ರೊಸೇಯೂ (ಡೊಮಿನಿಕಾ): ವೆಸ್ಟ್ ಇಂಡೀಸ್(IND vs WI) ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಇನಿಂಗ್ಸ್ ಹಾಗೂ 141 ರನ್ಗಳಿಂದ ಗೆದ್ದಿದೆ. ಈ ಟೆಸ್ಟ್ ಕೇವಲ ಮೂರೇ ದಿನಕ್ಕೆ ಅಂತ್ಯಕಂಡಿತು. ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ಅವರು ಸರ್ ವಿವ್ ರಿಚರ್ಡ್ಸ್(Sir Viv Richards) ದಾಖಲೆಯೊಂದನ್ನು ಮುರಿದರು.
ವಿಂಡ್ಸರ್ ಪಾರ್ಕ್‌ನ(Windsor Park Dominica)ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ ಮೊದಲ ಇನಿಂಗ್ಸ್ನಲ್ಲಿ 150 ರನ್ಗೆ ಆಟ ಮುಗಿಸಿತು. ಇದಕ್ಕೆ ಪ್ರತಿಯಾಗಿ ಬ್ಯಾಟ್ ಮಾಡಿದ್ದ ಭಾರತ ತಂಡ ದ್ವಿತೀಯ ದಿನ 2 ವಿಕೆಟ್ಗೆ 312 ರನ್ ಮಾಡಿತ್ತು. ರೋಹಿತ್ ಶರ್ಮಾ ದೀರ್ಘ ಕಾಲದ ಬಳಿಕ (103) ಶತಕ ಬಾರಿಸಿದ್ದರೆ ಯಶಸ್ವಿ ಜೈಸ್ವಾಲ್ 143 ರನ್ ಬಾರಿಸಿ ಔಟಾಗದೇ ಉಳಿದಿದ್ದರು. ಶುಭ್ಮನ್ ಗಿಲ್ 6 ರನ್ಗಳಿಗೆ ಔಟಾಗಿದ್ದರು. ನಾಯಕ ವಿರಾಟ್ ಕೊಹ್ಲಿ 36 ರನ್ ಬಾರಿಸಿ ಮೂರನೇ ದಿನಕ್ಕೆ ಆಟ ಮುಂದುವರಿಸಿದ್ದರು. ಮೂರನೇ ದಿನ ಆಟ ಮುಂದುವರಿಸಿದ ಭಾರತ 421 ರನ್ ಬಾರಿಸಿ 271 ರನ್ಗಳ ಮುನ್ನಡೆಯೊಂದಿಗೆ ಡಿಕ್ಲೇರ್ ಘೋಷಿಸಿತು.
ಭಾರತ ನೀಡಿದ ಗುರಿಯನ್ನು ಬೆನ್ನಟ್ಟಿದ ವಿಂಡೀಸ್ ಕೇವಲ 130 ರನ್ಗಳಿಗೆ ಸರ್ವಪತನ ಕಂಡು ಹೀನಾಯ ಸೋಲು ಕಂಡಿತು. ಭಾರತ ತಂಡದ ಬ್ಯಾಟರ್ಗಳಾದ ಯಶಸ್ವಿ ಜೈಸ್ವಾಲ್ (171)(Yashasvi Jaiswal) ಹಾಗೂ ವಿರಾಟ್ ಕೊಹ್ಲಿ (76 ರನ್) ಮಿಂಚಿದರು. ಬೌಲಿಂಗ್ನಲ್ಲಿ ಸ್ಪಿನ್ ಮೋಡಿ ಮಾಡಿದ ಆರ್.ಅಶ್ವಿನ್ 7 ವಿಕೆಟ್ ಕಬಳಿಸಿದರು. ಎರಡು ಇನಿಂಗ್ಸ್ ಸೇರಿ ಅವರು 12 ವಿಕೆಟ್ ಪಡೆದರು.
ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಟೆಸ್ಟ್ ಸ್ಪೆಷಲಿಸ್ಟ್ ಅಜಿಂಕ್ಯ ರಹಾನೆ ಹೆಚ್ಚು ಹೊತ್ತು ಅಡಲಿಲ್ಲ. ಅವರು 11 ಎಸೆತಗಳನ್ನು ಎದುರಿಸಿ 3 ರನ್ ಬಾರಿಸಿ ಔಟಾದರು. ಕೇಮರ್ ರೋಚ್ ಅವರ ಎಸೆತಕ್ಕೆ ಬ್ಲಾಕ್ವುಡ್ಗೆ ಕ್ಯಾಚ್ ನೀಡಿ ಅವರು ನಿರ್ಗಮಿಸಿದರು.
ಇದನ್ನೂ ಓದಿ IND vs WI: ಬೌಂಡರಿ ಬಾರಿಸಿದ ಬಳಿಕ ವಿಶೇಷ ರೀತಿಯಲ್ಲಿ ಸಂಭ್ರಮಿಸಿದ ಕೊಹ್ಲಿ; ವಿಡಿಯೊ ವೈರಲ್
WHAT. A. WIN! 🙌 🙌
— BCCI (@BCCI) July 14, 2023
A cracking performance from #TeamIndia to win the first #WIvIND Test in Dominica 👏 👏
Scorecard ▶️ https://t.co/FWI05P4Bnd pic.twitter.com/lqXi8UyKf1
ವಿವ್ ರಿಚರ್ಡ್ಸ್ ದಾಖಲೆ ಮುರಿದ ಕೊಹ್ಲಿ
ವಿರಾಟ್ ಕೊಹ್ಲಿ ಅವರು 62 ರನ್ ಬಾರಿಸಿದ ವೇಳೆ ವಿವ್ ರಿಚರ್ಡ್ಸ್ ಅವರ ದಾಖಲೆಯೊಂದನ್ನು ಮುರಿದರು. ಟೆಸ್ಟ್ ಕ್ರಿಕೆಟ್ನಲ್ಲಿ ರಿಚರ್ಡ್ಸ್ ಅವರ ರನ್ ಹಿಂದಿಕ್ಕಿದ್ದರು. ರಿಚರ್ಡ್ಸ್ ಟೆಸ್ಟ್ನಲ್ಲಿ 8540 ರನ್ ಗಳಿಸಿದ್ದಾರೆ. ವಿರಾಟ್ ಸದ್ಯ 8555* ರನ್ ಬಾರಿಸಿ ಮುಂದೆ ಸಾಗಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್(Sachin Tendulkar) ಹೆಸರಿನಲ್ಲಿದೆ. ಸಚಿನ್ 15921 ರನ್ ಗಳಿಸಿದ್ದಾರೆ.