ಪೋರ್ಟ್ ಆಫ್ ಸ್ಪೇನ್: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಆರಂಭಗೊಂಡಿವೆ. ಟಾಸ್ ಗೆದ್ದಿರುವ ಭಾರತ ತಂಡದ ನಾಯಕ ಶಿಖರ್ ಧವನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತದ ಆಡುವ ೧೧ರ ಬಳಗದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಬೌಲರ್ ಪ್ರಸಿದ್ಧ್ ಕೃಷ್ಣ ಮರುಎಂಟ್ರಿ ಪಡೆದುಕೊಂಡಿದ್ದಾರೆ. ಹಿಂದಿನ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿರುವ ಹೊರತಾಗಿಯೂ ಮಿತಿಮೀರಿ ರನ್ ಬಿಟ್ಟುಕೊಟ್ಟಿರುವ ಆವೇಶ್ ಖಾನ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ಹಿಂದಿನೆರಡು ಪಂದ್ಯ ನಡೆದಿರುವ ಪೋರ್ಟ್ ಆಫ್ ಸ್ಪೇನ್‌ನಲ್ಲಿಯೇ ಪಂದ್ಯ ಆಯೋಜನೆಗೊಂಡಿದೆ. ಭಾರತ ತಂಡ ಮೊದಲೆರಡು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿರುವ ಕಾರಣ ಔಪಚಾರಿಕ ಪಂದ್ಯವಾಗಿದೆ. ಆದರೂ, ಈ ಹಣಾಹಣಿಯಲ್ಲೂ ಜಯ ಸಾಧಿಸಿ ಸರಣಿ ಕ್ಲೀನ್ ಸ್ವೀಪ್ ಮಾಡುವುದು ಭಾರತದ ಗುರಿಯಾಗಿದೆ.
ತಂಡಗಳು:
ಭಾರತ ಅಡುವ ೧೧ರ ಬಳಗ
ಶಿಖರ್ ಧವನ್ (ನಾಯಕ), ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಅಕ್ಷರ್ ಪಟೇಲ್, ಶಾರ್ದುಲ್ ಠಾಕೂರ್, ಮೊಹಮ್ಮದ್ ಸಿರಾಜ್,ಯಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ.
ವೆಸ್ಟ್ ಇಂಡೀಸ್ ಆಡುವ ೧೧ರ ಬಳಗ
ಶಾಯ್ ಹೋಪ್(ವಿಕೆಟ್ ಕೀಪರ್), ಬ್ರೆಂಡನ್ ಕಿಂಗ್, ಕೆಸಿ ಕಾರ್ಟಿ, ಶಮ್ರ್ರಾ ಬ್ರೂಕ್ಸ್, ನಿಕೋಲಸ್ ಪೂರನ್(ನಾಯಕ), ಕೈಲ್ ಮೇಯರ್ಸ್, ಜೇಸನ್ ಹೋಲ್ಡರ್, ಕೀಮೋ ಪಾಲ್, ಅಕೇಲ್ ಹೊಸೈನ್, ಹೇಡನ್ ವಾಲ್ಷ್, ಜೇಡನ್ ಸೀಲ್ಸ್