ರೊಸೇಯೂ (ಡೊಮಿನಿಕಾ): ವೆಸ್ಟ್ ಇಂಡೀಸ್(IND vs WI) ಮತ್ತು ಭಾರತ ನಡುವಣ ಮೊದಲ ಟೆಸ್ಟ್ ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಟೆಸ್ಟ್ ಸರಣಿಯಲ್ಲಿ ಆರ್. ಅಶ್ವಿನ್(Ravichandran Ashwin) ಅವರು ಮೂರು ವಿಕೆಟ್(wicket records) ಕಬಳಿಸಿದರೆ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್‌ಗಳ ಸಾಲಿಗೆ ಸೇರುವುದರ ಜತೆಗೆ, 700 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದ ಮೂರನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಎಲ್ಲ ಮೂರು ಸ್ವರೂಪಗಳಲ್ಲಿ 270 ಪಂದ್ಯಗಳನ್ನು ಆಡಿರುವ ಅವರು 700 ವಿಕೆಟ್‌ಗಳ ಮೈಲಿಗಲ್ಲು ತಲುಪಲು 3 ವಿಕೆಟ್‌ಗಳ ಅಗತ್ಯವಿದೆ. ಅನಿಲ್ ಕುಂಬ್ಳೆ (953) ಮತ್ತು ಹರ್ಭಜನ್ ಸಿಂಗ್ (707) ಮಾತ್ರ 700ಕ್ಕೂ ಹೆಚ್ಚು ವಿಕೆಟ್ ಕಬಳಿಸಿದ್ದಾರೆ.
2010 ರಲ್ಲಿ ಕ್ರಿಕೆಟ್ ವೃತ್ತಿಜೀವನ ಆರಂಭಿಸಿದ ಅಶ್ವಿನ್ ಸದ್ಯ 25.93 ರ ಸರಾಸರಿಯಲ್ಲಿ ಮತ್ತು 3.37 ರ ಎಕಾನಮಿ ರೇಟ್‌ನಲ್ಲಿ ಒಟ್ಟು 697 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ನಂ.1 ಬೌಲರ್ ಆಗಿರುವ ಅವರು ಇದೀಗ ವಿಂಡೀಸ್ ವಿರುದ್ಧದ ಸರಣಿಯಲ್ಲಿ ಹೊಸ ಇತಿಹಾಸ ಬರೆಯಲು ಕಾತರದಿಂದ ಕಾಯುತ್ತಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಅವರನ್ನು ಆಡುವ ಬಳಗದಿಂದ ಕೈಬಿಡಲಾಗಿತ್ತು. ಆದರೆ ವಿಂಡೀಸ್ ವಿರುದ್ಧ ಅವರು ಆಡುವ ಎಲ್ಲ ಸಾಧ್ಯತೆ ಇದೆ.
ಅಶ್ವಿನ್ ಇದುವರೆಗೆ ವೆಸ್ಟ್ ಇಂಡೀಸ್ ವಿರುದ್ಧ ಕೇವಲ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 21.85 ಸರಾಸರಿಯಲ್ಲಿ 60 ವಿಕೆಟ್ ಪಡೆದಿದ್ದಾರೆ. ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅವರಿಗೆ ಆರನೇ ಸ್ಥಾನ. ಶ್ರೀನಿವಾಸ್ ವೆಂಕಟರಾಘವನ್ (68), ಚಂದ್ರಶೇಖರ್ (65) ಮತ್ತು ಬಿಷನ್ ಸಿಂಗ್ ಬೇಡಿ (62) ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದ್ದಾರೆ. ಬುಧವಾರ ಆರಂಭವಾಗಲಿರುವ ಮೊದಲ ಪಂದ್ಯದಲ್ಲಿ ರವೀಂದ್ರ ಜಡೇಜ ಜತೆಗೆ ಆರ್. ಅಶ್ವಿನ್ ಅವರನ್ನೂ ಪರಿಗಣಿಸುವುದರಲ್ಲಿ ಅನುಮಾನವಿಲ್ಲ. ಆಸ್ಟ್ರೇಲಿಯ ಎದುರಿನ ವಿಶ್ವಕಪ್ ಟೆಸ್ಟ್ ಸೋಲಿಗೆ ಅಶ್ವಿನ್ ಅವರನ್ನು ಕೈಬಿಟ್ಟದ್ದೂ ಒಂದು ಕಾರಣ ಎಂದು ವಿಶ್ಲೇಷಿಸಲಾಗಿದೆ. ಹೀಗಾಗಿ ಅವರು ಸ್ಥಾನ ಪಡೆಯುವುದು ಖಚಿತ.
Lights 💡
— BCCI (@BCCI) July 11, 2023
Camera 📸
Action ⏳
A sneak peek of #TeamIndia's headshots session as they get ready for some gripping red-ball cricket 😎#WIvIND pic.twitter.com/YVbbLAE5Ea
ಇದನ್ನೂ ಓದಿ IND vs WI: ಬಲಿಷ್ಠ ಭಾರತ ತಂಡಕ್ಕೆ ಸಡ್ಡು ಹೊಡೆದಿತೇ ದುರ್ಬಲ ವಿಂಡೀಸ್!
ಸಂಭಾವ್ಯ ತಂಡಗಳು
ವೆಸ್ಟ್ ಇಂಡೀಸ್ ತಂಡ: ಕ್ರೇಗ್ ಬ್ರಾತ್‌ವೇಟ್ (ನಾಯಕ), ಜರ್ಮೈನ್ ಬ್ಲ್ಯಾಕ್‌ವುಡ್ (ಉಪನಾಯಕ), ತೇಜನಾರಾಯಣ ಚಂದ್ರಪಾಲ್, ರಹಕೀಮ್ ಕಾರ್ನ್‌ವಾಲ್, ಜೋಶುವ ಡಿ ಸಿಲ್ವಾ, ಶಾನನ್ ಗೇಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕಿರ್ಕ್ ಮೆಕೆಂಜಿ, ಕೇಮರ್ ರೂಚ್, ಜೊಮೆಲ್ ವ್ಯಾರಿಕನ್.
ಭಾರತ: ರೋಹಿತ್ ಶರ್ಮ(ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ (ಉಪ ನಾಯಕ), ಕೆಎಸ್ ಭರತ್ (ವಿ.ಕೀ)/ ಇಶಾನ್ ಕಿಶನ್ (ವಿ.ಕೀ), ಆರ್ ಅಶ್ವಿನ್, ಆರ್ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ ಸಿರಾಜ್, ಮುಖೇಶ್ ಕುಮಾರ್/ ಜಯದೇವ್ ಉನಾದ್ಕತ್.