Site icon Vistara News

IND vs WI ODI: ಭಾರತ-ವಿಂಡೀಸ್​ ಏಕದಿನ ಪಂದ್ಯದ ಪಿಚ್​ ರಿಪೋರ್ಟ್​,ಹವಾಮಾನ ವರದಿ, ಸಂಭಾವ್ಯ ತಂಡ

Kensington Oval, Bridgetown, Barbados

ಬಾರ್ಬಡೋಸ್​: ಟೆಸ್ಟ್​ ಮುಗಿದ ಬೆನ್ನಲ್ಲೇ ಭಾರತ ಮತ್ತು ವಿಂಡೀಸ್(IND vs WI ODI)​ ಸೀಮಿತ ಓವರ್​ಗಳ ಕ್ರಿಕೆಟ್​ ಸರಣಿಯತ್ತ ಮುನ್ನಡೆದಿದೆ. ಉಭಯ ತಂಡಗಳ ನಡುವಿನ ಮೂರು ಏಕದಿನ ಸರಣಿಯ ಮೊದಲ ಪಂದ್ಯ ಗುರುವಾರ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್​ನಲ್ಲಿ ಅಂಗಳದಲ್ಲಿ ನಡೆಯಲಿದೆ. ಈ ಪಂದ್ಯದ ಪಿಚ್​ ರಿಪೋರ್ಟ್​, ಹವಾಮಾನ ವರದಿ ಮತ್ತು ಸಂಭಾವ್ಯ ತಂಡಗಳ ಮಾಹಿತಿ ಇಂತಿದೆ.

ಪಿಚ್​ ರಿಪೋರ್ಟ್​

ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್​ ಸ್ಟೇಡಿಯಂನ(Kensington Oval, Bridgetown, Barbados) ಪಿಚ್​ ವೇಗಿಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಇದು ಬೌನ್ಸಿ ಪಿಚ್​ ಆಗಿದ್ದು ಇಲ್ಲಿ ದೊಡ್ಡ ಮೊತ್ತ ದಾಖಲಿಸುವುದು ಕಷ್ಟಕರ. ಅದರಲ್ಲೂ ಮೊದಲು ಬ್ಯಾಟಿಂಗ್​ ನಡೆಸುವ ತಂಡಕ್ಕೆ ಇಲ್ಲಿ ರನ್​ಗಳಿಸುವುದು ಅಷ್ಟು ಸುಲಭವಲ್ಲ. ಇಲ್ಲಿ ಇದುವರೆಗೆ 49 ಏಕದಿನ ಪಂದ್ಯಗಳು ನಡೆದಿವೆ. ಇದರಲ್ಲಿ 25 ಬಾರಿ ಚೇಸಿಂಗ್​ ನಡೆಸಿದ ತಂಡ ಮೇಲುಗೈ ಸಾಧಿಸಿದೆ. 364 ರನ್​ ಇಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ. ಇಂಗ್ಲೆಂಡ್​ ತಂಡ ಈ ಮೊತ್ತವನ್ನು ಬಾರಿಸಿತ್ತು. ಇಲ್ಲಿನ ಎವರೇಜ್​ ರನ್​ ಗಳಿಕೆ 229. ಟಾಸ್​ ಗೆದ್ದ ತಂಡ ಬೌಲಿಂಗ್​ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಬೌನ್ಸಿ ಪಿಚ್​ ಆದ ಕಾರಣ ಉಭಯ ತಂಡಗಳಲ್ಲಿಯೂ ಸ್ಪಿನ್​ ಬದಲು ಹೆಚ್ಚುವರಿಯಾಗಿ ವೇಗಿಗಳು ಕಾಣಿಸಿಕೊಂಡರು ಅಚ್ಚರಿಯಿಲ್ಲ.

ಹವಾಮಾನ ವರದಿ

ವೆಸ್ಟ್​ ಇಂಡೀಸ್​ನ ಕೆಲ ಭಾಗದಲ್ಲಿ ಮಾನ್ಸೂನ್​ ಆರಂಭವಾಗಿದೆ. ಪೋರ್ಟ್​ ಆಫ್​ ಸ್ಪೇನ್​ನಲ್ಲಿ ನಡೆದ ಅಂತಿಮ ಟೆಸ್ಟ್​ ಪಂದ್ಯದ ನಾಲ್ಕನೇ ಮತ್ತು ಕೊನೆಯ ದಿನ ಮಳೆ ಅಡ್ಡಿಪಡಿಸಿತ್ತು. ಅದರಲ್ಲೂ 5ನೇ ಮಳೆ ಆಟಕ್ಕೆ ಅನುವು ಮಾಡಿ ಕೊಡಲೇ ಇಲ್ಲ. ಹೀಗಾಗಿ ಪಂದ್ಯವನ್ನು ಡ್ರಾದಲ್ಲಿ ಮುಗಿಸಲಾಗಿತ್ತು. ಇದೀಗ ಗುರುವಾರ ನಡೆಯುವ ಏಕದಿನ ಪಂದ್ಯಕ್ಕೂ ಶೇ.7 ರಷ್ಟು ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸಂಭಾವ್ಯ ತಂಡಗಳು

ವೆಸ್ಟ್​ ಇಂಡೀಸ್​: ಶೈ ಹೋಪ್‌ (ನಾಯಕ), ರೋವ್‌ಮನ್ ಪೊವೆಲ್ (ಉಪನಾಯಕ),ಕೈಲ್ ಮೇಯರ್ಸ್, ಅಲಿಕ್ ಅಥಾನಾಜೆ, ಶಿಮ್ರಾನ್‌ ಹೆಟ್‌ಮೇರ್‌, ಅಲ್ಜಾರಿ ಜೋಸೆಫ್, ರೊಮಾರಿಯೋ ಶೆಫರ್ಡ್, ಕೆವಿನ್​ ಸಿಂಕ್ಲರ್​, ಒಶಾನೆ ಥೋಮಸ್, ಬ್ರ್ಯಾಂಡನ್ ಕಿಂಗ್.

ಇದನ್ನೂ ಓದಿ Ind vs wi : ಟೆಸ್ಟ್​ ಸರಣಿಯಲ್ಲಿ ಮ್ಯಾನ್​ ಆಫ್​ ದಿ ಸೀರಿಸ್ ಪ್ರಶಸ್ತಿಯೇ ಕೊಟ್ಟಿಲ್ಲ!

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ,ಯಜುವೇಂದ್ರ ಚಾಹಲ್ ಜೈದೇವ್​ ಉನಾದ್ಕತ್​. ಮೊಹಮ್ಮದ್​ ಸಿರಾಜ್, ಉಮ್ರಾನ್ ಮಲಿಕ್/ಶಾರ್ದೂಲ್ ಠಾಕೂರ್.

Exit mobile version