್​ ಇಂಡಿಯಾ ಆಟಗಾರರು ಮತ್ತು ಗಿಲ್​ ನಗುತ್ತಲೇ ಚಪ್ಪಾಳೆ ತಟ್ಟಿ ಕೊಹ್ಲಿಗೆ ಬೆಂಬಲ ಸೂಚಿಸಿದ್ದಾರೆ. ಈ ವಿಡಿಯೊವನ್ನು ಅನೇಕ ಕ್ರಿಕೆಟ್​ ಅಭಿಮಾನಿಗಳು ಶೇರ್​ ಮಾಡಿದ್ದಾರೆ.

ಗಿಲ್​ ಅವರು ಶತಕ ಬಾರಿಸಿದ ಬಳಿಕ ತಲೆ ಬಾಗಿ ನಮಸ್ಕರಿಸಿದ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಇದು ಅವರು ಹಿರಿಯ ಆಟಗಾರರು ಮತ್ತು ಕೋಚ್​ ಅವರಿಗೆ ಸೂಚಿಸುವ ಗೌರವದ ಪ್ರತೀಕವಾಗಿದೆ. ಇದೇ ರೀರಿಯಲ್ಲಿ ಕೊಹ್ಲಿಯೂ ಸಂಭ್ರಮಿಸಿದ್ದಾರೆ. ಆದರೆ ಕೊಹ್ಲಿ ಇಲ್ಲಿ ಕೊಂಚ ಬದಲಾವಣೆ ಮಾಡಿದ್ದಾರೆ. ಗಿಲ್ ಹೆಲ್ಮೆಟ್​ ಎದುರು ಹಿಡಿದು ಬ್ಯಾಟ್​ ಹಿಂದಕ್ಕೆ ಹಿಡಿಯುತ್ತಾರೆ. ಕೊಹ್ಲಿ ಹೆಲ್ಮೆಟ್ ಹಿಂದೆ ಹಿಡಿದು ಬ್ಯಾಟ್​ ಮುಂದಕ್ಕೆ ಹಿಡಿದ್ದಾರೆ. ಈ ಮೂಲಕ ಸಣ್ಣ ಬದಲಾವಣೆ ಮಾಡಿದ್ದಾರೆ.

500ನೇ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಮೊದಲ ಆಟಗಾರ

500ನೇ ಅಂತಾರಾಷ್ಟ್ರೀಯ ಪಂದ್ಯವಾಡುತ್ತಿರುವ ಕೊಹ್ಲಿ ಟೆಸ್ಟ್‌ನಲ್ಲಿ 29 ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 76ನೇ ಶತಕ ಬಾರಿಸಿದರು. ಇದರೊಂದಿಗೆ 500ನೇ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡರು. 206 ಎಸೆತಗಳಲ್ಲಿ 121 ರನ್‌ ಸಿಡಿಸಿ ರನೌಟ್​ ಸಂಕಟಕ್ಕೆ ಸಿಲುಕಿದರು.

Exit mobile version