ಮುಂಬಯಿ: ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ. ಜಿಯೋ ಸಿನೆಮಾದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಸರಣಿಯ ಲೈವ್ ಸ್ಟ್ರೀಮಿಂಗ್ ಉಚಿತವಾಗಿ ಲಭಿಸಲಿದೆ. ಫ್ಯಾನ್ ಕೋಡ್ ವೆಸ್ಟ್ ಇಂಡೀಸ್ ಈ ಸರಣಿಯ ನೇರ ಪ್ರಸಾರದ ಹಕ್ಕುಗಳನ್ನು ಹೊಂದಿದೆ. ಅದರ ಮೂಲ ಕಂಪನಿಯಾದ ಡ್ರೀಮ್ ಸ್ಪೋರ್ಟ್ಸ್ ವಯಾಕಾಮ್ 18ನೊಂದಿಗೆ ಹಂಚಿಕೊಂಡಿದೆ. ಹೀಗಾಗಿ ಜುಲೈ 12ರಿಂದ ಆಗಸ್ಟ್ 13ರವರೆಗಿನ ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸದ ಎಲ್ಲ ಪಂದ್ಯಗಳು ಜಿಯೊದಲ್ಲಿ ನೇರ ಪ್ರಸಾರವಾಗಲಿದೆ.
ಐಪಿಎಲ್ 2023ರ ಬಳಿಕ ಜಿಯೊ ಸಿನಿಮಾ ನಿಧಾನವಾಗಿ ತನ್ನ ಚಂದಾದಾರರನ್ನು ಕಳೆದುಕೊಳ್ಳುತ್ತಿದೆ. ವೆಸ್ಟ್ ಇಂಡೀಸ್ ಸರಣಿಯ ಪ್ರಸಾರದಿಂದಾಗಿ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಹೇಳಲಾಗಿದೆ.
“ನಾವು ಸರಣಿಯು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಲಭಿಸುವಂತೆ ಮಾಡುತ್ತಿದ್ದೇವೆ. ಪಂದ್ಯಗಳು ಫ್ಯಾನ್ ಕೋಡ್ನಲ್ಲಿ ಲಭ್ಯವಿದ್ದರೂ, ಲೀನಿಯರ್ ಮತ್ತು ಡಿಜಿಟಲ್ ಎರಡೂ ವೇದಿಕೆಯಲ್ಲಿ ಹಂಚಿಕೊಳ್ಳಲಿದ್ದೇವೆ ಎಂದು ಜಿಯೊ ಸಿನಿಮಾದ ಮೂಲಗಳು ತಿಳಿಸಿವೆ.
ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸದ ಸರಣಿಯನ್ನು ಡಿಡಿ ಸ್ಪೋರ್ಟ್ಸ್ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಸರಣಿಗಾಗಿ ಟಿವಿ ಪ್ರಸಾರಕ್ಕಾಗಿ ಡ್ರೀಮ್ ಸ್ಪೋರ್ಟ್ಸ್ನೊಂದಿಗೆ ಜಿಯೊ ಸಿನಿಮಾ ಮಾತುಕತೆ ನಡೆಸುತ್ತಿದೆ. ಕಳೆದ ಬಾರಿ ಭಾರತ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಾಗ ಡಿಡಿ ಸ್ಪೋರ್ಟ್ಸ್ನಲ್ಲಿ ಪಂದ್ಯಗಳ ನೇರ ಪ್ರಸಾರ ಮಾಡಲಾಗಿತ್ತು.
ಇದನ್ನೂ ಓದಿ : ತಾಯಿ, ಮಗಳ ಜೀವ ತೆಗೆಯಿತು ಐಪಿಎಲ್ ಲಕ್ನೊ ತಂಡದ ಹೋರ್ಡಿಂಗ್
ಅಫ್ಘಾನಿಸ್ತಾನ ಸರಣಿ ಮುಂದೂಡಲ್ಪಟ್ಟಿರುವುದರಿಂದ, ರೋಹಿತ್ ಶರ್ಮಾ ಬಳಗವು ವಿಂಡೀಸ್ ಪ್ರವಾಸಕ್ಕೆ ಮುಂಚಿತವಾಗಿ ಒಂದು ತಿಂಗಳ ವಿಶ್ರಾಂತಿ ಪಡೆಯಲಿದ್ದಾರೆ. ಜುಲೈ 12ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹೇಳಿದೆ. ಈ ಪ್ರವಾಸವು ಅಮೆರಿಕದ ಫ್ಲೋರಿಡಾದಲ್ಲಿ ಕೊನೆಗೊಳ್ಳಲಿದ್ದು, ಅಲ್ಲಿ ಎರಡು ಟಿ20 ಪಂದ್ಯಗಳು ನಡೆಯಲಿವೆ.
ತಾತ್ಕಾಲಿಕ ವೇಳಾಪಟ್ಟಿ
- ಜುಲೈ 12-16: ಡೊಮಿನಿಕಾದಲ್ಲಿ ಮೊದಲ ಟೆಸ್ಟ್
- ಜುಲೈ 20-24: ಟ್ರಿನಿಡಾಡ್ನಲ್ಲಿ ಎರಡನೇ ಟೆಸ್ಟ್
- ಜುಲೈ 27: ಮೊದಲ ಏಕದಿನ ಪಂದ್ಯ: ಬಾರ್ಬಡೋಸ್
- ಜುಲೈ 29: 2ನೇ ಏಕದಿನ ಪಂದ್ಯ: ಬಾರ್ಬಡೋಸ್
- ಆಗಸ್ಟ್ 1: 3ನೇ ಏಕದಿನ ಪಂದ್ಯ, ಟ್ರಿನಿಡಾಡ್
- ಆಗಸ್ಟ್ 4: ಮೊದಲ ಟಿ20 ಪಂದ್ಯ: ಟ್ರಿನಿಡಾಡ್
- ಆಗಸ್ಟ್ 6: 2ನೇ ಟಿ20 ಪಂದ್ಯ: ಗಯಾನಾ
- ಆಗಸ್ಟ್ 8: ಗಯಾನಾದಲ್ಲಿ 3ನೇ ಟಿ20 ಪಂದ್ಯ
- ಆಗಸ್ಟ್ 12: ಫ್ಲೋರಿಡಾದಲ್ಲಿ ನಾಲ್ಕನೇ ಟಿ20 ಪಂದ್ಯ
- ಆಗಸ್ಟ್ 13: ಫ್ಲೋರಿಡಾದಲ್ಲಿ 5ನೇ ಟಿ20 ಪಂದ್ಯ