Site icon Vistara News

IND vs WI ODI | ಎರಡನೇ ಪಂದ್ಯದಲ್ಲೂ ಟಾಸ್ ಸೋತ ಶಿಖರ್‌ ಧವನ್‌, ಪ್ರಸಿದ್ಧ್‌ ಕೃಷ್ಣ ಔಟ್‌

IND vs WI

ಪೋರ್ಟ್‌ ಆಫ್ ಸ್ಪೇನ್‌: ವೆಸ್ಟ್ ಇಂಡೀಸ್‌ ಹಾಗೂ ಭಾರತ ತಂಡಗಳ ನಡುವಿನ ಏಕದಿನ ಪಂದ್ಯಗಳ ಸರಣಿಯ ಎರಡನೇ ಪಂದ್ಯ ಕ್ವಿನ್ಸ್‌ ಪಾರ್ಕ್‌ ಓವಲ್‌ನಲ್ಲಿ ನಡೆಯಿದ್ದು, ಟಾಸ್‌ ಗೆದ್ದಿರುವ ವೆಸ್ಟ್‌ ಇಂಡೀಸ್‌ ತಂಡ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ಮೊದಲ ಪಂದ್ಯದಲ್ಲಿ ಟಾಸ್‌ ಜಯಿಸಿದ್ದ ಆತಿಥೇಯ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ, ಆ ಪಂದ್ಯದಲ್ಲಿ ಭಾರತ ಬೃಹತ್‌ ಮೊತ್ತ ಪೇರಿಸಿ ಜಯ ಸಾಧಿಸಿತ್ತು. ಹೀಗಾಗಿ ಪಂದ್ಯದಲ್ಲಿ ಎಚ್ಚರಿಕೆ ವಹಿಸಿರುವ ವೆಸ್ಟ್‌ ಇಂಡೀಸ್‌ ತಂಡದ ನಾಯಕ ನಿಕೋಲಸ್‌ ಪೂರನ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು.

ಕ್ವೀನ್ಸ್‌ ಪಾರ್ಕ್‌ ಓವಲ್‌ ಸ್ಟೇಡಿಯಮ್‌ನಲ್ಲಿ ಪಂದ್ಯ ನಡೆಯಲಿದ್ದು, ಮತ್ತೊಂದು ಬಾರಿ ರನ್‌ ಹೊಳೆ ಹರಿಯುವ ಸಾಧ್ಯತೆಗಳಿವೆ. ಮೊದಲ ಪಂದ್ಯದಲ್ಲಿ ೩ ರನ್‌ಗಳಿಂದ ರೋಚಕ ಜಯ ಸಾಧಿಸಿರುವ ಭಾರತ ತಂಡ ಸರಣಿಯಲ್ಲಿ ೨-೧ ಮುನ್ನಡೆ ಪಡೆದುಕೊಂಡಿದ್ದು ಒಂದು ವೇಳೆ ಈ ಪಂದ್ಯವನ್ನೂ ಗೆದ್ದರೆ ಸರಣಿ ಕೈವಶವಾಗಲಿದೆ. ಈ ಸರಣಿ ಭಾರತದ ಕೈವಶವಾದರೆ ಐತಿಹಾಸಿಕ ದಾಖಲೆಯೊಂದು ಸೃಷ್ಟಿಯಾಗಲಿದ್ದು, ಸತತ ೧೨ ಏಕದಿನ ಸರಣಿಗಳನ್ನು ಗೆದ್ದ ತಂಡವೆಂಬ ಖ್ಯಾತಿ ಪಡೆಯಲಿದೆ.

ಆವೇಶ್ ಖಾನ್‌: ಕನ್ನಡಿಗ ಹಾಗೂ ವೇಗದ ಬೌಲರ್‌ ಆವೇಶ್‌ ಖಾನ್‌ ಎರಡನೇ ಪಂದ್ಯದಲ್ಲಿ ಚಾನ್ಸ್‌ ಪಡೆದಿಲ್ಲ. ಅವರ ಬದಲಿಗೆ ಆವೇಶ್‌ ಖಾನ್‌ ಅವಕಾಶ ಪಡೆದುಕೊಂಡಿದ್ದಾರೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡ ಟಿ೨೦ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅವರು ಇದೀಗ ಏಕದಿನ ಮಾದರಿಗೂ ಪ್ರವೇಶ ಪಡೆದುಕೊಂಡಿದ್ದಾರೆ.

ತಂಡಗಳು

ಭಾರತ: ಶಿಖರ್‌ ಧವನ್‌ (ನಾಯಕ), ಶುಬ್ಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌, ದೀಪಕ್‌ ಹೂಡ, ಅಕ್ಷರ್‌ ಪಟೇಲ್‌, ಶಾರ್ದುಲ್‌ ಠಾಕೂರ್‌, ಮೊಹಮ್ಮದ್‌ ಸಿರಾಜ್‌, ಯಜ್ವೇಂದ್ರ ಚಹಲ್‌ , ಆವೇಶ್‌ ಖಾನ್‌.

ವೆಸ್ಟ್‌ ಇಂಡೀಸ್‌
ಶಾಯ್‌ ಹೋಪ್‌, ಬ್ರೆಂಡನ್‌ ಕಿಂಗ್‌, ಶಮ್ರಾ ಬ್ರೂಕ್ಸ್‌, ಕೈಲ್‌ ಮೇಯರ್ಸ್‌, ನಿಕೋಲಸ್‌ ಪೂರನ್‌, ರೋವ್ಮನ್‌ ಪೊವೆಲ್‌, ರೊಮಾರಿಯೊ ಶೆಫರ್ಡ್‌, ಅಕೆಲ್‌ ಹೊಸೇನ್‌, ಗುಡ್ಕೇಶ್ ಮೋತಿ, ಅಲ್ಜಾರಿ ಜೋಸೆಫ್‌, ಜೇಡೆನ್‌ ಸೀಲ್ಸ್.

ಪಂದ್ಯದ ತಾಣ : ಕ್ವೀನ್ಸ್‌ ಪಾರ್ಕ್‌ ಓವಲ್‌, ಪೋರ್ಟ್‌ ಆಫ್‌ ಸ್ಪೇನ್‌

ಸಮಯ : ರಾತ್ರಿ ೭ರಿಂದ

ಇದನ್ನೂ ಓದಿ | India vs WI ODI| ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತಕ್ಕೆ 3 ರನ್‌ಗಳ ರೋಚಕ ಗೆಲುವು

Exit mobile version