Site icon Vistara News

IND vs WI: ವಿಂಡೀಸ್​ ವಿರುದ್ಧ ದಾಖಲೆ ಬರೆದ ಕುಲ್​ದೀಪ್​ ಯಾದವ್​

kuldeep yadav file photo

ಬಾರ್ಬಡಾಸ್​: ಚೈನಾಮನ್‌ ಖ್ಯಾತಿಯ ಬೌಲರ್‌ ಕುಲ್​ದೀಪ್​ ಯಾದವ್​(kuldeep yadav) ಅವರು ವೆಸ್ಟ್​ ಇಂಡೀಸ್​(IND vs WI) ವಿರುದ್ಧದ ಮೊದಲ ಪಂದ್ಯದಲ್ಲಿ 4 ವಿಕೆಟ್​ ಕಿತ್ತು ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಮಾತ್ರವಲ್ಲದೆ, ವಿಂಡೀಸ್​ ನೆಲದಲ್ಲಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ.

ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್​ ಸ್ಟೇಡಿಯಂನಲ್ಲಿ(Kensington Oval, Bridgetown, Barbados) ಗುರುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕುಲ್​​ದೀಪ್​ ಶ್ರೇಷ್ಠ ಮಟ್ಟದ ಬೌಲಿಂಗ್​ ನಡೆಸಿ ವಿಂಡೀಸ್​ ಬೌಲರ್​ಗಳನ್ನು ಕಟ್ಟಿಹಾಕಿದರು. 3 ಓವರ್​ ನಡೆಸಿದ ಅವರು 2 ಮೇಡನ್​ ಸಹಿತ ಕೇವಲ 6 ರನ್​ ಬಿಟ್ಟುಕೊಟ್ಟು 4 ವಿಕೆಟ್​ ಕೆಡವಿದರು. ಇದೇ ವೇಳೆ ವಿಂಡೀಸ್​ ನೆಲದಲ್ಲಿ ಅತಿ ಕಡಿಮೆ ರನ್​ ನೀಡಿ ಹೆಚ್ಚು ವಿಕೆಟ್​ ಪಡೆದ ಮೊದಲ ಭಾರತೀಯ ಬೌಲರ್​ ಎಂಬ ಹಿರಿಮೆಗೆ ಪಾತ್ರರಾದರು. ಇದಕ್ಕೀ ಮುನ್ನ ಚಹಾಲ್ (17ಕ್ಕೆ 4), ಅಮಿತ್ ಮಿಶ್ರಾ (31ಕ್ಕೆ 4), ಭುವನೇಶ್ವರ್ ಕುಮಾರ್ (31ಕ್ಕೆ4), ಮತ್ತು ಮೊಹಮ್ಮದ್ ಶಮಿ (48ಕ್ಕೆ4) ವಿಕೆಟ್​ ಪಡೆದ ಸಾಧನೆ ಮಾಡಿದ್ದರು. ಆದರೆ ಕುಲ್​ದೀಪ್​ ಇವರೆಲ್ಲರಿಗಿಂದ ಕಡಿಮೆ ರನ್​ ನೀಡಿ 4 ವಿಕೆಟ್​ ಪಡೆದು ಅಗ್ರಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ IND vs WI: ಕಪಿಲ್ ದೇವ್​​ ಹೆಸರಲ್ಲಿದ್ದ 30 ವರ್ಷದ ದಾಖಲೆ ಮುರಿದ ರವೀಂದ್ರ ಜಡೇಜಾ

ಕುಲ್​ದೀಪ್​ ಈ ಸಾಧನೆ ಜತೆಗೆ ಮತ್ತೊಂದು ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆದಿದ್ದಾರೆ. ರವೀಂದ್ರ ಜಡೇಜಾ(ravindra jadeja) ಮತ್ತು ಕುಲ್​ದೀಪ್​ ಸೇರಿಕೊಂಡು ಒಟ್ಟು 7 ವಿಕೆಟ್ ಪಡೆಯುವುದರೊಂದಿಗೆ ಏಕದಿನದಲ್ಲಿ 7 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ಮೊದಲ ಎಡಗೈ ಸ್ಪಿನ್ನರ್ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಡೇಜಾ ಅವರು 3 ವಿಕೆಟ್​ ಪಡೆಯುವ ಮೂಲಕ ವಿಂಡೀಸ್​ ನೆಲದಲ್ಲಿ 30 ವರ್ಷಗಳ ಹಿಂದೆ ನಿರ್ಮಿಸಿದ್ದ ಕಪಿಲ್​ ದೇವ್​ ಅವರ ದಾಖಲೆಯೊಂದನ್ನು ಮುರಿದಿದ್ದಾರೆ.

ಸರಿಯಾಗಿ ಅವಕಾಶ ಸಿಗದೆ ತಂಡದಿಂದ ದೂರ ಉಳಿದಿದ್ದ ಕುಲ್​ದೀಪ್​ ಈ ಪಂದ್ಯದಲ್ಲಿ ಉತ್ಕೃಷ್ಟ ಮಟ್ಟದ ಬೌಲಿಂಗ್​ ನಡೆಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಸಿಕೊಂಡರು. ಈ ಮೂಲಕ ತಾನು ಕೂಡ ಏಕದಿನ ವಿಶ್ವಕಪ್​ ರೇಸ್​ನಲ್ಲಿದ್ದೇನೆ ಎಂಬ ಸ್ಪಷ್ಟ ಸಂದೇಶವೊಂದನ್ನು ನೀಡಿದ್ದಾರೆ. 2018ರಲ್ಲಿ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಕುಲ್​ದೀಪ್​ 25 ರನ್​ಗೆ 6 ವಿಕೆಟ್​ ಕಿತ್ತ ಸಾಧನೆ ಮಾಡಿದ್ದರು.

Exit mobile version