ಕ್ವೀನ್ಸ್ ಪಾರ್ಕ್ ಓವಲ್: ವೆಸ್ಟ್ ಇಂಡೀಸ್ ತಂಡ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವ ಮೂಲಕ ಆ ತಂಡದ ವಿರುದ್ಧದ ಏಕದಿನ ಪಂದ್ಯದ ಗೆಲುವಿನ ಸರಣಿಯನ್ನು ೬ಕ್ಕೆ ಏರಿಸಿಕೊಂಡಿದೆ.
ವಿಂಡೀಸ್ ಪ್ರವಾಸದಲ್ಲಿ ಭಾರತ ತಂಡದ ಹಿರಿಯ ಆಟಗಾರರು ಪಾಲ್ಗೊಂಡಿಲ್ಲ. ಆದಾಗ್ಯೂ ಮೊದಲ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ. ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಬೌಲಿಂಗ್‌ನಲ್ಲಿ ಎದುರಾಳಿ ತಂಡವನ್ನು ನಿಯಂತ್ರಣ ಮಾಡಲು ಪೇಚಾಡಬೇಕಾಯಿತು. ಆದರೆ, ಬೃಹತ್ ಮೊತ್ತವನ್ನು ಪೇರಿಸಿದ್ದ ಕಾರಣ ಭಾರತ ಜಯ ಗಳಿಸಲು ನೆರವಾಯಿತು.
ಟಾಸ್ ಸೋತ ಹೊರತಾಗಿಯೂ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಸ್ಪರ್ಧಾತ್ಮಕ ಮೊತ್ತವನ್ನೇ ಪೇರಿಸಿತು. ಹಂಗಾಮಿ ನಾಯಕ ಶಿಖರ್ ಧವನ್ ಹಾಗೂ ಶುಬ್ಮನ್ ಗಿಲ್ ಮೊದಲ ವಿಕೆಟ್‌ಗೆ ೧೧೯ ರನ್‌ಗಳ ಜತೆಯಾಟ ನೀಡಿದರು. ಆದರೆ, ಧವನ್ ೯೭ ರನ್ ಬಾರಿಸಿ ಔಟಾಗುವ ಮೂಲಕ ೩ ರನ್‌ಗಳಿಂದ ವೈಯಕ್ತಿಕ ೧೮ನೇ ಶತಕದಿಂದ ವಂಚಿತರಾದರು. ಅತ್ತ ಶುಬ್ಮನ್ ಗಿಲ್ (೬೪ ) ಅರ್ಧ ಶತಕ ಬಾರಿಸಿ ವಿಶ್ವಾಸ ಮೂಡಿಸಿದರೂ ಬೇಜವಾಬ್ದಾರಿತನದಿಂದ ರನ್‌ಔಟ್ ಆಗಿ ಟೀಕೆಗೆ ಒಳಗಾದರು.
ಇತ್ತಂಡಗಳ ನಡುವೆ ಎರಡನೇ ಪಂದ್ಯ ಭಾನುವಾರ ನಡೆಯಲಿದೆ.
ಇದನ್ನೂ ಓದಿ | India vs WI ODI| ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 3 ರನ್‌ಗಳ ರೋಚಕ ಗೆಲುವು